ನ.28 ರಂದು ‘ಕೊರಗಜ್ಜ’ ತೆರೆಗೆ

ಕರಾವಳಿ ಕರ್ನಾಟಕದ ಸಂಪ್ರದಾಯದ ಚಿತ್ರ ‘ಕೊರಗಜ್ಜ’ ನವೆಂಬರ್ 28 ರಂದು ಆರು ಭಾಷೆಗಳಲ್ಲಿ ಚಿತ್ರಮಂದಿರಗಳಲ್ಲಿ ತೆರೆಗೆ ಬರಲಿದೆ.

ಸಕ್ಸಸ್ ಫಿಲ್ಮ್ಸ್ ಮತ್ತು ತ್ರಿವಿಕ್ರಮ್ ಸಿನಿಮಾಸ್ ಬ್ಯಾನರ್ ಅಡಿಯಲ್ಲಿ ತ್ರಿವಿಕ್ರಮ್ ಸಪಲ್ಯ ನಿರ್ಮಿಸಿ, ಸುಧೀರ್ ಅತ್ತಾವರ  ನಿರ್ದೇಶನದ ‘ಕೊರಗಜ್ಜ’ ದೇಶದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲು ಸಜ್ಜಾಗಿದೆ. ಚಿತ್ರದ ಫಸ್ಟ್ ಲುಕ್ ಟೀಸರ್ ಮತ್ತು 3ಡಿ ಮೋಷನ್ ಪೋಸ್ಟರ್ ಅನ್ನು ಇತ್ತೀಚೆಗೆ ನಡೆದ ಭವ್ಯ ಸಮಾರಂಭದಲ್ಲಿ ಅನಾವರಣಗೊಳಿಸಲಾಯಿತು.

ಎರಡು ದಶಕಗಳ ಹಿಂದೆ ದೈವತ್ವವನ್ನು ಪಡೆದ ಕೊರಗಜ್ಜನ ಆಧ್ಯಾತ್ಮಿಕ ಪ್ರಯಾಣವನ್ನು ಚಿತ್ರ ತೆರೆ ಮೇಲೆ ತರಲಿದೆ.  ಕೊರಗಜ್ಜ ಚಿತ್ರದಲ್ಲಿ ಕಬೀರ್ ಬೇಡಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಭವ್ಯಾ ಅವರು ರಾಣಿ ಪಂಜಂಡಾಯಿ ಪಾತ್ರದಲ್ಲಿ ನಟಿಸಿದ್ದಾರೆ. ಕೊರಗಜ್ಜನ ಸಾಕು ತಾಯಿಯಾಗಿ  ಶ್ರುತಿ ನಟಿಸಿದ್ದಾರೆ.  ಸಂದೀಪ್ ಸೋಪರ್ಕರ್, ಗಣೇಶ್ ಆಚಾರ್ಯ,  ನವೀನ್ ಡಿ ಪಡೀಲ್ ನಟಿಸಿದ್ದಾರೆ.

ಚಿತ್ರಕ್ಕೆ ಮನೋಜ್ ಪಿಳ್ಳೈ ಅವರ ಛಾಯಾಗ್ರಹಣ, ಗೋಪಿ ಸುಂದರ್ ಅವರ ಸಂಗೀತ ಸಂಯೋಜನೆ ಮತ್ತು ಜಿತ್ ಜೋಷಿ ಮತ್ತು ವಿದ್ಯಾಧರ್ ಶೆಟ್ಟಿಯವರ ಸಂಕಲನವಿದೆ.

ಚಿತ್ರ ಕನ್ನಡ, ತುಳು, ಮಲಯಾಳಂ, ತಮಿಳು, ತೆಲುಗು ಮತ್ತು ಹಿಂದಿ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!