ಸಂಗೀತ ಜಗತ್ತನ್ನೇ ಮಂತ್ರಮುಗ್ಧಗೊಳಿಸಿರುವ ಎ ಆರ್ ರೆಹಮಾನ್ ಮೊದಲ ಬಾರಿಗೆ ಸಿನಿಮಾದಲ್ಲಿ ಪೂರ್ಣ ಪ್ರಮಾಣದಲ್ಲಿ ನಟಿಸಲು ಮುಂದಾಗಿದ್ದಾರೆ.
ಪ್ರಭುದೇವ ಸಿನಿಮಾದಲ್ಲಿ ರೆಹಮಾನ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ತಮಿಳಿನ ‘ಮೂನ್ ವಾಕ್’ ಹೆಸರಿನ ಸಿನಿಮಾದಲ್ಲಿ ರೆಹಮಾನ್ ನಟಿಸಲು ಮುಂದಾಗಿದ್ದಾರೆ. ಈ ಚಿತ್ರದ ನಾಯಕ ಪ್ರಭುದೇವ. ಬಾಲ್ಯದಿಂದಲೇ ಆತ್ಮೀಯರಾಗಿರುವ ಪ್ರಭುದೇವ ಅವರ ಆಹ್ವಾನದ ಮೇರೆಗೆ ರೆಹಮಾನ್ ನಟಿಸಲು ಒಪ್ಪಿಗೆ ಸೂಚಿಸಿದ್ದಾರೆ ಎನ್ನಲಾಗಿದೆ.
ಮನೋಜ್ ಎನ್ ಎಸ್ ನಿರ್ದೇಶನದ ‘ಮೂನ್ ವಾಕ್’ ಸಿನಿಮಾ ನೃತ್ಯದ ವಿಷಯವನ್ನು ಆಧರಿಸಿದೆ. ಸಿನಿಮಾದಲ್ಲಿ ರೆಹಮಾನ್ ಕೋಪಿಷ್ಟ ಸಿನಿಮಾ ನಿರ್ದೇಶಕನ ಪಾತ್ರ ನಿರ್ವಹಿಸುತ್ತಿದ್ದಾರೆ. ಪಾತ್ರದ ಹೆಸರು ಎ ಆರ್ ರೆಹಮಾನ್ ಆಗಿರುತ್ತದೆ.
ಸಿನಿಮಾದ ಬಹುತೇಕ ದೃಶ್ಯಗಳ ಚಿತ್ರೀಕರಣ ಪೂರ್ಣಗೊಂಡಿದೆ. ಕೆಲವೇ ದೃಶ್ಯಗಳ ಚಿತ್ರೀಕರಣ ಬಾಕಿ ಇವೆ. ನಟನೆಯ ಅನುಭವವನ್ನು ತುಂಬಾ ಎಂಜಾಯ್ ಮಾಡಿದ್ದಾಗಿ ರೆಹಮಾನ್ ಹೇಳಿದ್ದಾರೆ.
‘ಮೂನ್ ವಾಕ್’ ಸಿನಿಮಾದ ಎಲ್ಲಾ 5 ಹಾಡುಗಳಿಗೆ ರೆಹಮಾನ್ ಧ್ವನಿ ನೀಡಿದ್ದಾರೆ. ಈ ಹಿಂದೆ ಎಂದೂ ಪೂರ್ಣ ಸಿನಿಮಾ ಆಲ್ಬಂನಲ್ಲಿ ಒಬ್ಬರೇ ಹಾಡಿರದ ರೆಹಮಾನ್ ಈ ಸಿನಿಮಾ ಮೂಲಕ ಹೊಸ ದಾಖಲೆ ಬರೆಯುತ್ತಿದ್ದಾರೆ.
—-





Be the first to comment