ನೈಜ ಘಟನೆ ಆಧಾರಿತ ದಿ ಟಾಸ್ಕ್ ಸಿನಿಮಾದಲ್ಲಿ ಜಯಸೂರ್ಯ ಆಜಾದ್ ಅವರು ಸ್ಟಂಟ್ ಮೂಲಕ ಗಮನ ಸೆಳೆದಿದ್ದಾರೆ.
ಈ ಚಿತ್ರದಲ್ಲಿ ಆಕ್ಷನ್ ಸನ್ನಿವೇಶಗಳು ಹೆಚ್ಚಿವೆ. ಇದಕ್ಕೆ ಪೂರಕವಾಗಿ ಜಯಸೂರ್ಯ ಅವರು ಹೀರೋ ಪಾತ್ರದ ನಟನೆಗಾಗಿ ವರ್ಷಗಟ್ಟಲೆ ತಯಾರಿ ನಡೆಸಿದ್ದಾರೆ. ಸ್ಟಂಟ್ ಮೂಲಕ ತಮ್ಮ ಸಿನಿಮಾದ ಮೇಲಿನ ಬದ್ಧತೆಯನ್ನು ತೋರಿದ್ದಾರೆ.
ಭೀಮ ಹಾಗೂ ಸಲಗ ಸಿನಿಮಾಗಳಲ್ಲಿ ಪ್ರಶಂಸೆ ಸಿಕ್ಕರೂ ನಿರೀಕ್ಷಿತ ಮಟ್ಟದಲ್ಲಿ ಅವಕಾಶಗಳು ಸಿಗಲಿಲ್ಲ. ದಿ ಟಾಸ್ಕ್ ಚಿತ್ರದಲ್ಲಿ ಸ್ಟಂಟ್ಸ್ ಮೂಲಕ ಪಾತ್ರವನ್ನು ಒಳ್ಳೆಯ ಅವಕಾಶ ಆಗಿ ಮಾಡಲು ನಿರ್ಧರಿಸಿದೆ ಎಂದು ಜಯಸೂರ್ಯ ಹೇಳಿದ್ದಾರೆ.
ಚಿತ್ರದ ಆಕ್ಷನ್ಸ್ ಸನ್ನಿವೇಶಗಳಿಗೆ ಸಾಕಷ್ಟು ತಯಾರಿ ಬೇಕಾಗಿತ್ತು. ಅದಕ್ಕಾಗಿ ಗೋಪಿ ಮಾಸ್ಟರ್ ಸಹಾಯ ಮಾಡಿದರು. ಅರ್ಜುನ್ ಮಾಸ್ಟರ್ ಅವರು ಟಾಸ್ಕ್ ಸಿನಿಮಾದಲ್ಲಿ ರಿಯಲಿಸ್ಟಿಕ್ ಸ್ಟಂಟ್ ಗಳನ್ನು ಮಾಡಿಸಿದ್ದಾರೆ. ಸೇತುವೆ ಮೇಲಿನ ಸ್ಟಂಟ್ ದೃಶ್ಯ ತುಂಬಾ ಅಪಾಯಕಾರಿ ಆಗಿತ್ತು. ಸಿನಿಮಾಕ್ಕಾಗಿ ಸಾಕಷ್ಟು ತಯಾರಿ ಮಾಡಿದ್ದ ಕಾರಣ ಈ ಸಾಹಸಗಳು ಕಷ್ಟ ಅನಿಸಲಿಲ್ಲ. ಟಾಸ್ಕ್ ಚಿತ್ರದ ಪಾತ್ರಕ್ಕಾಗಿ 10 ಕೆ.ಜಿ ತೂಕ ಇಳಿಸಿಕೊಂಡಿದ್ದೇನೆ ಎಂದು ನಾಯಕ ನಟ ಜಯಸೂರ್ಯ ಹೇಳಿದ್ದಾರೆ.





Be the first to comment