ಸೂಪರ್ ಹಿಟ್

‘ಸೂಪರ್ ಹಿಟ್’ ಸಿನಿಮಾ ಟೀಸರ್ ರಿಲೀಸ್

ಗಿಲ್ಲಿ ನಟ ನಾಯಕನಾಗಿ ನಟಿಸಿರುವ  ‘ಸೂಪರ್ ಹಿಟ್’ ಸಿನಿಮಾದ ಟೀಸರ್ ರಿಲೀಸ್ ಆಗಿದೆ.

ಈಗಿನ ಯುವ ಸಮುದಾಯಕ್ಕೆ ಹತ್ತಿರವಾಗಿರುವ ಕಥೆಯೊಂದಿಗೆ ‘ಸೂಪರ್ ಹಿಟ್’ ನಿರ್ಮಿತವಾಗಿದೆ.  ಸೋಶಿಯಲ್ ಮೀಡಿಯಾದ ಮೂಲಕ ಜನಪ್ರಿಯರಾದ ಗೌರವ್ ಶೆಟ್ಟಿ ಮತ್ತು ಕಾಮಿಡಿ ಶೋಗಳಲ್ಲಿ ಜನಪ್ರಿಯತೆ ಗಳಿಸಿದ ಗಿಲ್ಲಿ ನಟ  ನಾಯಕರಾಗಿ ಕಾಣಿಸಿಕೊಂಡಿದ್ದಾರೆ. ಶ್ವೇತಾ ನಾಯಕಿಯಾಗಿ ಅಭಿನಯಿಸಿದ್ದಾರೆ.

ಚಿತ್ರದ ನಿರ್ಮಾಪಕ ಜಿ. ಉಮೇಶ್ ಅವರಿಗೆ   ‘ಸೂಪರ್ ಹಿಟ್’ ಸಿನಿಮಾ ನಿರ್ಮಾಣ ಮಾಡುವ ಆಶಯವಿತ್ತು. ಆ ಕನಸನ್ನೇ ಗಮನದಲ್ಲಿಟ್ಟ ನಿರ್ದೇಶಕ  ವಿಜಯಾನಂದ್ ಕಥೆಯ ಸ್ವರೂಪಕ್ಕೂ ಅದು ಸಂಪೂರ್ಣವಾಗಿ ಹೊಂದಿಕೆಯಾಗುವುದರಿಂದ ‘ಸೂಪರ್ ಹಿಟ್’ ಎಂಬ ಹೆಸರನ್ನೇ ಅಂತಿಮಗೊಳಿಸಿರುವುದಾಗಿ ತಿಳಿಸಿದ್ದಾರೆ.

ಸೂಪರ್ ಹಿಟ್

ಈಗಾಗಲೇ ಸಿನಿಮಾದ ಎಲ್ಲಾ ಕೆಲಸಗಳು ಪೂರ್ಣಗೊಂಡಿದೆ. ಸಿನಿಮಾ ಬಿಡುಗಡೆಯನ್ನು ಘೋಷಿಸಲು ಮಾತ್ರ ಬಾಕಿಯಿದೆ. ಚಿತ್ರ ಆರಂಭದಿಂದ ಕೊನೆಯವರೆಗೂ ಟ್ವಿಸ್ಟ್‌ಗಳು ಮತ್ತು ಮನರಂಜನೆಯ ಹೊಳೆ ಹರಿಸಲಿದೆ. ಕನ್ನಡದಲ್ಲಿ ಮೊದಲ ಬಾರಿಗೆ ಥ್ರಿಲ್ಲರ್ ಕಾಮಿಡಿ ಜಾನರ್‌ನಲ್ಲಿ ಭಿನ್ನ ಪ್ರಯತ್ನ ನಡೆಸಲಾಗಿದೆ ಎಂಬ ಸುಳಿವನ್ನೂ  ನಿರ್ದೇಶಕ ವಿಜಯಾನಂದ್ ಅವರು ನೀಡಿದ್ದಾರೆ.

ವಿಜಯಲಕ್ಷ್ಮಿ ಎಂಟರ್‌ಪ್ರೈಸಸ್ ಬ್ಯಾನರ್‌ನಲ್ಲಿ ಜಿ. ಉಮೇಶ್ ನಿರ್ಮಾಣ ಮಾಡಿದ್ದಾರೆ. ಈ ಚಿತ್ರದಲ್ಲಿ ನಾಗೇಂದ್ರ ಪ್ರಸಾದ್ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳುತ್ತಾರೆ. ಡ್ರ್ಯಾಗನ್ ಮಂಜು, ಸಾಧು ಕೋಕಿಲ, ಸೀನು ಭಾಯ್, ಪ್ರಮೋದ್ ಶೆಟ್ಟಿ, ಜೀಜಿ, ಗಿರಿ, ಟಿನಿಸ್ ಕೃಷ್ಣ, ಕರಿಸುಬ್ಬು, ಮೀನನಾಥ ಸೇರಿದಂತೆ   ದೊಡ್ಡ ತಾರಾಬಳಗ ಈ ಸಿನಿಮಾದಲ್ಲಿದೆ.

ಆರ್.ಡಿ ನಾಗಾರ್ಜುನ ಛಾಯಾಗ್ರಹಣ, ಶ್ರೀಕಾಂತ್ ಸಂಕಲನ ಹಾಗೂ ವಿ. ನಾಗೇಂದ್ರ ಪ್ರಸಾದ್ ಸಾಹಿತ್ಯ–ಸಂಗೀತ ಸಂಯೋಜನೆ ಚಿತ್ರದಲ್ಲಿದೆ.

ಸೂಪರ್ ಹಿಟ್

Be the first to comment

Leave a Reply

Your email address will not be published. Required fields are marked *

Translate »
error: Content is protected !!