ಕಿಚ್ಚ ಸುದೀಪ್ ‘ಮಾರ್ಕ್ ‘ಚಿತ್ರದ ಪ್ರಿ ರಿಲೀಸ್ ಕಾರ್ಯಕ್ರಮದಲ್ಲಿ ವಿವಾದ ಸೃಷ್ಟಿಸಲು ಕಾಯುತ್ತಿರುವ ವಿರೋಧಿಗಳಿಗೆ ಪರೋಕ್ಷ ಎಚ್ಚರಿಕೆ ನೀಡಿದ್ದು, ಅವರ ಮಾತುಗಳು ರಾಜಕೀಯ ಮತ್ತು ಸಿನಿಮಾ ವಲಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿವೆ.
“ನಾವು ಯುದ್ಧಕ್ಕೆ ಸಿದ್ಧ, ಮಾತಿಗೆ ಬದ್ಧ. ತಡೆಯೋಕೆ ಸಾಧ್ಯವಾಗುವಷ್ಟು ತಡೆಯಿರಿ. ಮಾತನಾಡೋ ಸಮಯದಲ್ಲಿ ಮಾತನಾಡಿ. ಯಾರಾದರೂ ನಿಮ್ಮನ್ನು ಕೆಣಕಿದ್ರೆ, ಅವರದೇ ಭಾಷೆಯಲ್ಲಿ ಉತ್ತರ ಕೊಡಿ. ಇಷ್ಟು ದಿನ ತಾಳ್ಮೆಯಿಂದ ಇದ್ದಿದ್ದು ಸಾಕು. ಈ ಕಾರ್ಯಕ್ರಮವನ್ನು ಹುಬ್ಬಳ್ಳಿಯಲ್ಲಿ ಆಯೋಜನೆ ಮಾಡಿದ್ದಕ್ಕೆ ಕಾರಣ ಇದೆ. ಇಲ್ಲಿಂದ ಮಾತನಾಡಿದ್ರೆ ಕೆಲವರಿಗೆ ನೇರವಾಗಿ ತಟ್ಟುತ್ತೆ. ಅದಕ್ಕಾಗಿಯೇ ಇಲ್ಲಿ ಈ ಕಾರ್ಯಕ್ರಮ ಮಾಡಿದ್ದೇವೆ” ಎಂದು ಸುದೀಪ್ ಭಾಷಣದಲ್ಲಿ ಹೇಳಿದರು.
ಪೈರಸಿ ಸ್ಯಾಂಡಲ್ ವುಡ್ ಗೆ ದೊಡ್ಡ ಹೊಡೆತ ನೀಡುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು. ತಮ್ಮ ಸಿನಿಮಾವನ್ನು ನಕಾರಾತ್ಮಕವಾಗಿ ಬಿಂಬಿಸಲು ಒಂದು ಪಡೆ ಪ್ರಯತ್ನಿಸುತ್ತಿದೆ ಎಂಬ ಸೂಚನೆಯನ್ನೂ ನೀಡಿದರು.
ಹುಬ್ಬಳ್ಳಿಯಲ್ಲಿ ಕಿಚ್ಚ ಸುದೀಪ್ ಮಾತನಾಡಿದ ಈ ಮಾತುಗಳು ಅಭಿಮಾನಿಗಳಿಂದ ಭಾರಿ ಚಪ್ಪಾಳೆ ಗಿಟ್ಟಿಸಿಕೊಂಡವು. ಈ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಈ ಹೇಳಿಕೆ ದರ್ಶನ್ ಅಭಿಮಾನಿಗಳನ್ನು ಕೆರಳಿಸಿದ್ದು, ಎರಡೂ ಸ್ಟಾರ್ಗಳ ಫ್ಯಾನ್ಸ್ ಟಾಕ್ ವಾರ್ಗೆ ಕಾರಣವಾಗಿದೆ.
ಈ ಗದ್ದಲಗಳ ನಡುವೆ ಸುದೀಪ್ ಸೋಷಿಯಲ್ ಮೀಡಿಯಾದಲ್ಲಿ “ಮಾರ್ಕ್ ಆಗಮನಕ್ಕೆ ಇನ್ನೂ 3 ದಿನ” ಎಂಬ ಪೋಸ್ಟ್ ಹಂಚಿಕೊಂಡಿದ್ದಾರೆ. ಸುದೀಪ್ ಅಭಿನಯದ ಬಹುನಿರೀಕ್ಷಿತ ಸಿನಿಮಾ ಮಾರ್ಕ್ ಡಿಸೆಂಬರ್ 25ರಂದು ಗ್ರ್ಯಾಂಡ್ ರಿಲೀಸ್ ಆಗಲಿದೆ.
—–





Be the first to comment