ಅಭಿಮಾನಿಗಳ ದರ್ಶನಕ್ಕೆ ಡೆವಿಲ್ ಕುರ್ಚಿ !

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ‘ದಿ ಡೆವಿಲ್’ ಚಿತ್ರದ ಪ್ರಮುಖ ಆಕರ್ಷಣೆ ಆಗಿರುವ ವಿಶೇಷ ಕುರ್ಚಿ ಈಗ ಅಭಿಮಾನಿಗಳ ದರ್ಶನಕ್ಕೆ ಲಭ್ಯವಾಗಿದೆ.

ಆರ್ಟ್ ಡೈರೆಕ್ಟರ್ ಮೋಹನ್ ಬಿ.ಕೆರೆ ಅವರ ಮಾಸ್ಟರ್‌ಪೀಸ್ ಆಗಿರುವ ಈ ಚೇರ್ ಗೆ ಒಟ್ಟು 50 ಲಕ್ಷ ರೂ. ವೆಚ್ಚವಾಗಿದೆ. ಸಿಂಹ ಆಕೃತಿಯ ಅಲಂಕಾರ, ಎರಡೂ ಬದಿಯ ಲೈಟಿಂಗ್,  ಭವ್ಯ ವಿನ್ಯಾಸ ಈ ಚೇರ್‌ಗೆ ವಿಶೇಷ ಲುಕ್ ನೀಡಿವೆ. ದರ್ಶನ್ ಕುಳಿತಿರುವ ಈ ವಿಶೇಷ ಚೇರ್‌ ಚಿತ್ರದ ಪ್ರಮುಖ ಆಕರ್ಷಣೆಯಾಗಿದೆ.

‘ದಿ ಡೆವಿಲ್’ ಚಿತ್ರದ ನಿರ್ಮಾಣ ಸಂಸ್ಥೆ ಶ್ರೀ ಜೈ ಮಾತಾ ಕಂಬೈನ್ಸ್ ಸೋಷಿಯಲ್ ಮೀಡಿಯಾದಲ್ಲಿ, “ದಿ ಡೆವಿಲ್ ಚೇರ್ ಒರಾಯನ್ ಮಾಲ್ ಲೇಕ್ ಸೈಡ್‌ನಲ್ಲಿ ನಿಮ್ಮನ್ನು ಕಾಯುತ್ತಿದೆ. ಹೋಗಿ ಮಜಾ ಮಾಡಿ!” ಎಂದು ಘೋಷಿಸಿದೆ.

ನಾಯಕ ನಟಿ ರಚನಾ ರೈ   “ದರ್ಶನ್ ಸರ್ ಬಳಸಿ ಕುಳಿತ ಚೇರ್ ಈಗ ನಿಮ್ಮಿಗೋಸ್ಕರ ಮಾಲ್‌ನಲ್ಲಿ ಇದೆ. ಹೋಗಿ ಸೆಲ್ಫಿ ಕ್ಲಿಕ್ಕಿಸಿ, ಮಸ್ತ್ ಎಂಜಾಯ್ ಮಾಡಿ” ಎಂದು ಅಭಿಮಾನಿಗಳಿಗೆ ಸಂದೇಶ ನೀಡಿದ್ದಾರೆ.

ಚಿತ್ರದ ಬಿಡುಗಡೆ ಮುನ್ನ ಈ ಚೇರ್‌ನ್ನು ಚಿತ್ರಮಂದಿರಗಳ ಮುಂಭಾಗದಲ್ಲೂ ಪ್ರದರ್ಶಿಸಲು ಚಿತ್ರತಂಡ ಯೋಜನೆ ಮಾಡಿದೆ. ‘ದಿ ಡೆವಿಲ್’ ಚಿತ್ರ ಡಿ. 11 ರಂದು ಅದ್ಧೂರಿಯಾಗಿ ಬಿಡುಗಡೆಯಾಗುತ್ತಿದೆ.

—–

Be the first to comment

Leave a Reply

Your email address will not be published. Required fields are marked *

Translate »
error: Content is protected !!