ನಟಿ ರಶ್ಮಿಕಾ ಮಂದಣ್ಣ ತಮ್ಮ ಗೆಳತಿಯರ ಜೊತೆಗೆ ಶ್ರೀಲಂಕಾಕ್ಕೆ ತೆರಳಿ ಬ್ಯಾಚುಲರ್ ಪಾರ್ಟಿ ಟ್ರಿಪ್ ಮಾಡಿದ್ದಾರೆ ಎನ್ನಲಾಗಿರುವ ಫೋಟೋಗಳು ವೈರಲ್ ಆಗಿವೆ.
ರಶ್ಮಿಕಾ ಮಂದಣ್ಣ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಪ್ರವಾಸದ ಫೋಟೊಗಳನ್ನು ಹಂಚಿಕೊಂಡಿದ್ದಾರೆ. ಪೋಸ್ಟ್‌ನಲ್ಲಿ ಅವರು ಮತ್ತು ಅವರ ಸ್ನೇಹಿತರು ಶ್ರೀಲಂಕಾದ ಒಂದು ಸುಂದರ ಪರಿಸರದಲ್ಲಿ ಎಂಜಾಯ್ ಮಾಡುತ್ತಿರುವ ಫೋಟೊಗಳಿವೆ.
‘ಇತ್ತೀಚೆಗೆ ನನಗೆ 2 ದಿನಗಳ ರಜೆ ಸಿಕ್ಕಿತು. ನನ್ನ ಗೆಳತಿಯರೊಂದಿಗೆ ಸಮಯ ಕಳೆಯಲು ನನಗೆ ಈ ಅವಕಾಶ ಸಿಕ್ಕಿತು. ನಾವು ಶ್ರೀಲಂಕಾದ ಈ ಸುಂದರ ಸ್ಥಳಕ್ಕೆ ಹೋಗಿದ್ದೆವು. ಹುಡುಗಿಯರ ಪ್ರವಾಸಗಳು – ಎಷ್ಟೇ ಚಿಕ್ಕದಾದರೂ ಅದು ಅತ್ಯುತ್ತಮವಾಗಿರುತ್ತದೆ!! ನನ್ನ ಹುಡುಗಿಯರು ಅತ್ಯುತ್ತಮ! ಕೆಲವರು ಕಾಣೆಯಾಗಿದ್ದಾರೆ ಆದರೆ, ಅವರು ಅತ್ಯುತ್ತಮ!!’ ಎಂದು ರಶ್ಮಿಕಾ ಬರೆದಿದ್ದಾರೆ.
ಟ ವಿಜಯ್ ದೇವರಕೊಂಡ ಅವರೊಂದಿಗೆ ಇತ್ತೀಚೆಗೆ ನಿಶ್ಚಿತಾರ್ಥ ಮಾಡಿಕೊಂಡಿರುವ ರಶ್ಮಿಕಾ ಮಂದಣ್ಣ ಅವರು ಶೀಘ್ರದಲ್ಲೇ ಹಸೆಮಣೆ ಏರಲಿದ್ದಾರೆ. ರಶ್ಮಿಕಾ ಪ್ರವಾಸವನ್ನು ಸ್ನೇಹಿತರೊಂದಿಗೆ ಒಂದು ಸಣ್ಣ ವಿರಾಮ ಎಂದು ಸ್ಪಷ್ಟವಾಗಿ ಹೇಳಿದರೂ, ಅಭಿಮಾನಿಗಳು ಇದು ಬ್ಯಾಚುಲರ್ ಪಾರ್ಟಿಯ ಟ್ರಿಪ್ ಎಂದು ಕಮೆಂಟ್ ಮಾಡಿದ್ದಾರೆ.
ವರದಿಗಳ ಪ್ರಕಾರ, ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಫೆಬ್ರುವರಿ 26, 2026 ರಂದು ವಿವಾಹವಾಗಲಿದ್ದಾರೆ.
—–





Be the first to comment