ಮಾರ್ಕ್

ಆಕ್ಷನ್ ಪ್ಯಾಕ್ಡ್ ‘ಮಾರ್ಕ್’ ಚಿತ್ರದ ಟ್ರೇಲರ್ ರಿಲೀಸ್

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ನಟಿಸಿರುವ ಬಹು ನಿರೀಕ್ಷಿತ ಸಿನಿಮಾ ಮಾರ್ಕ್ ಟ್ರೇಲರ್ ರಿಲೀಸ್ ಆಗಿದೆ. ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ಟ್ರೇಲರ್ ಬಿಡುಗಡೆ ಕಾರ್ಯಕ್ರಮ ನಡೆಯಿತು. ಈ ವೇಳೆ ಇಡೀ ತಂಡ ಭಾಗಿಯಾಗಿತ್ತು.

ಟ್ರೇಲರ್ ಬಿಡುಗಡೆ ಬಳಿಕ ನಟ ಕಿಚ್ಚ ಸುದೀಪ್ ಮಾತನಾಡಿ, ವಿಜಯ್ ಹಾಗೂ ಚಂದ್ರು ಮಲಗಿಕೊಳ್ಳದೇ ಈ ಚಿತ್ರಕ್ಕೆ ಕೆಲಸ ಮಾಡಿದ್ದಾರೆ. ನನ್ನ ಮಾತಿಗೆ ಧೃಡವಾಗಿ ನಿಂತಿದ್ದು ನನ್ನ ಇಡೀ ತಂಡ. ಟೆಕ್ನಿಕಲ್ ಟೀಂ ಹಾಗೂ ಇಡೀ‌ ಕಲಾವಿದರು. ಡಿಸೆಂಬರ್ ನಲ್ಲಿ ಬರ್ತಿರುವ ಸೂಪರ್ ಸ್ಟಾರ್ಸ್ ಸಿನಿಮಾಗಳಿಗೆ ಉತ್ತರಿಸಿದ‌ ಕಿಚ್ಚ, ದೀಪಾವಳಿ ಬಂದರೆ ಕರ್ನಾಟಕದಲ್ಲಿ ಎಲ್ಲರ ಮನೆಯಲ್ಲಿಯೂ ಹಬ್ಬ. ಯಾವತ್ತು ತರಕಾರಿ‌, ಅಡುಗೆ‌ ಕಮ್ಮಿಯಾಗಿಲ್ಲ. ಇನ್ನೂ ಸೀಟ್ ಗಳು ಹೇಗೆ ಕಡಿಮೆಯಾಗುತ್ತವೆ. ಜನ ಬರದೇ ಇರ್ತಾರಾ.,? ಶೂಟಿಂಗ್ ಜರ್ನಿ ಬಗ್ಗೆ ಮಾತನಾಡಿದ ಅವರು, ನಾಲ್ಕು ತಿಂಗಳು ಐದು ದಿನ ಶೂಟಿಂಗ್ ನಡೆಸಲಾಗಿದೆ. 80 ಲೋಕೇಷನ್, 15-20 ಸೆಟ್ ಹಾಕಿದ್ದೇವೆ ಎಂದು ಮಾಹಿತಿ ನೀಡಿದರು.

ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಮಾತನಾಡಿ, ಇಡೀ ಚಿತ್ರರಂಗ ಇವತ್ತು ಇಲ್ಲಿದೆ. ಈ ರೀತಿ ಕಾರ್ಯಕ್ರಮ ತಿಂಗಳಲ್ಲಿ ಮೂರ್ನಾಲ್ಕು ನಡೆಯುತ್ತಿವೆ. ಮಾರ್ಕ್ ಟ್ರೇಲರ್, ಸಾಂಗ್ ನೋಡಿದಮೇಲೆ ಎದುಸಿರು ತೆಗೆದುಕೊಂಡೆ. ಸುದೀಪ್ ಅವರು ಸೆಟ್ ನಲ್ಲಿ ಎಲ್ಲರ ಗಮನಸೆಳೆದು, ಖುಷಿಯಾಗಿ ಇಡುತ್ತಾರೆ. ನಿರ್ದೇಶಕರದ್ದು ಎರಡನೇ ಚಿತ್ರ ಚೆನ್ನಾಗಿ ಮಾಡಿದ್ದಾರೆ. ಸತ್ಯ ಜ್ಯೋತಿ ತಮಿಳುನಾಡಿನಲ್ಲಿ ದೊಡ್ಡ ಬ್ಯಾನರ್. ಅವರು ಸುದೀಪ್ ಅವರ ಜೊತೆ ಚಿತ್ರ ಮಾಡಿರುವುದು ಖುಷಿ. ಚಿತ್ರದಲ್ಲಿ ಮಾಡಿದ ಎಲ್ಲಾ ಕಲಾವಿದರು ಚೆನ್ನಾಗಿ ನಟಿಸಿದ್ದಾರೆ ಎಂದರು.

ಮಾರ್ಕ್

ವಿಜಯ್ ಕಾರ್ತಿಕೇಯನ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಮಾನವ ಕಳ್ಳ ಸಾಗಾಣಿಕೆ ಕಥೆ ಚಿತ್ರದಲ್ಲಿರೋದು ಟ್ರೈಲರ್ ನೋಡಿದರೆ ಅರ್ಥವಾಗುತ್ತಿದೆ. ಇದರ ಜೊತೆಗೆ ಪೊಲಿಟಿಕಲ್ ಅಂಶಗಳನ್ನು ಸೇರಿಸಿ ಟ್ರೇಲರ್ ಕಟ್ ಮಾಡಲಾಗಿದೆ.

ಪೊಲೀಸ್ ಅಜಯ್ ಮಾರ್ಕಂಡೇಯ ಅಲಿಯಾಸ್ ‘ಮಾರ್ಕ್’ ಆಗಿ ಕಿಚ್ಚ ಅಬ್ಬರಿಸಿದ್ದಾರೆ. ಯೋಗಿಬಾಬು, ನವೀನ್ ಚಂದ್ರ, ಗುರು ಸೋಮಸುಂದರಂ ಮತ್ತು ರೋಶಿನಿ ಪ್ರಕಾಶ್ ತಾರಾಗಣದಲ್ಲಿದ್ದಾರೆ.

ಅಜನೀಶ್ ಲೋಕನಾಥ್ ಸಂಗೀತ ಚಿತ್ರಕ್ಕಿದೆ. ಸತ್ಯಜ್ಯೋತಿ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಸಿನಿಮಾ ನಿರ್ಮಾಣವಾಗಿದೆ. ಸುದೀಪ್ ಕೂಡ ಕೈ ಜೋಡಿಸಿದ್ದಾರೆ. ಶೇಖರ್ ಚಂದ್ರ ಛಾಯಾಗ್ರಹಣ ಚಿತ್ರಕ್ಕಿದೆ.

ಮಾರ್ಕ್ ಸಿನಿಮಾ ಡಿಸೆಂಬರ್-25 ಕ್ಕೆ ಬರೋದು ಪಕ್ಕಾ ಆಗಿದೆ. ಹಾಗೆಯೇ ಇದರ ಜೊತೆಗೆ ಮತ್ತೊಂದು ವಿಶೇಷತೆ ಏನೆಂದರೆ ಮಾರ್ಕ್ ಚಿತ್ರವನ್ನು ಕಿಚ್ಚ ಸುದೀಪ್ ಅವರ ಪತ್ನಿ ಪ್ರಿಯಾ ಸುದೀಪ್ ವಿತರಣೆ ಮಾಡಲಿದ್ದಾರೆ. ಈ ಮೂಲಕ ನಿರ್ಮಾಣದ ಜೊತೆ ವಿತರಣೆಗೂ ಪ್ರಿಯಾ ಕಾಲಿಟ್ಟದ್ದಾರೆ. ಕೆಆರ್ ಜೆ ಜೊತೆಗೂಡಿ ಪ್ರಿಯಾ ಸುದೀಪ್ ಅವರು, ಸುಪ್ರಿಯಾನ್ವಿ ಸ್ಟುಡಿಯೋ ಮೂಲಕ ಮಾರ್ಕ್ ವಿತರಣೆ ಮಾಡಲಿದ್ದಾರೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!