‘ಮೌನಂ’ ಸರ್ವತ್ರ ಸಾಧನಂ!

ಕನ್ನಡ ಪ್ರೇಕ್ಷಕರು ಬುದ್ಧಿವಂತರಾಗಿದ್ದಾರೆ. ಕ್ವಾಲಿಟಿ&ಕಂಟೆಂಟ್ ಇರದ ಚಿತ್ರಗಳನ್ನು, ಯಾವುದೇ ಚಮಕ್-ಗಿಮಿಕ್‍ಗಳಿಗೆ ಮಾರುಹೋಗದೆ ರಿಜೆಕ್ಟ್ ಮಾಡುತ್ತಿದ್ದಾರೆ. ಈದೀಗ ಇದು ನಮ್ಮಲ್ಲಿಯ ಡೈರೆಕ್ಟರ್&ಪ್ರೋಡ್ಯೂಸರ್‍ಗಳಿಗೂ ಅರ್ಥವಾದಂತಿದೆ. ಒಂದರ ಹಿಂದೆ ಒಂದು ಕ್ವಾಲಿಟಿ&ಕಂಟೆಂಟ್ ಇರುವ ಚಿತ್ರಗಳು ಸೆಟ್ಟೇರುತ್ತಿವೆ. ಅಂತಹ ಚಿತ್ರಗಳ ಸಾಲಿಗೆ ಸೇರಬಹುದಾದ ಚಿತ್ರ `ಮೌನಂ’. ನಿಹಾರಿಕ ಸಂಸ್ಥೆ ಬ್ಯಾನರ್ ನಲ್ಲಿ ನಿರ್ಮಾಣದಲ್ಲಿ ಮೂಡಿಬರುತ್ತಿರುವ `ಮೌನಂ’ ಚಿತ್ರ ಶೂಟಿಂಗ್ ಫಿನಿಶ್‍ಮಾಡಿ ರಿಲೀಸ್‍ಗೆ ರೆಡಿಯಾಗಿದೆ. ಸಹಾಯಕ ನಿರ್ದೇಶಕರಾಗಿ, ಸಹನಿರ್ದೇಶಕರಾಗಿ ಕೆಲಸ ಮಾಡಿರುವ ರಾಜ್ ಪಂಡಿತ್ ರವರು ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ಈ ಚಿತ್ರಕ್ಕೂ ಮೊದಲು “ದೇವರಿಗೆ ಪಾಠ”ಎಂಬ ಶಾರ್ಟ್‍ಫೀಲಂ ಮಾಡಿದ್ದ ರಾಜ್‍ಗೆ ಇದು ಚೊಚ್ಚಲ ಬೆಳ್ಳಿತೆರೆಯ ಎಂಟ್ರಿ.

ಸಿನಿಮಾದ ಎಲ್ಲಾ ವಿಭಾಗಳಲ್ಲಿ ತೊಡಗಿಸಿಕೊಂಡಿದ್ದ ರಾಜ್, ತಮ್ಮ ಮೊದಲ ಚಿತ್ರಕ್ಕೆ ಸೈಕಾಲಿಜಿಕಲ್ ಥ್ರಿಲ್ಲರ್ ಜಾನರ್ ಅನ್ನು ಆರಿಸಿಕೊಂಡಿದ್ದಾರೆ. ದಶಕಗಳ ಕಾಲ ಚಿತ್ರ ನಿರ್ದೇಶನದ ಕನಸುಹೊತ್ತುಕೊಂಡು ಇಲ್ಲಿವರೆಗೆ ತೆರೆಮರೆಯಲ್ಲಿ ಮೌನದಿಂದ ಕೆಲಸ ಮಾಡಿಕೊಂಡಿದ್ದ ರಾಜ್, ಇವತ್ತು `ಮೌನಂ’ಗೆ ಡೈರೆಕ್ಟರ್. ಅವರ ಚಿತ್ರದ ಮೇಲಿನ ಆಸ್ಥೆ ಪೋಸ್ಟರ್‍ಗಳನ್ನು ನೋಡಿದರೆ ಗೊತ್ತಾಗಿಬಿಡುತ್ತದೆ.

ಚಿತ್ರದಲ್ಲಿ ನಾಯಕನಾಗಿ ಬಾಲಾಜಿ ಶರ್ಮಾ ನಟಿಸಿದರೆ. ನಾಯಕಿಯಾಗಿ ಮಯೂರಿ ನಟಿಸಿದ್ದಾರೆ. ಕಿರುತೆರೆಯಿಂದ ಕೃಷ್ಣ ಲೀಲಾ ಸಿನಿಮಾದ ಮೂಲಕ ಸ್ಯಾಂಡಲ್ವುಡ್ಗೆ ಎಂಟ್ರಿ ಕೊಟ್ಟವರು ನಟಿ ಮಯೂರಿ. ಈಗ ಅವರು ಸ್ಯಾಂಡಲ್ವುಡ್ನ ಬಿಝಿ ನಟಿ ಅನಿಸಿಕೊಂಡಿದ್ದಾರೆ. ಚಿತ್ರದಿಂದ ಚಿತ್ರಕ್ಕೆ ಮೆಚ್ಯೂರ್ಡ್ ಆದ ಪರ್‍ಫಾಮೆನ್ಸ್ ನೀಡುತ್ತಿರುವ ಮಯೂರಿಗೆ ಇಲ್ಲಿ ಎರಡು ಶೇಡ್ ಇರುವ ಪಾತ್ರ. ಒಂದು ಸೈಲೆಂಟ್ ಮತ್ತು ಮೌನವಾಗಿರುವ ಹೋಮ್ಲಿ ಪಾತ್ರವಾದರೆ ಮತ್ತೊಂದು ಪಕ್ಕಾ ಮಾಸ್ ಶೇಡ್ ಪಾತ್ರ. ಒಬ್ಬ ನಟಿಯಾಗಿ ಇಂತಹದೊಂದು ಪಾತ್ರ ಮಾಡಬೇಕೆನ್ನುವುದು ಮಯೂರಿಯವರ ಬಹುದಿನದ ಕನಸಾಗಿತ್ತಂತೆ. ಮಯೂರಿಯವರ ಕನಸನ್ನು ನನಸುಮಾಡಲಿದೆ `ಮೌನಂ’. ಬಿಕಾಸ್, ಮಯೂರಿ ಪಾತ್ರಕ್ಕಾಗಿ ಸಾಕಷ್ಟು ತಯಾರಿ ಮಾಡಿಕೊಂಡಿದ್ದಾರೆ. ಡೈರೆಕ್ಟರ್ ರಾಜ್ ಮಾಡಿಟ್ಟುಕೊಂಡಿದ್ದ ಸ್ಕ್ರೀನ್‍ಪ್ಲೇಗೆ ಫಿದಾ ಆಗಿದ್ದ ಮಯೂರಿ ದುಸರಾ ಮಾತನಾಡದೆ ನಟಿಸಲು ಒಪ್ಪಿಕೊಂಡಿದ್ದಾರೆಂದರೆ, ಒಂದೊಳ್ಳೆ ಚಿತ್ರವನ್ನು ರಾಜ್‍ರಿಂದ ನಿರೀಕ್ಷಿಸಬಹುದು. ಚಿತ್ರದ ಫಸ್ಟ್‍ಲುಕ್‍ನಿಂದಲೇ `ಮೌನಂ’ ಸದ್ದುಮಾಡಿತ್ತು.

ಇನ್ನು, ಇತ್ತೀಚಿಗೆ ರಿಲೀಸ್ ಆದ ಹಿರಿಯ ನಟ ಅವಿನಾಶ್ ಅವರ ಪೋಸ್ಟರ್ ಕೂಡ ಚಿತ್ರದ ಬಗ್ಗೆ ಸಾಕಷ್ಟು ಕುತೂಹಲವನ್ನು ಕೆರಳಿಸಿದೆ. ಇಲ್ಲಿ ನಟ ಅವಿನಾಶ್ ಕೂಡ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇವರು ತಮ್ಮ 35 ವರ್ಷಗಳ ವೃತ್ತಿ ಬದುಕಿನಲ್ಲಿ ಇಲ್ಲಿವರೆಗೆ ಮಾಡದ ಅತ್ಯಂತ ವಿಶಿಷ್ಟವಾದ ಸುಮಾರು ಆರು ಶೇಡ್ಗಳಿರುವ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇವರ ಜತೆ` ಕಾಮಿಡಿ ಕಿಲಾಡಿ’ಗಳು ಖ್ಯಾತಿಯ ನಯನ ಹಾಗೂ ಸಾಕಷ್ಟು ಕಾಮಿಡಿ ನಟರು ನಟಿಸಿದ್ದಾರೆ. ಸೈಕಾಲಿಜಿಕಲ್ ಥ್ರಿಲ್ಲರ್ ಚಿತ್ರದಲ್ಲಿ ಕಾಮಿಡಿಯನ್ನು ಬ್ಲೆಂಡ್ ಮಾಡಿರೋದು ನೋಡುಗನಿಗೆ ಥ್ರಿಲ್ಲಿಂಗ್ ಅನುಭವ ನೀಡಲಿದೆ.ಚಿತ್ರದಲ್ಲಿ ಮೂರು ಹಾಡುಗಳಿದ್ದು ಅರವ್ ರಿಶೀಕ್ ಸಂಗೀತ ನೀಡಿದ್ದಾರೆ.ಶ್ರೀಹರಿ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ
ಮನುಷ್ಯನಿಗೆ ಮನುಷ್ಯನೇ ಶತ್ರು. ನಾವೇ ನಮ್ಮ ಹೊರಗಡೆ ಇರುವ ಶತ್ರುವನ್ನು ಮಟ್ಟಹಾಕುವ ಮೊದಲು ನಮ್ಮ ಒಳಗಡೆ ಇರುವ ಶತ್ರುವನ್ನು ಮಟ್ಟಹಾಕಬೇಕು ಎಂಬ ಎಳೆಯೇ “ಮೌನಂ’ ಚಿತ್ರದ ಕಥಾಹಂದರ . ಈ ಕಥಾಹಂದರದ ಮೂಲಕ `ಮೌನಂ’ನಲ್ಲಿ ನಿಜ ಜೀವನಕ್ಕೆ ಹತ್ತಿರವಾದ ಕಥೆಯನ್ನು ಹೇಳಲು ಕೊರಟಿರುವ ರಾಜ್, ಇಂದಿನ ಮೆಕ್ಯಾನಿಕಲ್ ಬದುಕು, ಕರಿಗಿಹೋಗುತ್ತಿರುವ ಮಾನವೀಯ ಸಂಬಂಧಗಳು, ನಗರೀಕರಣದ ನಾಗಲೋಟದಲ್ಲಿ ಬಣ್ಣ ಕಳೆದುಕೊಳ್ಳುತ್ತಿರುವ ಮನುಷ್ಯನ ಸಹಜ ಬದುಕು.. ಹೀಗೆ ಒಂದಷ್ಟು ಪಾತ್ರಗಳನ್ನಿಟ್ಟುಕೊಂಡು ವಿವಿಧ ಲೇಯರ್‍ನಲ್ಲಿ ಕಥೆಹೇಳುವ ಪ್ರಯತ್ನಮಾಡಿದ್ದಾರೆ. ಒಟ್ಟಿನಲ್ಲಿ, ಚಿತ್ರದ ಮೇಕಿಂಗ್‍ನಲ್ಲೂ ಯಾವುದೇ ಕಾಂಪ್ರಮೈಸ್ ಮಾಡಿಕೊಳ್ಳದೆ ಸಾಕಷ್ಟು ಸಿದ್ಧತೆಯೊಂದಿಗೆ `ಮೌನಂ’ ಅನ್ನು ಕಟ್ಟಿರುವ ರಾಜ್‍ಪಂಡಿತ್ ಕನ್ನಡ ಚಿತ್ರರಂಗಕ್ಕೆ ಒಂದು ಅಪರೂಪದ ಚಿತ್ರ ನೀಡುವ ಕ್ಲೂ ನೀಡಿದ್ದಾರೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!