ನ. 28 ರಂದು ‘ನಾಯಿ ಇದೆ ಎಚ್ಚರಿಕೆ’ ಚಿತ್ರ ಬಿಡುಗಡೆ

ಥ್ರಿಲ್ಲರ್, ಹಾರರ್ ಚಿತ್ರ  ‘ನಾಯಿ ಇದೆ ಎಚ್ಚರಿಕೆ!’ ನವೆಂಬರ್ 28 ರಂದು ಕರ್ನಾಟಕದಾದ್ಯಂತ  ಬಿಡುಗಡೆಯಾಗಲಿದೆ.

ಡಾ. ಲೀಲಾ ಮೋಹನ್ ನಟನಾಗಿ  ಸ್ಯಾಂಡಲ್‌ವುಡ್‌ಗೆ ಪ್ರವೇಶಿಸುತ್ತಿದ್ದಾರೆ. ಅವರು ಲೀಲಾ ಎಂಬ ವೈದ್ಯನ ಪಾತ್ರವನ್ನು ನಿರ್ವಹಿಸುತ್ತಾರೆ. ಈ ಚಿತ್ರ  ನಾಯಿ ಕಡಿತದ ಮಾನಸಿಕ ಮತ್ತು ಭಾವನಾತ್ಮಕ ಪರಿಣಾಮಗಳ ಕುರಿತು ಹೇಳುತ್ತದೆ. ಮಾನವರು ಮತ್ತು ಪ್ರಾಣಿಗಳ ನಡುವಿನ ಆಳವಾದ ಬಾಂಧವ್ಯವನ್ನು ಚಿತ್ರ ಎತ್ತಿ ತೋರಿಸುತ್ತದೆ.

ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿರುವ ಕಾಳಿ ಗೌಡ ಅವರು ಕಥೆ, ಚಿತ್ರಕಥೆ, ಸಂಭಾಷಣೆ ಮತ್ತು ನೃತ್ಯ ಸಂಯೋಜನೆಯನ್ನು ನಿರ್ವಹಿಸಿದ್ದಾರೆ. ಕಾಳಿ ಗೌಡ ಅವರಿಗೆ ಇದು ಎರಡನೇ ಚಿತ್ರವಾಗಿದೆ. ಲಾಫಿಂಗ್ ಪೀಕಾಕ್ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಲಾವಣ್ಯ ಗಡಿ  ಚಿತ್ರವನ್ನು ನಿರ್ಮಿಸಿದ್ದಾರೆ. ಎಜೆ ಕುಮಾರ್ ಛಾಯಾಗ್ರಹಣ, ಕಿಂಗ್ ಪ್ರೇಮ್ ಸಂಕಲನ  ನಿರ್ವಹಿಸಿದ್ದಾರೆ.

ಚಿತ್ರದಲ್ಲಿ ಪ್ರಮೋದ್ ಶೆಟ್ಟಿ, ಮಂಗಳೂರು ದಿನೇಶ್, ಪ್ರಭಿಕ್ ಮೊಗವೀರ್, ಬಾಲ ರಾಜವಾಡಿ, ದಿವ್ಯಾ, ಮಾನಸ, ಚಂದನ, ಕಾಮಿಡಿ ಜಗ್ಗಪ್ಪ, ಅನಿರುದ್ಧ್ ಮಹೇಶ್, ನಾಗೇಂದ್ರ ಅರಸ್, ಯುವ, ಶ್ರೀನಿ, ಸುನಿಲ್,  ನಿರ್ದೇಶಕರು  ನಟಿಸಿದ್ದಾರೆ.

—–

Be the first to comment

Leave a Reply

Your email address will not be published. Required fields are marked *

Translate »
error: Content is protected !!