‘ಸಮಯದ ಹಿಂದೆ ಸವಾರಿ’ ಜೂನ್ 28 ರಂದು ತೆರೆಗೆ

ಜೋಗಿ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಚಿರಪರಿಚಿತರಾದ ಗುರುರಾಜ್ ಹೊಸಕೋಟೆ ಅವರ ಮಗ ರಾಜಗುರು ಅವರು ಸಮಯದ ಹಿಂದೆ ಸವಾರಿ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುವ ಮೂಲಕ ಚಂದನವನಕ್ಕೆ ಎಂಟ್ರಿ ಕೊಟ್ಟಿದ್ದಾರೆ.ಖ್ಯಾತ ಸಾಹಿತಿ ಗಿರೀಶ್‍ರಾವ್ (ಜೋಗಿ) ಬರೆದಿರುವ ನದಿಯ ನೆನಪಿನ ಹಂಗು ಎಂಬ ಕೃತಿಯನ್ನು ಆಧರಿಸಿ ಅದೇ ಹೆಸರಿನಲ್ಲಿ ನಾಟಕ ಬಂದಿದೆ, ಆ ಹೆಸರು ಚಿತ್ರರಂಗಕ್ಕೆ ಸೂಕ್ತವಾಗುವುದಿಲ್ಲ ಎಂದು ಅರಿತು ಚಿತ್ರಕ್ಕೆ ಸಮಯದ ಹಿಂದೆ ಸವಾರಿ ಎಂದು ಹೆಸರಿಟ್ಟಿದ್ದಾರೆ.

ರಂಗಭೂಮಿ ಕಲಾವಿದರೇ ಸೇರಿಕೊಂಡು ಮಾಡಿರುವ ಸಮಯದ ಹಿಂದೆ ಸವಾರಿ ಚಿತ್ರಕ್ಕೆ ಕುಂದಾಪುರ, ಮಂಗಳೂರು ಮುಂತಾದ ಕಡೆ ಚಿತ್ರೀಕರಣ ಮಾಡಿದ್ದು ಚಿತ್ರ ಈಗ ಪೋಸ್ಟ್ ಪ್ರೊಡಕ್ಷನ್ ಮುಗಿಸಿಕೊಂಡಿದ್ದು ಚಿತ್ರ ಬಿಡುಗಡೆಯ ಹಂತಕ್ಕೆ ಬಂದು ನಿಂತಿದೆ.ಸಮಯದ ಹಿಂದೆ ಸವಾರಿ ಚಿತ್ರ ಆರಂಭಗೊಂಡಾಗಿನಿಂದಲೂ ಹಲವು ಅಡಚಣೆಗಳು ಎದುರಾದರೂ ಸಿನಿಮಾ ಬಿಡುಗಡೆಯ ಹಂತಕ್ಕೆ ಬಂದು ನಿಂತಿದೆ. ಮೊದಲು ಈ ಚಿತ್ರವನ್ನು ನಿರ್ಮಿಸಲು ಮುಂದಾದ ನಿರ್ಮಾಪಕರು ಹಿಂದೆ ಸರಿದಾಗ, ಚಿತ್ರತಂಡದ ಮೂವರು ಸೇರಿ ಶೂಟಿಂಗ್ ಮುಗಿಸಿದ್ದಾರೆ.

ಸೆಟ್‍ನಲ್ಲಿ ಪ್ರಾಪರ್ಟಿ ಕಳೆದು ಹೋಗುವುದು, ಕಲಾವಿದರು ಸಂಭಾವನೆ ನೀಡಿದರಷ್ಟೇ ನಟಿಸುವುದಾಗಿ ಹೇಳುವುದು ಇದೆಲ್ಲದರೆ ಜೊತೆಗೆ ನಿರ್ದೇಶಕರ ಪತ್ನಿಗೆ ಅಪಘಾತವಾದರೂ, ಆಕೆ ನೀಡಿದ ಧೈರ್ಯದ ಮಾತುಗಳು ಚಿತ್ರ ತಂಡಕ್ಕೆ ಹುಮ್ಮಸ್ಸು ನೀಡಿದೆ.ಸಮಯದ ಹಿಂದೆ ಸವಾರಿಯು ಚಿತ್ರವು ಮರ್ಡರ್ ಮಿಸ್ಟ್ರಿ ಕಥೆಯನ್ನು ಹೊಂದಿದ್ದು ಒಂದು ಊರಿನಲ್ಲಿ ನಡೆದ ಕೊಲೆಯ ಜಾಡನ್ನು ಹಿಂಬಾಲಿಸಿ ನಡೆದಾಗ ಅದು ಹಲವು ದಾರಿಗಳಲ್ಲಿ ಕರೆದುಕೊಂಡುಹೋಗುತ್ತದೆ, ಅದು ಹೇಗೆ, ಎಲ್ಲಿಗೆ ಎಂಬುದನ್ನು ರಾಜ್‍ಗುರು ಕುತೂಹ ರೀತಿಯಲ್ಲಿ ಹೇಳಲು ಹೊರಟಿದ್ದು ಸಬ್‍ಟೈಟಲ್‍ನಲ್ಲಿ ಬಲ್ಲ ಮೂಲಗಳ ಪ್ರಕಾರ ಎಂಬ ಪದ ಕೂಡ ಕುತೂಹಲ ಮೂಡಿಸಿದೆ.ಗುರುರಾಜಹೊಸಕೋಟೆಯ ಪುತ್ರ ರಾಜ್‍ಗುರು ಅವರೇ ಈ ಚಿತ್ರಕ್ಕೆ ಸಾಹಿತ್ಯಘಿ, ಸಂಗೀತ, ಸಂಭಾಷಣೆ ಬರೆದಿದ್ದು, ನಿರ್ದೇಶನದ ಹೊಣೆ ಹೊತ್ತಿದ್ದರೆ, ಚಿತ್ರದ ನಿರ್ಮಾಪಕ ಹಾಗೂ ನಾಯಕನಟ ರಾಹುಲ್‍ಹೆಗ್ಡೆ ಈ ಚಿತ್ರದಲ್ಲಿ ಕೊಲೆಯನ್ನು ಭೇದಿಸುವ ನಿರ್ದೇಶಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.ಚಳುವಳಿಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವ ಪ್ರಕೃತಿ ಚಿತ್ರದ ನಾಯಕಿ. ಉಳಿದಂತೆ ರಂಜಿತ್‍ಶೆಟ್ಟಿಘಿ, ಪ್ರಕೃತಿ, ಗ್ಲೋರಿ, ಶಿವಶಂಕರ್, ಪ್ರವೀಣ್ ಹೆಗ್ಡೆ ಮುಂತಾದವರು ಉಳಿದ ತಾರಾಗಣದಲ್ಲಿದ್ದಾರೆ. ಚಿತ್ರದ ಒಂದು ಗೀತೆಯನ್ನು ಡಾ.ನಾಗೇಂದ್ರಪ್ರಸಾದ್ ಬರೆದಿದ್ದರೆ, ರಂಜಿತ್‍ಹೆಗ್ಡೆ, ಪ್ರವೀಣ್‍ಹೆಗ್ಡೆ ಸಹ ನಿರ್ಮಾಪಕರಾಗಿದ್ದಾರೆ.ಬೀದಿನಾಟಕಗಳ ಮೂಲಕ ಈ ಚಿತ್ರಕ್ಕೆ ಪ್ರಚಾರ ಕೊಡಲು ನಿರ್ಧರಿಸಿರುವ ನಿರ್ದೇಶಕ ರಾಜಗುರು ಅವರು ಚಿತ್ರವನ್ನು ಜೂನ್ 28 ರಂದು ತೆರೆಗೆ ತರಲು ನಿರ್ಧರಿಸಿದ್ದಾರೆ. 130 ನಿಮಿಷಗಳ ಪ್ರದರ್ಶನ ಈ ಚಿತ್ರದಲ್ಲಿ 5 ಹಾಡುಗಳಿದ್ದು ಕೇಳುಗರನ್ನು ರಂಜಿಸಲಿದೆ.

ಸಮಯದ ಹಿಂದೆ ಸವಾರಿ ಚಿತ್ರದಲ್ಲಿ ನಾವು ನೂರು ಬಾರಿ ಗೆದ್ದವರಲ್ಲ ಸಾವಿರ ಬಾರಿ ಸೋತವರು ಎಂಬ ಹಾಡು ಗಮನ ಸೆಳೆದಂತೆ ಚಿತ್ರತಂಡದವರು ತಮ್ಮ ಮೊದಲ ಪ್ರಯತ್ನದಲ್ಲೇ ಗೆಲ್ಲುವಂತಾಗಲಿ.

This Article Has 1 Comment
  1. Pingback: DevSecOps Definition

Leave a Reply

Your email address will not be published. Required fields are marked *

Translate »
error: Content is protected !!