ಕನ್ನಡತಿ ಲಕ್ಷ್ಮಿ ರಾಯ್ ನಟನೆಯ ಹೊಸ ಸಾಹಸಮಯ ಚಿತ್ರ
ಝಾನ್ಸಿ’. ಇತ್ತೀಚಿಗೆ ಮುಂಬೈನಲ್ಲಿ ಅದ್ಬುತ ಥ್ರಿಲ್ಲರ್ ಸನ್ನಿವೇಶವೊಂದನ್ನು ಈ ಚಿತ್ರಕ್ಕಾಗಿ ಚಿತ್ರೀಕರಿಸಿಕೊಳ್ಳಲಾಗಿದೆ.
ಸ್ವಿಮ್ಮಿಂಗ್ ಪೂಲ್ ಆವರಣವೊಂದರಲ್ಲಿ ಮುಂಬೈ ಡಾನ್ ರವಿ ಕಾಳೆ ಅವರನ್ನು ಕಾಳಿಂಗ ಎಂಬ ವ್ಯಕ್ತಿ ಕೊಲ್ಲಲು ಸ್ಕೆಚ್ ಹಾಕಿರುತ್ತಾನೆ.
ಎರಡು ದಿಕ್ಕುಗಳಿಂದ ಶೂಟ್ ಮಾಡಿ ಮುಗಿಸುವ ಸಂಚು ನಡೆದಿರುತ್ತದೆ. ಆ ಸಮಯಕ್ಕೆ ಆ ಸ್ಥಳಕ್ಕೆ ಝಾನ್ಸಿ ಪಾತ್ರಧಾರಿಯ ಎಂಟ್ರಿಯಾಗುತ್ತದೆ. ಇಲ್ಲಿ ಶೂಟ್ ಔಟ್ ನಡೆಯಲಿದೆ ಎನ್ನುವ ವಿಚಾರ ಈಕೆಯ ಗಮನಕ್ಕೆ ಬರುತ್ತಿದ್ದಂತೇ ಕೊಲ್ಲಲು ಬಂದ ಇಬ್ಬರನ್ನೂ ಗುಂಡಿಕ್ಕಿ ಕೊಲ್ಲುತ್ತಾಳೆ.ಈ ಮಊಲಕ ರವಿ ಕಾಳೆಯನ್ನು ಬಚಾವ್ ಮಾಡಿ ಸ್ವಿಮ್ಮಿಂಗ್ ಪೂಲ್ನ ಆಳಕ್ಕೆ ಜಿಗಿಯುತ್ತಾಳೆ. ಖಳ ನಟರ ತಂಡ ಝಾನ್ಸಿ ನೀರಿನಲ್ಲಿ ಅಡಗಿರುವುದನ್ನು ಕಂಡು ವಾಪಸ್ಸಾಗುತ್ತಾರೆ. ಅಸಲಿಗೆ, ಡಾನ್ ರವಿ ಕಾಳೆಯನ್ನು ಛಾನ್ಸಿ ರಕ್ಷಿಸಿದ್ದಾದರೂ ಯಾಕೆ ಅನ್ನೋದನ್ನು ಸಿನಿಮಾದಲ್ಲಿ ನೋಡಬೇಕು ಅಂತ ಹೇಳಿದ್ದಾರೆ ನಿರ್ದೇಶಕ ಗುರುಪ್ರಸಾದ್.
ಝಾನ್ಸಿ ಚಿತ್ರಕ್ಕೆ 35 ದಿವಸಗಳ ಕಾಲ ಚಿತ್ರೀಕರಣ ನಡೆಸಲಾಗಿದೆ. ಅದರಲ್ಲಿ ನಾಲ್ಕು ಸಾಹಸ ಸನ್ನಿವೇಶ ಹಾಗೂ ಒಂದು ಚೇeóï ಕೂಡಾ ಇದೆ. ಹಿರಿಯ ಸಾಹಸ ನಿರ್ದೇಶಕ ಥ್ರಿಲ್ಲರ್ ಮಂಜು ಅವರ 500 ನೇ ಸಿನಿಮಾ ಇದು. ಹಾಗೆಯೇ ಸಂಗೀತ ನಿರ್ದೇಶಕ ಎಂ ಎನ್ ಕೃಪಾಕರ್ ಅವರ 50 ನೇ ಸಂಗೀತ ನಿರ್ದೇಶನದ ಚಿತ್ರ ಕೂಡಾ ಇದಾಗಿದೆ.ಖಡಕ್ ಪೊಲೀಸ್ ಅಧಿಕಾರಿ `ಝಾನ್ಸಿ’ ಪಾತ್ರದಲ್ಲಿ ಲಕ್ಷ್ಮಿ ರಾಯ್ ಅಭಿನಯಿಸುತ್ತಿದ್ದಾರೆ. ಈ ಚಿತ್ರಕ್ಕಾಗಿ ಅವರು ಮಾರ್ಷಲ್ ಆರ್ಟ್ ಸಹ ಕಲಿತಿದ್ದಾರೆ. ಒಂದು ಹಾಡಿನಲ್ಲಿ ನೃತ್ಯ ನಿರ್ದೇಶಕ ಧನ್ಕುಮಾರ್ ಸ್ಟೆಪ್ಸ್ ಕೂಡ ಹಾಕಿಸಿದ್ದಾರೆ. ಖಳ ನಟರ ಪೈಕಿ ಮುಕೇಶ್ ತಿವಾರಿ, ವೀರ್ ಹನಿಫ್, ರವಿ ಕಾಳೆ ಇದ್ದಾರೆ.
ನಿರ್ದೇಶಕ ಪಿ ವಿ ಎಸ್ ಗುರುಪ್ರಸಾದ್ ಈ ಹಿಂದೆ ಮರ್ಯಾದ ರಾಮಣ್ಣ' ಚಿತ್ರವನ್ನು ನಿರ್ದೇಶನ ಮಾಡಿದ್ದವರು. ಈ
ಝಾನ್ಸಿ’ ಚಿತ್ರಕ್ಕೆ ಅವರದೇ ಕಥೆ, ಚಿತ್ರಕಥೆ ಸಂಭಾಷಣೆ ರಚಿಸಿದ್ದಾರೆ. ವೀರೇಶ್ ಛಾಯಾಗ್ರಹಣ ಈ ಚಿತ್ರಕ್ಕಿದೆ.ಡ್ರಗ್ಸ್, ಲ್ಯಾಂಡ್ ಮಾಫಿಯಾ ಹಾಗೂ ಇನ್ನಿತರ ವಿಚಾರಗಳನ್ನು ಒಳಗೊಂಡ `ಝಾನ್ಸಿ’ ಮಾಸ್ ಹಾಗೂ ಕುಟುಂಬ ಸಮೇತ ನೋಡುವಂತಹ ಚಿತ್ರ ಅನ್ನೋದು ನಿರ್ದೇಶಕರ ಅಭಿಪ್ರಾಯ. ಭವಾನಿ ಎಂಟರ್ಟೈನ್ಮೆಂಟ್ ಬ್ಯಾನರ್ ಅಡಿಯಲ್ಲಿ ಮುಂಬಯಿ ಮೂಲದ ರಾಜೇಶ್ ಕುಮಾರ್ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಬಸವರಾಜ್ ಸಂಕಲನ ಒದಗಿಸಿದ್ದಾರೆ.
Be the first to comment