‘ಬಿಗ್ ಬಾಸ್ ಕನ್ನಡ 12’ ವಿನ್ನರ್ ಗಿಲ್ಲಿ ನಟ

ತೀವ್ರ ಕುತೂಹಲ ಕೆರಳಿಸಿದ್ದ ಈ ಬಾರಿಯ ‘ಬಿಗ್ ಬಾಸ್ ಕನ್ನಡ 12’ನೇ ಸೀಸನ್‌ನಲ್ಲಿ ಗಿಲ್ಲಿ ನಟ ಅವರು ವಿಜೇತರಾಗಿ ಹೊರಹೊಮ್ಮಿದ್ದಾರೆ.

ಕರಾವಳಿ ಮೂಲದ, ಮುಂಬೈಯಲ್ಲಿ ವಾಸವಿರುವ ರಕ್ಷಿತಾ ಶೆಟ್ಟಿ ಅವರು ರನ್ನರ್‌ಅಪ್ ಪ್ರಶಸ್ತಿಗೆ ಪಾತ್ರರಾದರೆ, ಕನ್ನಡಪರ ಹೋರಾಟದಲ್ಲಿ ಗುರುತಿಸಿಕೊಂಡಿದ್ದ ಅಶ್ವಿನಿ ಗೌಡ ಎರಡನೇ ರನ್ನರ್‌ಅಪ್ ಆದರು.

ಈ ಸೀಸನ್​​ನಲ್ಲಿ ಒಟ್ಟು 24 ಸ್ಪರ್ಧಿಗಳು ಬಿಗ್ ಬಾಸ್ ಮನೆಗೆ ಹೋಗಿದ್ದರು. ಅಂತಿಮವಾಗಿ  ಅಶ್ವಿನಿ ಗೌಡ, ರಕ್ಷಿತಾ ಶೆಟ್ಟಿ, ಮ್ಯೂಟೆಂಟ್ ರಘು, ಕಾವ್ಯಾ ಶೈವ, ಧನುಷ್ ಹಾಗೂ ಗಿಲ್ಲಿ ನಟ ಫಿನಾಲೆ ತಲುಪಿದ್ದರು.

ಬಿಗ್‌‌ಬಾಸ್‌  ಗೆದ್ದ ಗಿಲ್ಲಿಗೆ 50 ಲಕ್ಷ ರೂ.ಕ್ಯಾಶ್‌ ಪ್ರೈಸ್‌ ಜೊತೆ  ಮಾರುತಿ ಸುಜುಕಿ ವಿಕ್ಟೋರಿಸ್‌ ಕಾರು  ಉಡುಗೊರೆಯಾಗಿ ನೀಡಲಾಗಿದೆ. ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ದಡದಪುರ ಗ್ರಾಮದ ರೈತ ಕುಟುಂಬದಿಂದ ಬಂದಿರುವ ಗಿಲ್ಲಿ ನಟ, ಹಾಸ್ಯ ಕಲಾವಿದನಾಗಿ ಜನಮನ ಗೆದ್ದಿದ್ದಾರೆ. ಅವರು 10ನೇ ತರಗತಿ ಪೂರ್ಣಗೊಳಿಸಿದ ಬಳಿಕ ಐಟಿಐ ಕೋರ್ಸ್ ಮಾಡಿದ್ದಾರೆ.

ಗೆಲುವಿನ ಬಳಿಕ ಗಿಲ್ಲಿ, ”ತುಂಬಾ ಖುಷಿ ಆಗಿದೆ. ಇನ್ನೂ ನಂಬೋಕೆ ಆಗ್ತಿಲ್ಲ.  50 ಲಕ್ಷ ಬಹುಮಾನದಲ್ಲಿ ಯಾವುದಾದ್ರೂ ಜಮೀನು ತೆಗೆದುಕೊಂಡು ಕೃಷಿ ಮಾಡಬೇಕು ಅನ್ನೋ ಆಸೆ ಇದೆ. ಕಾವ್ಯ ಜೊತೆ ಮದುವೆ ಎಲ್ಲವೂ ಸುಳ್ಳು. ಎಂಟ್ರಿ ಸಮಯದಲ್ಲಿ ಜಂಟಿಯಾಗಿ ಹೋದ್ವಿ ಅಷ್ಟೇ” ಎಂದು   ಹೇಳಿದರು.

ರನ್ನರ್‌ಅಪ್  ರಕ್ಷಿತಾ ಶೆಟ್ಟಿಗೆ 25 ಲಕ್ಷ ರೂ., ಎರಡನೇ ರನ್ನರ್ ಅಪ್ ಆದ ಅಶ್ವಿನಿ ಅವರಿಗೆ 14 ಲಕ್ಷ ರೂ.,  ಹಾಗೂ ಬಿಗ್​​ಬಾಸ್ ಫಿನಾಲೆಯಿಂದ ನಾಲ್ಕನೇ ಸ್ಪರ್ಧಿಯಾಗಿ ಹೊರಗೆ ಹೋದ ಕಾವ್ಯಾ ಅವರಿಗೆ 10 ಲಕ್ಷ ರೂ.ಬಹುಮಾನ ನೀಡಲಾಗಿದೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!