ಪೈರಸಿ ಮಾಸ್ಟರ್ ಮೈಂಡ್ ಅರೆಸ್ಟ್

ದೊಡ್ಡ ಪ್ರಮಾಣದ ಚಲನಚಿತ್ರ ಪೈರಸಿ ಜಾಲವನ್ನು ನಿರ್ವಹಿಸುತ್ತಿದ್ದ ಪ್ರಮುಖ ಆರೋಪಿ ಇಮ್ಮಡಿ ರವಿಯನ್ನು  ಹೈದರಾಬಾದ್ ಸೈಬರ್ ಅಪರಾಧ ಪೊಲೀಸರು ಬಂಧಿಸಿದ್ದಾರೆ.

ಫ್ರಾನ್ಸ್‌ನಿಂದ ಹೈದರಾಬಾದ್‌ಗೆ  ಕೆಲಸದ ನಿಮಿತ್ತ ಬಂದಿದ್ದ ವೇಳೆ ಪೊಲೀಸರು ರವಿಯನ್ನು ಬಂಧಿಸಿದ್ದಾರೆ. ಹೈದರಾಬಾದ್ ನ ಕೂಕಟ್ಪಲ್ಲಿಯಲ್ಲಿರುವ ರೇನ್ ವಿಸ್ಟಾ ಅಪಾರ್ಟ್ ಮೆಂಟ್ ನಲ್ಲಿದ್ದಾಗ ರವಿಯನ್ನು ಪೊಲೀಸರು ಬಂಧಿಸಿದ್ದಾರೆ.  ರವಿ ಪತ್ನಿ ನೀಡಿದ ಮಾಹಿತಿ ಮೇರೆಗೆ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ವಿದೇಶದಲ್ಲಿರುವ ರವಿ ಪತ್ನಿಯಿಂದ ವಿಚ್ಛೇದನ ಪಡೆಯಲು ಫ್ರಾನ್ಸ್ ನಿಂದ ಹೈದರಾಬಾದ್ ಗೆ ಬಂದಿದ್ದಎನ್ನಲಾಗಿದೆ.

ರವಿ ಮನೆ ಮೇಲೆ ದಾಳಿ ಮಾಡಿದ್ದ ಪೊಲೀಸರು  ಹತ್ತಾರು ಹಾರ್ಡ್ ಡಿಸ್ಕ್ ಗಳು, ಲ್ಯಾಪ್‌ಟಾಪ್‌ಗಳು, ಕಂಪ್ಯೂಟರ್‌ಗಳು, ಕೆಲವು ಚಲನಚಿತ್ರಗಳ ಎಚ್‌ಡಿ ಪ್ರಿಂಟ್‌ಗಳನ್ನು ವಶಪಡಿಸಿಕೊಂಡಿದ್ದಾರೆ.  ರವಿಯ ಐ-ಬೊಮ್ಮ ವೆಬ್‌ಸೈಟ್ ಸರ್ವರ್‌ನಿಂದ ಮಾಹಿತಿಯನ್ನು ಸಂಗ್ರಹಿಸಿದ್ದಾರೆ. ಅಪ್‌ಲೋಡ್ ಮಾಡಲು ಸಿದ್ಧವಾಗಿದ್ದ ಕೆಲವು ಹೊಸ ಚಲನಚಿತ್ರಗಳ ಹಾರ್ಡ್ ಡಿಸ್ಕ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಚಲನಚಿತ್ರ ಮಂದಿರದಲ್ಲಿ ಸಿನಿಮಾ ಬಿಡುಗಡೆಯಾಗುವುದಕ್ಕೂ ಮೊದಲೇ ಅದರ ಪೈರೇಟೆಡ್‌ ಕಾಪಿಯನ್ನುಆರೋಪಿ ತನ್ನ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್‌ ಮಾಡುತ್ತಿದ್ದ.  ವೆಬ್ ಸೈಟ್ ಗಳ ಮೂಲಕ ಆಗಷ್ಟೇ ಬಿಡುಗಡೆಯಾಗುತ್ತಿದ್ದ ಬಹುತೇಕ ಎಲ್ಲ ಚಿತ್ರಗಳನ್ನು ಅಪ್ಲೋಡ್ ಮಾಡಿ ಪ್ರೇಕ್ಷಕರು ಉಚಿತವಾಗಿ ಡೌನ್ಲೋಡ್ ಮತ್ತು ವೀಕ್ಷಣೆ ಮಾಡುವಂತೆ ಮಾಡುತ್ತಿದ್ದ. ಇಮ್ಮಡಿ ರವಿಯನ್ನು ಬಂಧಿಸುವ ಮೂಲಕ  ಪೊಲೀಸರು ನಿರ್ಮಾಪಕರಿಗೆ ದೊಡ್ಡ ರಿಲೀಫ್ ನೀಡಿದ್ದಾರೆ.

ಈ ಪ್ರಕರಣದಲ್ಲಿ ರವಿ ಮಾತ್ರವಲ್ಲದೇ ನೆಲ್ಲೂರು ಮೂಲದ ವೆಬ್‌ಸೈಟ್ ಡೆವಲಪರ್ ದುದ್ದೇಲಾ ಶಿವಾಜಿ (27), ಖಾಸಗಿ ಉದ್ಯೋಗಿ ಸುಸರ್ಲಾ ಪ್ರಶಾಂತ್ (27) ನ್ನು ಬಂಧಿಸಲಾಗಿದೆ.  ಪೈರಸಿ ಕಾಟದಿಂದಾಗಿ ತೆಲುಗು ಚಿತ್ರೋದ್ಯಮಕ್ಕೆ ಸಾವಿರಾರು ಕೋಟಿ ನಷ್ಟವಾಗುತ್ತಿತ್ತು ಎಂದು ಹೇಳಲಾಗಿದೆ.

ಐಬೊಮ್ಮ ವೆಬ್ ಸೈಟ್ ಮಾಲೀಕ ರವಿ ಈ ಹಿಂದೆ ಪೊಲೀಸರಿಗೇ ಸವಾಲು ಹಾಕಿದ್ದ. ‘ನೀವು ನನ್ನ ಬಗ್ಗೆ ಯೋಚಿಸಿದರೆ ನಾನು ನಿಮ್ಮ ಬಗ್ಗೆ ಯೋಚಿಸಬೇಕಾಗುತ್ತದೆ’ ಎಂದು ಹೇಳಿ  ಇನ್ನು ಬಿಡುಗಡೆಯೇ ಆಗದ ದೊಡ್ಡ ಚಿತ್ರವೊಂದರ ಒಂದಷ್ಟು HD ಕ್ವಾಲಿಟಿಯ ವಿಡಿಯೋಗಳನ್ನು ಬಿಡುಗಡೆ ಮಾಡಿದ್ದ. ‘ಪೊಲೀಸರು ನನ್ನತ್ತ ಗಮನ ಹರಿಸಿದರೆ ನಾನು ಈ ಚಿತ್ರದ ಇಡೀ ವಿಡಿಯೋವನ್ನು ಬಿಡುಗಡೆ ಮಾಡುವುದಾಗಿ’ ಎಚ್ಚರಿಕೆ ನೀಡಿದ್ದ.

ರವಿ ವಿದೇಶಗಳಲ್ಲಿ ವಾಸವಿದ್ದು ಸಿನಿಮಾವನ್ನು ಪೈರಸಿ ಮಾಡುತ್ತಿದ್ದ. ಕ ರವಿ ಇಲ್ಲಿಯವರೆಗೆ ಬರೊಬ್ಬರಿ 20 ಕೋಟಿ ರೂ. ಗಳಿಸಿದ್ದಾನೆ ಎಂದು ಹೈದರಾಬಾದ್ ಆಯುಕ್ತ ವಿ.ಸಿ. ಸಜ್ಜನರ್ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.

ಹೈದರಾಬಾದ್ ಸೈಬರ್ ಪೊಲೀಸರು ನಿರಂತರ ಕಾರ್ಯಾಚರಣೆ ನಡೆಸಿ ಕೊನೆಗೂ ರವಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

—–

 

Be the first to comment

Leave a Reply

Your email address will not be published. Required fields are marked *

Translate »
error: Content is protected !!