ಉಪ್ಪಿ ನಟನೆಯ ‘ಆಂಧ್ರ ಕಿಂಗ್’ ಉತ್ತಮ ಗಳಿಕೆ

ಉಪೇಂದ್ರ, ರಾಮ್ ಪೋತಿನೇನಿ ಮುಖ ಪಾತ್ರಗಳಲ್ಲಿ ನಟಿಸಿರುವ ‘ಆಂಧ್ರ ಕಿಂಗ್ ತಾಲೂಕ’ ಸಿನಿಮಾ ಮೊದಲ ದಿನ ವಿಶ್ವದಾದ್ಯಂತ 10 ಕೋಟಿಗೂ ಹೆಚ್ಚಿನ ಮೊತ್ತ ಗಳಿಕೆ ಮಾಡಿದೆ.

ರಾಮ್ ಪೋತಿನೇನಿ, ಉಪೇಂದ್ರ ಅವರು ಈ ಸಿನಿಮಾದ ಮೇಲೆ ಭಾರಿ ನಿರೀಕ್ಷೆ ಇಟ್ಟಿದ್ದರು. ಸಿನಿಮಾ ಪಕ್ಕಾ ಹಿಟ್ ಎಂದು  ಉಪೇಂದ್ರ ಸಿನಿಮಾದ ಪ್ರೀ ರಿಲೀಸ್ ಕಾರ್ಯಕ್ರಮಗಳಲ್ಲಿ ಹೇಳಿದ್ದರು. ರಾಮ್ ಪೋತಿನೇನಿ ಅವರ ಕಳೆದ ಕೆಲ ಸಿನಿಮಾಗಳು ಮೊದಲ ದಿನ 5 ಕೋಟಿ  ಗಳಿಸಿರುವುದು ಅನುಮಾನ.  ‘ಆಂಧ್ರ ಕಿಂಗ್ ತಾಲೂಕ’ ಸಿನಿಮಾ ಮೊದಲ ದಿನ   ಉತ್ತಮ ಗಳಿಕೆ  ಮಾಡಿದೆ.

ಅಮೆರಿಕದಲ್ಲಿ ‘ಆಂಧ್ರ ಕಿಂಗ್ ತಾಲೂಕ’   176 ಲೊಕೇಶನ್​​​ಗಳಲ್ಲಿ ಬಿಡುಗಡೆ ಆಗಿದ್ದು, ಮೊದಲ ದಿನ   2.50 ಲಕ್ಷ ಡಾಲರ್ ಮೊತ್ತ ಗಳಿಕೆ ಮಾಡಿದೆ. ಅಂದರೆ ಭಾರತದ ರೂಪಾಯಿ ಲೆಕ್ಕಾಚಾರದಲ್ಲಿ ಈ ಸಿನಿಮಾ ಮೊದಲ ದಿನ   2.23 ಕೋಟಿ ರೂ. ಗಳಿಕೆ ಮಾಡಿದೆ. ಸಿನಿಮಾ ಶುಕ್ರವಾರದಿಂದ ಕಲೆಕ್ಷನ್   ಹೆಚ್ಚಿಸಿಕೊಳ್ಳುವ ಭರವಸೆ ಮೂಡಿಸಿದೆ.

ಆಂಧ್ರ ಕಿಂಗ್ ತಾಲೂಕ’  ಒಬ್ಬ ಅಭಿಮಾನಿ ಹಾಗೂ ಒಬ್ಬ ಸ್ಟಾರ್ ಹೀರೋ ನಡುವೆ ನಡೆಯುವ ಕತೆಯನ್ನು ಒಳಗೊಂಡಿದೆ. ಒಬ್ಬರನ್ನೊಬ್ಬರು ಎಂದೂ ನೋಡದೇ ಇದ್ದರೂ   ಹೇಗೆ ಒಬ್ಬರ ಜೀವನದ ಮೇಲೆ ಇನ್ನೊಬ್ಬರು ಪ್ರಭಾವ ಬೀರಿದ್ದಾರೆ ಎಂಬುದನ್ನು ಚೆನ್ನಾಗಿ ತೋರಿಸಲಾಗಿದೆ. ಸಿನಿಮಾವನ್ನು ಮಹೇಶ್ ಬಾಬು ಪಿ ನಿರ್ದೇಶನ ಮಾಡಿದ್ದಾರೆ.  ಭಾಗ್ಯಶ್ರೀ ಬೋರ್ಸೆ ನಾಯಕಿ, ಮುರಳಿ ಶರ್ಮಾ ಮತ್ತು ರಾವ್ ರಮೇಶ್  ಪ್ರಧಾನ ಪೋಷಕ ಪಾತ್ರಗಳಲ್ಲಿ ನಟಿಸಿದ್ದಾರೆ.

ಸಿನಿಮಾದ ಕತೆ, ಚಿತ್ರಕತೆ, ಸಂಭಾಷಣೆಗಳು ಅದ್ಭುತವಾಗಿವೆ ಎಂದು ವಿಮರ್ಶಕರು, ಪ್ರೇಕ್ಷಕರು ಹೇಳಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿಯೂ  ಸಿನಿಮಾದ ಬಗ್ಗೆ ಬಹಳ ಒಳ್ಳೆಯ ಅಭಿಪ್ರಾಯಗಳು ವ್ಯಕ್ತವಾಗಿವೆ.  ವೀಕೆಂಡ್​​​ನಲ್ಲಿ ಸಿನಿಮಾದ ಕಲೆಕ್ಷನ್ ಇನ್ನಷ್ಟು ಹೆಚ್ಚಾಗುವ ಸಂಭವ ಇದೆ.

—–

Be the first to comment

Leave a Reply

Your email address will not be published. Required fields are marked *

Translate »
error: Content is protected !!