ಝೈದ್ ಖಾನ್, ಮಲೈಕಾ ವಸುಪಾಲ್ ನಟಿಸಿರುವ ‘ಕಲ್ಟ್’ ಸಿನಿಮಾದ ಟ್ರೈಲರ್ ಬಿಡುಗಡೆ ಆಗಿದೆ.
ಝೈದ್ ಖಾನ್ ಮಾಧವ ಪಾತ್ರದಲ್ಲಿ ನಟಿಸಿದ್ದರೆ, ಮಲೈಕಾ ಗೀತಾ ಪಾತ್ರದಲ್ಲಿ ನಟಿಸಿದ್ದಾರೆ. ‘ಕಲ್ಟ್’ ಟ್ರೈಲರ್ ನೋಡಿದರೆ ಇದು ಭಗ್ನ ಪ್ರೇಮಿಯ ಕತೆ ಎಂಬುದು ತಿಳಿಯುತ್ತದೆ. ಪ್ರೀತಿಯನ್ನು ಕಳೆದುಕೊಂಡು ಮದ್ಯದ ದಾಸನಾದ ಪಾತ್ರದಲ್ಲಿ ಝೈದ್ ಖಾನ್ ನಟಿಸಿದ್ದಾರೆ. ಸಿನಿಮಾದಲ್ಲಿ ಪ್ರೇಮಿಯಾಗಿ, ಭಗ್ನ ಪ್ರೇಮಿಯಾಗಿ ಹೀಗೆ ಎರಡು ಶೇಡ್ನಲ್ಲಿ ಝೈದ್ ಖಾನ್ ಕಾಣಿಸಿಕೊಂಡಿದ್ದಾರೆ.
ರಚಿತಾ ರಾಮ್ ಅವರ ಪಾತ್ರ ಬೋಲ್ಡ್ ಜೊತೆಗೆ ಪ್ರಬುದ್ಧತೆ ಒಳಗೊಂಡಿರುವುದು ಟ್ರೈಲರ್ನಿಂದ ತಿಳಿದು ಬರುತ್ತಿದೆ.
ಸಿನಿಮಾದ ಟ್ರೈಲರ್ ಮೇಕಿಂಗ್, ಆಕ್ಷನ್ ದೃಶ್ಯಗಳು ಮತ್ತು ಭಾವುಕ ದೃಶ್ಯಗಳಿಂದ ಗಮನ ಸೆಳೆಯುತ್ತಿದೆ. ಕೆಲವು ಆಕ್ಷನ್ ಸೀನ್ಗಳನ್ನು ಟ್ರೈಲರ್ನಲ್ಲಿ ತೋರಿಸಲಾಗಿದೆ. ಒಟ್ಟಾರೆ ‘ಕಲ್ಟ್’ ಸಿನಿಮಾದ ಟ್ರೈಲರ್ ಕುತೂಹಲ ಮೂಡಿಸುವಂತಿದೆ.





Be the first to comment