ಕುಸಿದ ‘ಅವತಾರ್: ಫೈರ್ ಆ್ಯಂಡ್ ಆ್ಯಶ್’ ಕಲೆಕ್ಷನ್

ಜೇಮ್ಸ್ ಕ್ಯಾಮೆರೂನ್ ನಿರ್ದೇಶನದ ‘ಅವತಾರ್: ಫೈರ್ ಆ್ಯಂಡ್ ಆ್ಯಶ್’ ಚಿತ್ರ  ಬಾಕ್ಸ್ ಆಫೀಸ್‌ನಲ್ಲಿ ನಿರೀಕ್ಷಿತ ಮಟ್ಟದ ಪ್ರದರ್ಶನ ನೀಡುವಲ್ಲಿ ವಿಫಲವಾಗಿದೆ.

ಡಿಸೆಂಬರ್ 19ರಂದು ಬಿಡುಗಡೆಯಾದ ‘ಅವತಾರ್: ಫೈರ್ ಆ್ಯಂಡ್ ಆ್ಯಶ್’ ಚಿತ್ರ ಭಾರತದಲ್ಲಿ ಮೊದಲ ದಿನ ಕೇವಲ 20 ಕೋಟಿ ರೂಪಾಯಿ ಗಳಿಕೆ ಮಾಡಿದೆ.  ‘ಅವತಾರ್ 2’ ಸಿನಿಮಾ ಭಾರತದಲ್ಲಿ ಮೊದಲ ದಿನ  48 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು.

‘ಅವತಾರ್ 2’ ಬಗ್ಗೆ ಪ್ರೇಕ್ಷಕರಲ್ಲಿ ಅಪಾರ ನಿರೀಕ್ಷೆ ಇತ್ತು. ಚಿತ್ರಕ್ಕೆ ಭರ್ಜರಿ ಮೆಚ್ಚುಗೆ  ಲಭಿಸಿತ್ತು. ಆದರೆ ‘ಅವತಾರ್: ಫೈರ್ ಆ್ಯಂಡ್ ಆ್ಯಶ್’ ಸಿನಿಮಾ ಅಂಥ ಹೈಪ್ ಸೃಷ್ಟಿಸುವಲ್ಲಿ ವಿಫಲವಾಗಿದೆ.  ಆದರೂ ಮುಂದಿನ ದಿನಗಳಲ್ಲಿ ವೀಕೆಂಡ್, ಕ್ರಿಸ್‌ಮಸ್ ಹಾಗೂ ಹೊಸ ವರ್ಷದ ರಜೆಗಳು ಚಿತ್ರಕ್ಕೆ ಸ್ವಲ್ಪ ಬಲ ನೀಡುವ ಸಾಧ್ಯತೆ ಇದೆ. ಆದರೆ ಭಾರತದಲ್ಲಿ ಈ ಚಿತ್ರಕ್ಕೆ ತೀವ್ರ ಸ್ಪರ್ಧೆ ಎದುರಾಗಿದೆ.

ಡಿಸೆಂಬರ್ 5ರಂದು ಬಿಡುಗಡೆಯಾದ ‘ಧುರಂಧರ್’ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಪ್ರದರ್ಶನ ನೀಡುತ್ತಿದೆ. ಬಹುತೇಕ ಶೋಗಳು ಹೌಸ್‌ಫುಲ್ ಆಗುತ್ತಿದ್ದು, ಪರದೆಗಳ ಸಂಖ್ಯೆಯಲ್ಲೂ ‘ಧುರಂಧರ್’ ಮುನ್ನಡೆ ಸಾಧಿಸಿದೆ. ಪರಿಣಾಮವಾಗಿ ‘ಅವತಾರ್ 3’ ಚಿತ್ರಕ್ಕೆ ಲಭ್ಯವಾಗುತ್ತಿದ್ದ ಸ್ಕ್ರೀನ್‌ಗಳ ಸಂಖ್ಯೆ ಕಡಿಮೆಯಾಗಿದೆ.

ಜೇಮ್ಸ್ ಕ್ಯಾಮೆರೂನ್ ನಿರ್ದೇಶನದ ‘ಅವತಾರ್’ ಸರಣಿ ವಿಶ್ವದಾದ್ಯಂತ ಭಾರಿ ಜನಪ್ರಿಯತೆ ಪಡೆದಿದೆ. ‘ಅವತಾರ್’ ಹಾಗೂ ‘ಅವತಾರ್ 2’ ಸಿನಿಮಾಗಳು ಸೂಪರ್ ಹಿಟ್ ಆಗಿ ದಾಖಲೆ ಬರೆದಿದ್ದವು.

—–

Be the first to comment

Leave a Reply

Your email address will not be published. Required fields are marked *

Translate »
error: Content is protected !!