‘ಮಾರ್ಕ್’ ಚಿತ್ರೀಕರಣ ಪೂರ್ಣ

ಕಿಚ್ಚ ಸುದೀಪ್ ಅಭಿನಯದ ಮಾರ್ಕ್ ಚಿತ್ರದ ಚಿತ್ರೀಕರಣ ಮುಕ್ತಾಯಗೊಂಡಿದೆ.

ಚಿತ್ರ  ಈಗ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದ್ದು, ಡಿಸೆಂಬರ್ 25ರಂದು ಬಿಡುಗಡೆಗೆ ಸಜ್ಜಾಗುತ್ತಿದೆ. ಅದೇ ದಿನ ಅರ್ಜುನ್ ಜನ್ಯ ನಿರ್ದೇಶನದ ಚೊಚ್ಚಲ ಚಿತ್ರ 45 ಬಿಡುಗಡೆಯಾಗಲಿದೆ.

ಮ್ಯಾಕ್ಸ್ ಯಶಸ್ಸಿನ ನಂತರ ಕಿಚ್ಚ ಸುದೀಪ್ ಮತ್ತು ನಿರ್ದೇಶಕ ವಿಜಯ್ ಕಾರ್ತಿಕೇಯ ಎರಡನೇ ಬಾರಿಗೆ ಮಾರ್ಕ್ ಮೂಲಕ ಒಂದಾಗಿದ್ದಾರೆ. ಸುದೀಪ್  ಪೊಲೀಸ್ ಅಧಿಕಾರಿ ಅಜಯ್ ಮಾರ್ಕಂಡೆ ಪಾತ್ರದಲ್ಲಿ ನಟಿಸಿದ್ದಾರೆ.   ಚಿತ್ರದಲ್ಲಿ ನವೀನ್ ಚಂದ್ರ, ದೀಪ್‌ಶಿಕಾ, ಗುರು ಸೋಮಸುಂದರಂ, ರೋಶನಿ ಪ್ರಕಾಶ್, ಡ್ರ್ಯಾಗನ್ ಮಂಜು, ಗೋಪಾಲಕೃಷ್ಣ ದೇಶಪಾಂಡೆ, ಮಹಾಂತೇಶ್ ಹಿರೇಮಠ್, ಯೋಗಿ ಬಾಬು, ಅಭಿಷೇಕ್ ಜೋಸೆಫ್ ಜಾರ್ಜ್, ಅರ್ಚನಾ ಕೊಟ್ಟಿಗೆ, ಪ್ರತಾಪ್ ನಾರಾಯಣ್   ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ನಿಶ್ವಿಕಾ ನಾಯ್ಡು ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಸತ್ಯಜ್ಯೋತಿ ಫಿಲ್ಮ್ಸ್ ಮತ್ತು ಕಿಚ್ಚ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಲಾದ ಮಾರ್ಕ್ ಚಿತ್ರಕ್ಕೆ 110 ದಿನಗಳ ಚಿತ್ರೀಕರಣ ಮುಗಿದಿದೆ.   ಸಿಜಿ, ಡಬ್ಬಿಂಗ್ ಮತ್ತು ಹಿನ್ನೆಲೆ ಸಂಗೀತ ಕೆಲಸಗಳು ಈಗಾಗಲೇ ಪ್ರಗತಿಯಲ್ಲಿದೆ.

ಚಿತ್ರಕ್ಕೆ ಶೇಖರ್ ಚಂದ್ರ  ಛಾಯಾಗ್ರಹಣ , ಬಿ. ಅಜನೀಶ್ ಲೋಕನಾಥ್ ಸಂಗೀತ ಸಂಯೋಜಿಸಿದ್ದಾರೆ.

—–

Be the first to comment

Leave a Reply

Your email address will not be published. Required fields are marked *

Translate »
error: Content is protected !!