ತಮಿಳುನಾಡಿನಲ್ಲಿ ಹಿಂದಿ ಸಿನಿಮಾಗಳಿಗೆ ನಿಷೇಧ?

ತಮಿಳುನಾಡು ಸರ್ಕಾರ  ಹಿಂದಿ ಭಾಷೆಯ ಹೇರಿಕೆಯನ್ನು ತಡೆಯುವ ಉದ್ದೇಶದಿಂದ ಹಿಂದಿ ಸಿನಿಮಾಗಳು, ಹಿಂದಿ ಹಾಡುಗಳು,  ಹಿಂದಿ ಬೋರ್ಡ್‌ಗಳನ್ನು ರಾಜ್ಯಾದ್ಯಂತ ನಿಷೇಧಿಸುವ ನಿರ್ಧಾರ ಕೈಗೊಳ್ಳಲಾಗಿದೆ.

ಹಿಂದಿ ಭಾಷೆಯ ಹೇರಿಕೆಯನ್ನು ತಡೆಯುವ  ಬಿಲ್‌ನ್ನು ಮುಂದಿನ ವಿಧಾನಸಭಾ ಅಧಿವೇಶನದಲ್ಲಿ ಮಂಡಿಸಿ ಅಂಗೀಕರಿಸಲು ಸರ್ಕಾರ ಸಜ್ಜಾಗಿದೆ. ಡಿಎಂಕೆ ಸರ್ಕಾರ  ಹಿಂದಿ ಭಾಷೆಯನ್ನು ವಿರೋಧಿಸುತ್ತಿಲ್ಲ. ಆದರೆ ಹಿಂದಿ ಹೇರಿಕೆ ತಮಿಳುನಾಡಿನಲ್ಲಿ  ಬೇಡ ಎಂಬ ನಿಲುವು ಮುಂದುವರೆಸಿದೆ.

“ಭಾಷೆ ಉಳಿದರೆ ಜನಾಂಗ ಉಳಿಯುತ್ತದೆ” ಎಂದು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್  ಹೇಳಿಕೆ ನೀಡಿದ್ದು, ದ್ರಾವಿಡ ಅಸ್ಮಿತೆಯ ವಿಷಯವನ್ನು ಎತ್ತಿಹಿಡಿದಿದ್ದಾರೆ. ಡಿಎಂಕೆ ಸರ್ಕಾರದ ಈ ನಿರ್ಧಾರ ರಾಜಕೀಯ ವಲಯದಲ್ಲಿ ಪರ-ವಿರೋಧ ಚರ್ಚೆಗೆ ಕಾರಣವಾಗಿದೆ.

ಬಿಜೆಪಿ ವಿರುದ್ಧ ಸ್ಟಾಲಿನ್ ಆರೋಪ ಮಾಡಿದ್ದು, ಕೇಂದ್ರ ಸರ್ಕಾರವು ಶೈಕ್ಷಣಿಕ ನೀತಿಯ ಮೂಲಕ ಹಿಂದಿ ಮತ್ತು ಸಂಸ್ಕೃತವನ್ನು ಪ್ರಚಾರ ಮಾಡುತ್ತಿದೆ ಎಂದು ಹೇಳಿದ್ದಾರೆ. 2026ರಲ್ಲಿ ನಡೆಯಲಿರುವ ತಮಿಳುನಾಡು ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು, ಹಿಂದಿ ಭಾಷೆಯ ಹೇರಿಕೆಯನ್ನು ತಡೆಯುವ  ಬಿಲ್‌ನ್ನು ಡಿಎಂಕೆ ರಾಜಕೀಯ ತಂತ್ರವಾಗಿ ಬಳಸಿಕೊಳ್ಳುವ ಸಾಧ್ಯತೆ ಇದೆ.

ನಟ ದಳಪತಿ ವಿಜಯ್ ತಮ್ಮ  ಪಕ್ಷ ಸ್ಥಾಪಿಸಿ ಚುನಾವಣೆಗೆ ಸಜ್ಜಾಗಿರುವುದರಿಂದ ಡಿಎಂಕೆ ಮತ ಬ್ಯಾಂಕ್‌ ಬಲಪಡಿಸಲು ದ್ರಾವಿಡ ಮತ್ತು ಭಾಷಾ ಅಸ್ಮಿತೆಯ ವಿಚಾರವನ್ನು ಮುಂದಿಟ್ಟುಕೊಂಡಿದೆ ಎನ್ನಲಾಗಿದೆ. ಸರ್ಕಾರ ಬಿಲ್‌ನ್ನು ಮಂಡಿಸಿದ ನಂತರ  ಅಂತಿಮ ತೀರ್ಮಾನ ಹೊರಬೀಳಲಿದೆ.

—–

 

Be the first to comment

Leave a Reply

Your email address will not be published. Required fields are marked *

Translate »
error: Content is protected !!