ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ನಿರ್ದೇಶನದ ಬಹು ನಿರೀಕ್ಷಿತ 45 ಚಿತ್ರದ ಆಫ್ರೋ ಟಪಾಂಗ್ ಹಾಡಿಗೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ರಿಯಲ್ ಸ್ಟಾರ್ ಉಪೇಂದ್ರ, ರಾಜ್ ಬಿ ಶೆಟ್ಟಿ ಅವರು ಹೆಜ್ಜೆ ಹಾಕಿದ್ದಾರೆ.
45 ಚಿತ್ರದ ಆಫ್ರೋ ಟಪಾಂಗ್ ಹಾಡಿಗೆ ಈ ಸ್ಟಾರ್ ನಟರು ಹೆಜ್ಜೆ ಹಾಕಿರುವ ಹಾಡಿನ ವಿಡಿಯೋ ತುಣುಕುಗಳನ್ನು ಆನಂದ್ ಆಡಿಯೋ ತಮ್ಮ ಸಾಮಾಜಿಕ ಮಾಧ್ಯಮ ಇನ್ಸ್ಟ ಗ್ರಾಂನಲ್ಲಿ ಹಂಚಿಕೊಂಡಿದೆ. ಈ ಮೂವರು ನಟರ ಹಾಡಿನ ಹೆಜ್ಜೆಗೆ ಅಭಿಮಾನಿಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಅರ್ಜುನ್ ಜನ್ಯ ಅವರು 45 ಚಿತ್ರಕ್ಕೆ ಕಥೆ, ಚಿತ್ರಕಥೆ, ನಿರ್ದೇಶನ ಮಾಡುವ ಜೊತೆಗೆ ಸಂಗೀತ ಸಂಯೋಜನೆಯನ್ನು ಕೂಡ ಮಾಡಿದ್ದಾರೆ. ಇದು ಅರ್ಜುನ್ ಜನ್ಯ ಅವರ ಚೊಚ್ಚಲ ನಿರ್ದೇಶನದ ಚಿತ್ರ ಆಗಿದೆ. ಸೂಪರ್ ಸ್ಟಾರ್ ಗಳು ಚಿತ್ರದಲ್ಲಿ ನಟಿಸಿರುವ ಕಾರಣ ಚಿತ್ರದ ಮೇಲೆ ನಿರೀಕ್ಷೆ ಹೆಚ್ಚಾಗಿದೆ.

ಹಿಂದೆ ಶಿವರಾಜ್ ಕುಮಾರ್ ಹಾಗೂ ಉಪೇಂದ್ರ ಅವರು ಪ್ರೀತ್ಸೆ, ಲವ ಕುಶ, ಕಬ್ಜ ಚಿತ್ರಗಳಲ್ಲಿ ಒಟ್ಟಿಗೆ ನಟಿಸಿದ್ದರು. ಈ ಬಾರಿ ಈ ನಟರು 45 ಚಿತ್ರದಲ್ಲಿ ಒಂದಾಗಿರುವುದು ಅಭಿಮಾನಿಗಳಲ್ಲಿ ಕುತೂಹಲವನ್ನು ಉಂಟು ಮಾಡಿದೆ.
ರಾಜ್ ಬಿ ಶೆಟ್ಟಿ ಅವರು 2025ರ ಸೂಪರ್ ಹಿಟ್ ಚಿತ್ರ ಸು ಫ್ರಮ್ ಸೋ ಚಿತ್ರದಲ್ಲಿ ನಟಿಸುವ ಜೊತೆಗೆ ನಿರ್ಮಾಣವನ್ನು ಕೂಡಾ ಮಾಡಿದ್ದಾರೆ. ದೊಡ್ಡ ಸ್ಟಾರ್ ಗಳ ಜೊತೆಗೆ ಇವರು ನಟಿಸಿರುವುದು ಚಿತ್ರದ ಬಗ್ಗೆ ಅಭಿಮಾನಿಗಳಲ್ಲಿ ಹೆಚ್ಚಿನ ಆಸಕ್ತಿ ಮೂಡಿಸಿದೆ.
ಡಿಸೆಂಬರ್ 25ರಂದು 45 ಚಿತ್ರ ಬಿಡುಗಡೆ ಆಗುತ್ತಿದೆ. ಇದಕ್ಕಾಗಿ ಚಿತ್ರತಂಡ ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಂಡಿದೆ. ಈ ಹಿಂದೆ ಚಿತ್ರ ಆಗಸ್ಟ್ 15 ರಂದು ಬಿಡುಗಡೆ ಆಗಬೇಕಾಗಿತ್ತು. ಆದರೆ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಬಾಕಿ ಇದ್ದ ಕಾರಣ ಬಿಡುಗಡೆ ದಿನಾಂಕವನ್ನು ಮುಂದಕ್ಕೆ ಹಾಕಲಾಯಿತು.
ಈ ವರ್ಷದ ಕೊನೆಯಲ್ಲಿ ಬಿಡುಗಡೆ ಆಗುತ್ತಿರುವ 45 ಚಿತ್ರ ಚಿತ್ರ ಪ್ರೇಮಿಗಳಲ್ಲಿ ಸಾಕಷ್ಟು ಕುತೂಹಲ ಉಂಟು ಮಾಡಿದೆ.





Be the first to comment