ಆಪರೇಷನ್ ಅಲಮೇಲಮ್ಮ ಖ್ಯಾತಿಯ ನಟ ರಿಷಿ ಜೊತೆಗೆ ‘ಜವರ’ ಚಿತ್ರದಲ್ಲಿ ದುನಿಯಾ ವಿಜಯ್ ಅವರ ಪುತ್ರಿ ರಿಥನ್ಯಾ ನಟಿಸುತ್ತಿದ್ದಾರೆ.
ಸಿನಿಮಾ ಇತ್ತೀಚೆಗಷ್ಟೇ ಅದ್ಧೂರಿ ಕಾರ್ಯಕ್ರಮದೊಂದಿಗೆ ಸೆಟ್ಟೇರಿದೆ. ಸ್ಮಶಾನದಲ್ಲಿ ಶವಗಳನ್ನು ಹೂಳುವ ನೀಲಮ್ಮ ಈ ಸಿನಿಮಾಗೆ ಕ್ಲಾಪ್ ಮಾಡಿದ್ದಾರೆ.
‘ಯಲಾ ಕುನ್ನಿ’ ಚಿತ್ರವನ್ನುನಿರ್ದೇಶಿಸಿದ್ದ ಪ್ರದೀಪ್ ದಳವಾಯಿ ಜವರ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಚಿದವೃಷಭ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಅನುಭವಿ ಕಲಾವಿದರಾದ ರಂಗಾಯಣ ರಘು, ಶ್ರುತಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
‘ಜವರ’ ಚಿತ್ರದಲ್ಲಿ ರಿಥನ್ಯಾ ನಾಯಕಿಯಾಗಿ ಭೂಮಿ ಎಂಬ ವೈದ್ಯಕೀಯ ವಿದ್ಯಾರ್ಥಿನಿಯಾಗಿ ನಟಿಸಿದ್ದಾರೆ. ‘ನಾನು ಕೃತಜ್ಞಳಾಗಿದ್ದೇನೆ. ದೊಡ್ಡ ಕಲಾವಿದರೊಂದಿಗೆ ನಟಿಸುವುದು ಒಂದು ಆಶೀರ್ವಾದ. ನಾನು ನಿಜವಾಗಿಯೂ ಅದೃಷ್ಟಶಾಲಿ ಎಂದು ಭಾವಿಸುತ್ತೇನೆ’ ಎಂದು ರಿಥನ್ಯಾ ಹೇಳಿದ್ದಾರೆ.
ರಿಷಿ ಚಿತ್ರದಲ್ಲಿ ರುದ್ರನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ‘ಪ್ರದೀಪ್ ಕಥೆಯನ್ನು ಹೇಳಿದ ಕ್ಷಣ ಸ್ಕ್ರಿಪ್ಟ್ ನ್ನು ಇಷ್ಟಪಟ್ಟೆ. ಪ್ರದೀಪ್ ಈಗಾಗಲೇ ಸಂಪೂರ್ಣ ಚಿತ್ರಕಥೆಯನ್ನು ಸಿದ್ಧಪಡಿಸಿಕೊಂಡಿದ್ದಾರೆ. ಪ್ರದೀಪ್ ಚಿತ್ರವನ್ನು ಸ್ಪಷ್ಟವಾದ ಸೃಜನಶೀಲ ದೃಷ್ಟಿಕೋನವನ್ನು ಹೊಂದಿರುವ ಮತ್ತು ಯೋಜನೆಯನ್ನು ವಿಶ್ವಾಸದಿಂದ ಮಾರ್ಗದರ್ಶನ ಮಾಡುವ ವ್ಯಕ್ತಿಯಾಗಿದ್ದಾರೆ ಎಂದು ರಿಷಿ ಹೇಳಿದ್ದಾರೆ.
ಚಿತ್ರಕ್ಕೆ ಧರ್ಮವಿಶ್ ಸಂಗೀತ ಮತ್ತು ಹಾಲೇಶ್ ಛಾಯಾಗ್ರಹಣವಿದೆ.
—-





Be the first to comment