ಶೂಟಿಂಗ್ ವೇಳೆ ‘ಪಾತ್ರಧಾರಿ’ ನಿರ್ದೇಶಕ ನಿಧನ

‘ಪಾತ್ರಧಾರಿ’ ಚಿತ್ರದ  ನಿರ್ದೇಶಕ ಸಂಗೀತ್ ಸಾಗರ್ ಚಿತ್ರದ  ಶೂಟಿಂಗ್ ವೇಳೆ  ಕೊಪ್ಪದಲ್ಲಿ ಹೃದಯಘಾತ ಸಂಭವಿಸಿ ನಿಧನರಾಗಿದ್ದಾರೆ.

ಕೊಪ್ಪ ತಾಲೂಕಿನಲ್ಲಿ ಚಿತ್ರದ ಚಿತ್ರೀಕರಣ ‌ನಡೆಯುತ್ತಿತ್ತು. ಆಕ್ಷನ್ ಹೇಳುವ ವೇಳೆ  ಸಂಗೀತ್ ಸಾಗರ್ ಗೆ ಹೃದಯಘಾತ ಸಂಭವಿಸಿದ್ದು ತಕ್ಷಣ ಕೊಪ್ಪ ಆಸ್ಪತ್ರೆಗೆ ದಾಖಲಿಸಲಾಗಿದೆ. ಕೊಪ್ಪ ಆಸ್ಪತ್ರೆಯಿಂದ ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗಕ್ಕೆ ಕರೆತರಲಾಗಿತ್ತು. ಚಿಕಿತ್ಸೆ ಫಲಿಸದೆ  ಸಂಗೀತ್ ಸಾಗರ್ ಮೃತಪಟ್ಟಿದ್ದಾರೆ.

ಹಾಸ್ಯ ಕಲಾವಿದ ಸಂಜು ಬಸಯ್ಯ ಅವರಿಗೆ ಸಂಗೀತ್ ಸಾಗರ್ ಆ್ಯಕ್ಷನ್‌ ಹೇಳಿದ್ದರು. ಆಗ  ಸುಸ್ತಾಗಿ ಸಂಗೀತ್‌ ಸಾಗರ್‌ ಕುಸಿದರು. ಶೂಟಿಂಗ್ ಮಾಡುತ್ತಿದ್ದ ವೇಳೆಯೇ ಹೃದಯಾಘಾತ ಸಂಭವಿಸಿ ನಿಧನರಾದರು.

ನಿರ್ದೇಶಕ ಸಂಗೀತ್ ಸಾಗರ್ 8ಕ್ಕೂ ಹೆಚ್ಚು ಕನ್ನಡ ಚಿತ್ರಗಳನ್ನು ಇವರು ನಿರ್ದೇಶಿಸಿದ್ದರು. ಇವರು ಸಕಲೇಶಪುರದ ದೊಡ್ಡನಾಗರ ಮೂಲದವರು. 20 ದಿನಗಳಿಂದ ಹರಿಹರಪುರ, ತೀರ್ಥಹಳ್ಳಿ ತಾಲೂಕು ಸುತ್ತಮುತ್ತ  ‘ಪಾತ್ರಧಾರಿ’ ಚಿತ್ರದ  ಚಿತ್ರೀಕರಣ ನಡೆಯುತ್ತಿತ್ತು. ನಾಳೆ ಕುಂಬಳಕಾಯಿ ಶಾಸ್ತ್ರ ಮಾಡಿ ಕೊನೆಯ ಚಿತ್ರೀಕರಣ ಮಾಡಬೇಕಿತ್ತು.

ಶೂಟಿಂಗ್ ವೇಳೆ ನಿರ್ದೇಶಕರು ಮೃತರಾಗಿರುವುದು ಚಿತ್ರತಂಡಕ್ಕೆ ಆಘಾತವನ್ನು ಉಂಟು ಮಾಡಿದೆ. ಸಂಗೀತ್ ಸಾಗರ್ ನಿಧನಕ್ಕೆ ಕನ್ನಡ ಚಿತ್ರರಂಗ ಕಂಬನಿ ಮಿಡಿದಿದೆ.

—-

 

Be the first to comment

Leave a Reply

Your email address will not be published. Required fields are marked *

Translate »
error: Content is protected !!