ಆಸ್ಟ್ರೇಲಿಯಾದ ನೆಲದಲ್ಲಿ 2025ರಲ್ಲೇ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಭಾರತದ ಚಿತ್ರ ಎಂಬ ಹೆಗ್ಗಳಿಕೆ ‘ಕಾಂತಾರ ಚಾಪ್ಟರ್ 1′ ಚಿತ್ರಕ್ಕೆ ಸಿಕ್ಕಿದೆ.
ಈ ಬಗ್ಗೆ ಹೊಂಬಾಳೆ ಸಿನಿಮಾ ಮಾಹಿತಿ ನೀಡಿದೆ. ಆದರೆ ಎಷ್ಟು ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ ಎಂಬ ಬಗ್ಗೆ ಅವರು ಮಾಹಿತಿ ನೀಡಿಲ್ಲ. ‘ಕಾಂತಾರ: ಚಾಪ್ಟರ್ 1’ ಸಿನಿಮಾ ವಿಶ್ವದ 30 ದೇಶಗಳಲ್ಲಿ ಒಟ್ಟಿಗೆ ರಿಲೀಸ್ ಆಯಿತು. ಆಸ್ಟ್ರೇಲಿಯಾದ ಕನ್ನಡಿಗರು ‘ಕಾಂತಾರ ಚಾಪ್ಟರ್ 1′ ಇಷ್ಟಪಟ್ಟು ವೀಕ್ಷಿಸಿದ್ದಾರೆ.
ಈ ಚಿತ್ರ ಕನ್ನಡ ಮಾತ್ರವಲ್ಲದೆ ಇಂಗ್ಲಿಷ್ ಭಾಷೆಯಲ್ಲೂ ವೀಕ್ಷಣೆಗೆ ಲಭ್ಯವಿದೆ. ಹೀಗಾಗಿ ಆಸ್ಟ್ರೇಲಿಯಾ ಮಂದಿಯನ್ನು ಈ ಸಿನಿಮಾ ಸೆಳೆದುಕೊಂಡಿದೆ.
ಈ ವರ್ಷ ಭಾರತದಲ್ಲಿ ಹಲವು ಸೂಪರ್ ಹಿಟ್ ಚಿತ್ರಗಳು ರಿಲೀಸ್ ಆದವು. ಈ ಎಲ್ಲಾ ದಾಖಲೆಗಳನ್ನು ‘ಕಾಂತಾರ: ಚಾಪ್ಟರ್ 1’ ಸಿನಿಮಾ ಮೀರಿಸಿದೆ. ರಿಷಬ್ ಶೆಟ್ಟಿ ಡೈರೆಕ್ಷನ್ ಮಾಡಿ, ಆಕ್ಟಿಂಗ್ ಮಾಡಿದ ‘ಕಾಂತಾರ ಚಾಪ್ಟರ್ 1’ ಬಾಕ್ಸ್ ಆಫೀಸ್ನಲ್ಲಿ ಎಲ್ಲಾ ದಾಖಲೆಗಳನ್ನೂ ಬರೆಯೋಕೆ ಶುರು ಮಾಡಿದೆ.
ಕೇರಳದಲ್ಲಿಯೂ ‘ಕಾಂತಾರ: ಚಾಪ್ಟರ್ 1’ ಸಿನಿಮಾ ಅಬ್ಬರಿಸುತ್ತಿದೆ. ಸಿನಿಮಾ 55 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ ಎಂದು ಚಿತ್ರತಂಡದವರು ಮಾಹಿತಿ ನೀಡಿದ್ದಾರೆ.
—–





Be the first to comment