‘ಟಾಕ್ಸಿಕ್’ ಟೀಸರ್ ನ ಇಂಟಿಮೇಟ್ ಕಾರು ದೃಶ್ಯದ ಬಗ್ಗೆ ಟೀಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ನಟಿ ಬೀಟ್ರಿಜ್ ಟೌಫೆನ್ಬಾಚ್ ತಮ್ಮ ಇನ್ಸ್ಟಾಗ್ರಾಂ ಖಾತೆಯನ್ನು ಡಿಲೀಟ್ ಮಾಡಿದ್ದಾರೆ.
ಜನವರಿ 8 ರಂದು ಟೀಸರ್ ಬಿಡುಗಡೆಯಾದ ನಂತರ ನಿರ್ದೇಶಕಿ ಗೀತು ಮೋಹನ್ದಾಸ್ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ನಟಿಯ ಗುರುತನ್ನು ಬಹಿರಂಗಪಡಿಸಿದರು. ಬೀಟ್ರಿಜ್ ಬ್ರೆಜಿಲಿಯನ್ ಮಾಡೆಲ್ ಮತ್ತು ನಟಿಯಾಗಿದ್ದು ಅವರು 2014 ರಲ್ಲಿ ಮಾಡೆಲ್ ಆಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು.
‘ಟಾಕ್ಸಿಕ್’ ಟೀಸರ್ ನ್ನು ಆಕ್ಷೇಪಿಸಿ ಆಮ್ ಆದ್ಮಿ ಪಕ್ಷದ ಮಹಿಳಾ ವಿಭಾಗ ಕರ್ನಾಟಕ ರಾಜ್ಯ ಮಹಿಳಾ ಆಯೋಗಕ್ಕೆ ದೂರನ್ನು ಸಲ್ಲಿಸಿದೆ. ಟೀಸರ್ನಲ್ಲಿ ದೃಶ್ಯಗಳು ಅಶ್ಲೀಲವಾಗಿವೆ ಎಂದು ಪಕ್ಷವು ತನ್ನ ದೂರಿನಲ್ಲಿ ಆರೋಪಿಸಿ ಇದು ಮಹಿಳೆಯರು ಮತ್ತು ಮಕ್ಕಳ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ಸಾಂಸ್ಕೃತಿಕ ಮೌಲ್ಯಗಳನ್ನು ದುರ್ಬಲಗೊಳಿಸುತ್ತದೆ ಎಂದು ಹೇಳಿದೆ.
ಆಮ್ ಆದ್ಮಿ ಪಕ್ಷದ ದೂರಿನ ನಂತರ ಮಹಿಳಾ ಆಯೋಗ ಸೆನ್ಸಾರ್ ಮಂಡಳಿಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಕೇಳಿದೆ. ಟೀಸರ್ ನ್ನು ಯೂಟ್ಯೂಬ್ನಲ್ಲಿ ಪ್ರತ್ಯೇಕವಾಗಿ ಬಿಡುಗಡೆ ಮಾಡಲಾಗಿದೆ. ಇದು ಸೆನ್ಸಾರ್ ಮಂಡಳಿಯ ಅಧಿಕಾರ ವ್ಯಾಪ್ತಿಗೆ ಬರುವುದಿಲ್ಲ ಎಂದು ಕೇಂದ್ರ ಚಲನಚಿತ್ರ ಸೆನ್ಸಾರ್ ಮಂಡಳಿಯ ಮೂಲಗಳು ಸ್ಪಷ್ಟಪಡಿಸಿವೆ.
—–





Be the first to comment