ಮೊದಲ ಬಾರಿಗೆ ಟಾಕ್ಸಿಕ್ ನ ಹಸಿ ಬಿಸಿಯಾದ ಟೀಸರ್ ನಲ್ಲಿ ಕಾಣಿಸಿಕೊಂಡಿರುವ ರಾಕಿಂಗ್ ಸ್ಟಾರ್ ಯಶ್ ಅವರು ದೊಡ್ಡ ಮಟ್ಟದ ಚರ್ಚೆಯನ್ನು ಹುಟ್ಟು ಹಾಕಿದ್ದಾರೆ.
ಯಶ್ ಅವರ ಹುಟ್ಟು ಹಬ್ಬದ ದಿನದಂದು ಗೀತು ಮೋಹನ್ ದಾಸ್ ನಿರ್ದೇಶನದ ಟಾಕ್ಸಿಕ್ ಟೀಸರ್ ಬಿಡುಗಡೆ ಆಗಿದೆ. ಟೀಸರ್ ನ ರಾಯ ಪಾತ್ರದ ಪರಿಚಯದ ವೇಳೆ ಚಿತ್ರತಂಡ ಕಾರಿನೊಳಗೆ ಯುವತಿಯೊಂದಿಗೆ ಹಸಿ ಬಿಸಿ ದೃಶ್ಯದಲ್ಲಿ ತೊಡಗಿರುವ ಯಶ್ ಚಿತ್ರಣವನ್ನು ಸಿನಿ ಪ್ರೇಮಿಗಳಿಗೆ ಉಣ ಬಡಿಸಿದೆ. ಇದೇ ಮೊದಲ ಬಾರಿಗೆ ಈ ರೀತಿಯ ದೃಶ್ಯದಲ್ಲಿ ಯಶ್ ಕಾಣಿಸಿಕೊಂಡಿದ್ದಾರೆ. ಹಾಲಿವುಡ್ ಮೇಕಿಂಗ್ ಸ್ಟೈಲ್ ಇರುವ ಚಿತ್ರದಲ್ಲಿ ಹಸಿ ಬಿಸಿ ದೃಶ್ಯದ ಜೊತೆಗೆ ಶತ್ರುಗಳ ಮೇಲೆ ಯಶ್ ಗುಂಡಿನ ಮಳೆ ಸುರಿಸುವ ಅಬ್ಬರ ಇದೆ. ನೋಡುಗರಿಗೆ ಟೀಸರ್ ಮೈ ಜುಂ ಎನ್ನುವಂತೆ ಮಾಡುತ್ತಿದೆ.
ಇದೇ ಮೊದಲ ಬಾರಿಗೆ ಕನ್ನಡದಲ್ಲಿ ಈ ರೀತಿಯ ಅಬ್ಬರದ ಟೀಸರ್ ಬಂದಿದೆ. ಸಿನಿ ಪ್ರೇಮಿಗಳಿಗೆ ಟೀಸರ್ ಮೂಲಕ ಕಚಗುಳಿ ಇಡುವ ಯತ್ನವನ್ನು ಟಾಕ್ಸಿಕ್ ತಂಡ ಮಾಡುವ ಜೊತೆಗೆ ಕುತೂಹಲ ಮೂಡಿಸಿದೆ.
ಟಾಕ್ಸಿಕ್ ಚಿತ್ರದಲ್ಲಿ ಯಶ್ ಜೊತೆಗೆ ನಯನತಾರಾ, ತಾರಾ ಸುತಾರಿಯ, ಹುಮಾ ಕುರೇಷಿ, ರುಕ್ಮಿಣಿ ವಸಂತ್, ಕಿಯಾರ ಅಡ್ವಾಣಿ ನಟಿಸಿದ್ದಾರೆ. ಚಿತ್ರ ಮಾರ್ಚ್ 19 ರಂದು ವಿಶ್ವದಾದ್ಯಂತ ತೆರೆಗೆ ಬರಲಿದೆ.
ಟೀಸರ್ ಮೂಲಕ ಚಿತ್ರದ ಜಲಕ್ ನೋಡಿರುವ ಚಿತ್ರಪ್ರೇಮಿಗಳು ಟ್ರೈಲರ್ ಯಾವ ರೀತಿ ಇರಬಹುದು ಎಂದು ಬೆರಗಿನಿಂದ ಎದುರು ನೋಡುತ್ತಿದ್ದಾರೆ.





Be the first to comment