ಕಾಮಿಡಿ ನಟ ಕೋಮಲ್ ಕುಮಾರ್ ಈಗ ‘ತೆನಾಲಿ DA LLB’ ಸಿನಿಮಾದಲ್ಲಿ ಲಾಯರ್ ಪಾತ್ರ ಮಾಡುತ್ತಿದ್ದಾರೆ.
ಇತ್ತೀಚೆಗೆ ಸಿನಿಮಾದ ಪೋಸ್ಟರ್ ಬಿಡುಗಡೆ ಮಾಡಲಾಯಿತು. ಪೋಸ್ಟರ್ನಲ್ಲಿ ಕೋಮಲ್ ಅವರು ಕಪ್ಪು ಕೋಟು ಧರಿಸಿ, ಲಾಯರ್ ಗೆಟಪ್ನಲ್ಲಿ ಪೋಸ್ ನೀಡಿದ್ದಾರೆ.
ನಿಜ ಜೀವನದಲ್ಲಿ ಎಲ್ಎಲ್ಬಿ ಓದಿರುವ ಕೋಮಲ್ ಅವರು ಲಾಯರ್ ಪಾತ್ರ ಮಾಡುತ್ತಿರುವುದು ಇದೇ ಮೊದಲು. ‘ಮರೀಚಿ’ ಸಿನಿಮಾ ಖ್ಯಾತಿಯ ನಿರ್ದೇಶಕ ಸಿದ್ದ್ರುವ್ ಸಿದ್ದು ಅವರು ಚಿತ್ರಕ್ಕೆ ಆ್ಯಕ್ಷನ್-ಕಟ್ ಹೇಳಲಿದ್ದಾರೆ. ಜೊತೆಗೆ ಅವರು ಕೋಮಲ್ ಅವರಿಗಾಗಿ ವಿಭಿನ್ನವಾದ ಕಥೆ ಬರೆದಿದ್ದಾರೆ.
ಚಿತ್ರಕ್ಕೆ ಸಿದ್ದ್ರುವ್ ಸಿದ್ದು, ಸಂತೋಷ್ ಮಾಯಪ್ಪ, ರೇಣುಕಾ ಪ್ರಸಾದ್, ಪ್ರದೀಪ್ ಕುಮಾರ್ ಮಹಾಲಿಂಗಯ್ಯ ಬಂಡವಾಳ ಹೂಡುತ್ತಿದ್ದಾರೆ. ರಿತ್ವಿಕ್ ಮುರಳಿಧರ್ ಅವರ ಸಂಗೀತ ನಿರ್ದೇಶನ, ಉದಯ್ ಲೀಲಾ ಅವರ ಛಾಯಾಗ್ರಹಣ ಸಿನಿಮಾಗೆ ಇದೆ.
ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಕೋಮಲ್ ಕುಮಾರ್ ಅವರ ‘ತೆನಾಲಿ DA LLB’ ಸಿನಿಮಾ, ಕನ್ನಡ ಚಿತ್ರರಂಗದಲ್ಲಿ ಹೊಸ ನಿರೀಕ್ಷೆ ಹುಟ್ಟಿಸಿದೆ. ಈ ಚಿತ್ರವು ಪ್ರೇಕ್ಷಕರನ್ನು ಎಷ್ಟು ಮಟ್ಟಿಗೆ ಮನರಂಜಿಸುತ್ತದೆ ಎಂಬುದನ್ನು ಕಾದು ನೋಡಬೇಕಿದೆ. ಕಳೆದ ವರ್ಷ ಕೋಮಲ್ ಅವರು ಕೋಣ ಚಿತ್ರದಲ್ಲಿ ನಟಿಸಿದ್ದರು.





Be the first to comment