ವಿಷ್ಣು ಸ್ಮಾರಕದ ಬಗ್ಗೆ ಇರುವ ವಿವಾದಗಳು ಇಂದು-ನಿನ್ನೆಯದಲ್ಲ. ಮೇರು ನಟನೊಬ್ಬನ ಸ್ಮಾರಕದ ವಿಚಾರವಾಗಿ ಇಷ್ಟೊಂದು ವಾದ-ವಿವಾದಗಳು, ಆರೋಪ-ಪ್ರತ್ಯಾರೋಪಗಳು ನಟನಾದವನಿಗೆ ಸ್ಮಾರಕವೊಂದು ಬೇಕೆ.. ಅನ್ನುವ ಪ್ರಶ್ನೆ ಮೂಡುವಂತೆ ಮಾಡಿದೆ. ವಿಷ್ಣು ಸ್ಮಾರಕದ ವಿಷಯಕ್ಕೆ ಬಂದರೆ, ಇನ್ನೇನು ಸ್ಮಾರಕ ಎದ್ದು ನಿಂತೇ ಬಿಡುತ್ತದೆ.. ಅನ್ನುವಷ್ಟರಲ್ಲಿ ಒಂದಾಲ್ಲಾ ಒಂದು ಅಡ್ಡಿ ಎದುರಾಗುತ್ತದೆ.
ಡಾ.ವಿಷ್ಣುವರ್ಧನ್ ಸ್ಮಾರಕ ನಿರ್ಮಾಣಕ್ಕೆ ಮತ್ತೊಮ್ಮೆ ಅಡಚಣೆ ಉಂಟಾಗಿದೆ ನ್ಯಾಯಾಲಯದಿಂದಲೇ ಹಸಿರು ನಿಶಾನೆ ದೊರಕಿದ್ದರೂ ರೈತರಿಂದ ಅಡ್ಡಿ ಎದುರಾಗಿದೆ.ಸ್ಮಾರಕ ನಿರ್ಮಾಣಕ್ಕೆ ವಿರೋಧ ವ್ಯಕ್ತಪಡಿಸಿದ್ದ ರೈತರು ನ್ಯಾಯಾಲಯದ ಮೆಟ್ಟಿಲೇರಿದ್ದರು. ಹೈಕೋರ್ಟ್ನಲ್ಲಿದ್ದ ಪ್ರಕರಣ ಇತ್ಯರ್ಥವಾಗಿ, ಸ್ಮಾರಕ ನಿರ್ಮಿಸುವಂತೆ ನ್ಯಾಯಾಲಯ ಸೂಚಿಸಿತ್ತು. ಈ ಹಿನ್ನೆಲೆಯಲ್ಲಿ ತಾಲೂಕಿನ ಜಯಪುರ ಹೋಬಳಿ ಹಾಲಾಳು ಗ್ರಾಮದ ಸರ್ವೆ ನಂ.8ರಲ್ಲಿ ಸ್ಮಾರಕ ನಿರ್ಮಾಣ ಕಾಮಗಾರಿ ಆರಂಭಗೊಂಡಿತ್ತು. ಆದರೆ ಇತ್ತೀಚೆಗೆ ಕಾಮಗಾರಿ ನಡೆಯುತ್ತಿದ್ದ ಸ್ಥಳಕ್ಕಾಗಮಿಸಿದ ಕೆಲ ಸ್ಥಳೀಯ ರೈತರು ಕಾಮಗಾರಿಗೆ ಅಡ್ಡಿಯುಂಟು ಮಾಡಿದ್ದಾರೆ. ಸ್ಮಾರಕ ನಿರ್ಮಾಣ ಕಾರ್ಯಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ತಾವು ಉನ್ನತ ನ್ಯಾಯಾಲಯಕ್ಕೆ ಪ್ರಕರಣವನ್ನು ಕೊಂಡೊಯ್ಯಲು ಅವಕಾಶವಿದೆ ಎಂದು ರೈತರು ಹೇಳಿದ್ದಾರೆ. ಅಲ್ಲಿಗೆ, ವಿಷ್ಣು ಸ್ಮಾರಕ ಎದ್ದುನಿಲ್ಲವುದೂ ಇನ್ನು ಯಾವ ಕಾಲಕ್ಕೋ.
ನಿಮ್ಗೆ ನೆನಪಿರ್ಬೇಕು, ಸ್ಮಾರಕ ನಿರ್ಮಾಣಕ್ಕೆ ಸರ್ಕಾರ 2017ರಲ್ಲಿ ಹಾಲಾಳು ಗ್ರಾಮದ ಮೈಸೂರು- ಮಾನಂದವಾಡಿ ರಸ್ತೆಯಲ್ಲಿ 5 ಎಕರೆ ಭೂಮಿ ಗುರುತಿಸಿತ್ತು.. ಈ ಸಂಬಂಧ ಸರ್ಕಾರದ ನಿರ್ಧಾರ ಪ್ರಶ್ನಿಸಿ ರೈತರು ಕೋರ್ಟ್ ಮೆಟ್ಟಿಲೇರಿದ್ದರು. ಈ ಸಂಬಂಧ ಸ್ಥಳೀಯ ನ್ಯಾಯಾಲಯ ತಡೆ ಯಾಜ್ಞೆ ನೀಡಿತ್ತು. ಕೋರ್ಟ್ನಿಂದ ತಡೆಯಾಜ್ಞೆ ತಂದವರು ನಾಲ್ಕು ಬಾರಿ ನ್ಯಾಯಾಲಯಕ್ಕೆ ಹಾಜರಾಗದ ಹಿನ್ನೆಲೆಯಲ್ಲಿ ಹೈಕೋರ್ಟ್, ತಡೆಯಾಜ್ಞೆ ತೆರವುಗೊಳಿಸಿ ಸ್ಮಾರಕ ನಿರ್ಮಾಣಕ್ಕೆ ಆದೇಶಿಸಿತ್ತು. ಈ ಹಿನ್ನೆಲೆಯಲ್ಲಿ ಜೂನ್ 1 ರಂದು ಸ್ಮಾರಕ ನಿರ್ಮಾಣ ಕಾರ್ಯ ಆರಂಭವಾಗಿತ್ತು. ಕೋರ್ಟ್ ಮೆಟ್ಟಿಲೇರಿದ ರೈತರು ಆಮೇಲೆ ನಾಲ್ಕು ಬಾರಿ ಕೋರ್ಟ್‍ಗೆ ಹೋಗದೇ ಇದ್ದು, ಕಾಮಾಗಾರಿ ಆರಂಭವಾದ ಮೇಲೆ ಅಡ್ಡಿಪಡಿಸುವುದು ಎಷ್ಟು ಸರಿ ಅನ್ನವುದು ವಿಷ್ಣು ಪ್ರತಿಷ್ಟಾನದ ವಾದ.
ಇನ್ನು, ಈ ಬಗ್ಗೆ ಪ್ರತಿಕ್ರಿಯಿಸಿರುವ ವಿಷ್ಣುವರ್ಧನ್ ಅಳಿಯ ಅನಿರುದ್ದ ‘ಇನ್ನೊಂದು ವಾರದಲ್ಲಿ ಸ್ಮಾರಕ ನಿರ್ಮಾಣ ಕಾರ್ಯ ಆರಂಭವಾಗಲಿದೆ ‘ಎಂದು ವಿಶ್ವಾಸ ವ್ಯಕ್ತ ಪಡಿಸಿದ್ದಾರೆ, ಮುಖ್ಯ ಕಾರ್ಯದರ್ಶಿಗಳನ್ನು ಭೇಟಿಯಾಗಿ ಅಗತ್ಯ ಕ್ರಮ ತೆಗೆದುಕೊಳ್ಳುವಂತೆ ಮನವಿ ಮಾಡಿರುವುದಾಗಿ ತಿಳಿಸಿದ್ದಾರೆ. ವಿಷ್ಣು ಪ್ರತಿಷ್ಠಾನದ ಪರವಾಗಿ ಕೋರ್ಟ್ ತೀರ್ಪು ನೀಡಿದೆ ಎಂದು ಹೇಳಿದ್ದಾರೆ.
ಈಗ ವಿಷ್ಣು ಪ್ರತಿಷ್ಠಾನಕ್ಕೆ ಇರುವ ದಾರಿ ಪೋಲಿಸ್ ಭದ್ರತೆಯೊಂದಿಗೆ ಸ್ಮಾರಕ ನಿರ್ಮಿಸುವುದು. ಅದಾಗ್ಯೂ, ನಿರ್ಮಿಸಿದರೂ ಇದು ಮುಗಿಯದ ರಗಳೆ. ಬಿಕಾಸ್, ಮುಂದೆ ನಿರ್ಮಾಣವಾದ ಸ್ಮಾರಕವನ್ನು ರೈತರಿಂದ ಉಳಿಸಿಕೊಳ್ಳುವ ಅನಿವಾರ್ಯತೆ ಎದುರಾಗಬಹುದು. ಅಷ್ಟೇ ಯಾಕೆ, ಅನ್ನದಾತನ ಭೂಮಿಯನ್ನು ಕಿತ್ತುಕೊಂಡು ಸ್ಮಾರಕ ನಿರ್ಮಿಸುವುದರ ಬಗ್ಗೆ ವಿಷ್ಣು ಅಭಿಮಾನಿಗಳಲ್ಲೇ ಸಾಕಷ್ಟು ಅಸಮಾಧಾನ ಇದೆ. ನಿಜಕ್ಕೂ ರೈತರನ್ನು ಎದುರಾಕಿಕೊಂಡು ಅದೇ ಜಾಗದಲ್ಲೇ ಸ್ಮಾರಕ ನಿರ್ಮಿಸಿದ್ದೇ ಆದರೆ ಮುಂದೆ ಎದುರಾಗಬಹುದಾದ ಅನಾಹುತಗಳ ಬಗ್ಗೆ ಯೋಚಿಸಿ ನಿರ್ಧಾರ ತೆಗೆದುಕೊಳ್ಳೋದು ಒಳಿತಲ್ಲವೇ?
Pingback: Devops