‘ವಾರಣಾಸಿ’ ಚಿತ್ರೀಕರಣ ನೋಡಲು ಜೇಮ್ಸ್ ಕ್ಯಾಮರೂನ್ ಆಸಕ್ತಿ

ನಿರ್ದೇಶಕ ಎಸ್.ಎಸ್. ರಾಜಮೌಳಿ ಅವರ ಮುಂಬರುವ ಆಕ್ಷನ್–ಅಡ್ವೆಂಚರ್ ಚಿತ್ರ ‘ವಾರಣಾಸಿ’ ಚಿತ್ರದ ಸೆಟ್ ಗೆ ಭೇಟಿ ನೀಡಿ ಚಿತ್ರೀಕರಣವನ್ನು ನೋಡಲು ಹಾಲಿವುಡ್ ನಿರ್ದೇಶಕ ಜೇಮ್ಸ್ ಕ್ಯಾಮರೂನ್  ಕಾತರರಾಗಿದ್ದಾರೆ.

ಜೇಮ್ಸ್ ಕ್ಯಾಮರೂನ್ ಅವರು ವಾರಣಾಸಿ ಚಿತ್ರದ ಸೆಟ್ ಗೆ ಭೇಟಿ ನೀಡಿ ಚಿತ್ರೀಕರಣವನ್ನು ನೋಡಲು ಉತ್ಸುಕವಾಗಿರುವುದಾಗಿ ರಾಜಮೌಳಿ ಅವರಿಗೆ ಹೇಳಿದ್ದಾರೆ. ಈ ಬಗ್ಗೆ ರಾಜಮೌಳಿ ಸಕಾರಾತ್ಮಕವಾಗಿ ಸ್ಪಂದಿಸಿದ್ದು ಜೇಮ್ಸ್ ಕ್ಯಾಮರನ್ ಅವರು ಸೆಟ್ ಗೆ ಬರುವಂತೆ ಆಹ್ವಾನಿಸಿದ್ದಾರೆ.

ಇತ್ತೀಚೆಗೆ ರಾಮೋಜಿ ಫಿಲ್ಮ್ ಸಿಟಿಯಲ್ಲಿ  ‘ವಾರಣಾಸಿ’ ಚಿತ್ರದ ಫಸ್ಟ್ ಲುಕ್ ಅನಾವರಣಗೊಂಡಿದ್ದು, ಸುಮಾರು 50 ಸಾವಿರಕ್ಕೂ ಅಧಿಕ ಅಭಿಮಾನಿಗಳು ಪಾಲ್ಗೊಂಡಿದ್ದರು. ಇದು ಭಾರತದ ಅತಿದೊಡ್ಡ ಫಿಲ್ಮ್ ರಿವೀಲ್ ಈವೆಂಟ್ ಎಂದು ದಾಖಲೆ ಬರೆದಿತ್ತು. ‘ವಾರಣಾಸಿ’ ಚಿತ್ರದ ಮೇಲಿನ ಜಾಗತಿಕ ಗಮನ ಇನ್ನಷ್ಟು ಹೆಚ್ಚಾಗಿದೆ.

ಮಹೇಶ್ ಬಾಬುಪ್ರಿಯಾಂಕಾ ಚೋಪ್ರಾ, ಪೃಥ್ವಿರಾಜ್ ಸುಕುಮಾರನ್ ಅಭಿನಯಿಸುತ್ತಿರುವ ‘ವಾರಣಾಸಿ’ ಚಿತ್ರಕ್ಕೆ ಜಾಗತಿಕ ಮಟ್ಟದಲ್ಲಿ ಭಾರೀ ಕುತೂಹಲ ವ್ಯಕ್ತವಾಗಿದೆ.  ಬಾಹುಬಲಿ ಫ್ರಾಂಚೈಸಿ ಹಾಗೂ ‘ಆರ್‌ಆರ್‌ಆರ್’ ಮೂಲಕ ಜಾಗತಿಕ ಖ್ಯಾತಿ ಪಡೆದ ನಿರ್ದೇಶಕ ಎಸ್.ಎಸ್. ರಾಜಮೌಳಿ ಅವರ ‘ನಾಟು–ನಾಟು’ ಹಾಡಿಗೆ ಆಸ್ಕರ್ ಬಂದ ಬಳಿಕ ರಾಜಮೌಳಿ ಹೆಸರು ಹಾಲಿವುಡ್ ಸೇರಿ ವಿಶ್ವದ ಪ್ರಮುಖ ಚಿತ್ರರಂಗಗಳಲ್ಲಿ ಚರ್ಚೆಯಲ್ಲಿದೆ.

—-

Be the first to comment

Leave a Reply

Your email address will not be published. Required fields are marked *

Translate »
error: Content is protected !!