‘120 ಬಹದ್ಧೂರ್’ ಸಿನಿಮಾಗೆ ತೆರಿಗೆ ವಿನಾಯಿತಿ

ಖ್ಯಾತ ನಟ, ನಿರ್ದೇಶಕ ಫರ್ಹಾನ್ ಅಖ್ತರ್ ನಟಿಸಿರುವ ಭಾರತೀಯ ಸೈನ್ಯದ ಕುರಿತಾದ  ‘120 ಬಹದ್ಧೂರ್’ ಸಿನಿಮಾಗೆ ದೆಹಲಿ ಸರ್ಕಾರ  ತೆರಿಗೆ ವಿನಾಯಿತಿಯನ್ನು ನೀಡಿದೆ.

ಸಿನಿಮಾ 1962ರ ಭಾರತ-ಚೀನಾ ಯುದ್ಧದ ಕತೆಯನ್ನು ಒಳಗೊಂಡಿದೆ.  120 ಮಂದಿ ಸೈನಿಕರು  3000 ಚೀನಾ ಸೈನಿಕರನ್ನು ದಿಟ್ಟತನದಿಂದ ಎದುರಿಸಿದ ಕತೆಯನ್ನು ಸಿನಿಮಾ ಒಳಗೊಂಡಿದೆ. ಸಿನಿಮಾನಲ್ಲಿ ಫರ್ಹಾನ್ ಅಖ್ತರ್ ರೆಜಿಮೆಂಟ್​ನ ಮುಖ್ಯಸ್ಥ ಮೇಜರ್ ಶೈತಾನ್ ಸಿಂಗ್ ಭಾಟಿ ಪಾತ್ರದಲ್ಲಿ ನಟಿಸಿದ್ದಾರೆ. ಸಿನಿಮಾ ಕೆಲ ದಿನಗಳ ಹಿಂದೆ ಬಿಡುಗಡೆ ಆಗಿದ್ದು, ಬಾಕ್ಸ್ ಆಫೀಸ್​​ನಲ್ಲಿ ಒಳ್ಳೆಯ ಪ್ರದರ್ಶನ ಕಾಣುತ್ತಿದೆ.

ಫರ್ಹಾನ್ ಅಖ್ತರ್ ಈ ಸಿನಿಮಾನಲ್ಲಿ ನಟಿಸಿರುವ ಜೊತೆಗೆ ಸಹ ನಿರ್ಮಾಣವನ್ನೂ ಸಹ ಮಾಡಿದ್ದಾರೆ. ನಿರ್ದೇಶನ ಮಾಡಿರುವುದು ರಜನೀಶ್ ಘೈ. ಸೈನಿಕರ ತ್ಯಾಗ, ಬಲಿದಾನವನ್ನು ಗೌರವಿಸುವ, ನೆನಪಿಸುವ, ಭಾರತೀಯ ಸೇನೆಯ ಧೈರ್ಯ, ಸಾಹಸವನ್ನು ಪ್ರಚಾರ ಪಡಿಸುವ ಸಿನಿಮಾ ಆಗಿರುವ ಕಾರಣ, ಹೆಚ್ಚಿನ ಜನ ಸಿನಿಮಾ ನೋಡಲೆಂದು   ಸಿನಿಮಾಕ್ಕೆ ದೆಹಲಿ ಸರ್ಕಾರವು ತೆರಿಗೆ ವಿನಾಯಿತಿ ನೀಡಿದೆ.

ಫರ್ಹಾನ್ ಅಖ್ತರ್ ಈ ಹಿಂದೆ ಹೃತಿಕ್ ರೋಷನ್ ನಟನೆಯ   ಭಾರತೀಯ ಸೈನ್ಯ ಆಧರಿಸಿದ ಸಿನಿಮಾ ಆಗಿರುವ ‘ಲಕ್ಷ್ಯ’ ಸಿನಿಮಾ ನಿರ್ದೇಶನ ಮಾಡಿದ್ದರು. ಬಯೋಪಿಕ್ ​​  ಸಿನಿಮಾ ‘ಭಾಗ್ ಮಿಲ್ಕಾ ಭಾಗ್’ನಲ್ಲಿ  ಫರ್ಹಾನ್ ಅಖ್ತರ್  ನಟಿಸಿದ್ದರು.

—-

Be the first to comment

Leave a Reply

Your email address will not be published. Required fields are marked *

Translate »
error: Content is protected !!