‘ದಿ ಡೆವಿಲ್’ ಚಿತ್ರದ ‘ಒಂದೇ ಒಂದು ಸಲ’ ಹಾಡು ಯೂಟ್ಯೂಬ್ನಲ್ಲಿ ಟ್ರೆಂಡಿಂಗ್ ಆಗಿದೆ.
ದರ್ಶನ್ ಮತ್ತು ರಚನಾ ರೈ ಕಾಣಿಸಿಕೊಂಡಿರುವ ಈ ಹಾಡು ಆನ್ಲೈನ್ನಲ್ಲಿ ಸಂಚಲನ ಮೂಡಿಸಿದೆ. 53 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಹಾಡು ಗಳಿಸಿದೆ. ಈ ಹಾಡು ಟ್ರೆಂಡಿಂಗ್ ಮ್ಯೂಸಿಕ್ ವಿಡಿಯೋಗಳ ಪಟ್ಟಿಯಲ್ಲಿ ನಂ. 1 ಸ್ಥಾನದಲ್ಲಿದೆ.
ಈ ಹಾಡಿಗೆ ಪ್ರಮೋದ್ ಮರವಂತೆ ಸಾಹಿತ್ಯ ಬರೆದಿದ್ದು, ಕಪಿಲ್ ಕಪಿಲನ್ ಮತ್ತು ಚಿನ್ಮಯಿ ಶ್ರೀಪಾದ ಹಾಡಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ ಸಂಯೋಜಿಸಿದ್ದಾರೆ ಮತ್ತು ಸಿಆರ್ ಬಾಬಿ ಹೆಚ್ಚುವರಿ ಗಾಯನ ಮಾಡಿದ್ದಾರೆ.
ಹಾಡನ್ನು ಥೈಲ್ಯಾಂಡ್ನಲ್ಲಿ ಅದ್ಭುತವಾದ ದ್ವೀಪದ ಹಿನ್ನೆಲೆಯಲ್ಲಿ ಚಿತ್ರೀಕರಿಸಲಾಗಿದೆ. ಸಂತು ಮಾಸ್ಟರ್ ಅವರ ನೃತ್ಯ ಸಂಯೋಜನೆಯಿದೆ.
ಪ್ರಕಾಶ್ ವೀರ್ ನಿರ್ದೇಶನ, ದರ್ಶನ್ ಮತ್ತು ರಚನಾ ರೈ ನಟಿಸಿರುವ ಬಹುನಿರೀಕ್ಷಿತ ಚಿತ್ರ ‘ದಿ ಡೆವಿಲ್’ ಚಿತ್ರತಂಡ ಮೊದಲ ಹಾಡು ‘ಇದ್ರೆ ನೆಮ್ದಿಯಾಗ್ ಇರ್ಬೇಕ್’ ನ್ನು ಆಗಸ್ಟ್ 15 ರಂದು ಬಿಡುಗಡೆ ಮಾಡಲಾಯಿತು. ಈಗಾಗಲೇ ಹಾಡು ಮೆಚ್ಚುಗೆ ಪಡೆದಿದೆ.
‘ತಾರಕ್’ ಚಿತ್ರದ ನಂತರ ದರ್ಶನ್ ಮತ್ತು ಪ್ರಕಾಶ್ ವೀರ್ ಡೆವಿಲ್ ಮೂಲಕ ಮತ್ತೆ ಒಂದಾಗಿದ್ದಾರೆ. ಚಿತ್ರವನ್ನು ಶ್ರೀ ಜೈಮಾತಾ ಕಂಬೈನ್ಸ್ ಬ್ಯಾನರ್ ಅಡಿಯಲ್ಲಿ ಜೆ ಜಯಮ್ಮ ಮತ್ತು ಪ್ರಕಾಶ್ ವೀರ್ ನಿರ್ಮಿಸಿದ್ದಾರೆ. ಚಿತ್ರಕ್ಕೆ ಪ್ರಕಾಶ್ ವೀರ್ ಅವರೇ ಕಥೆ ಮತ್ತು ಚಿತ್ರಕಥೆ ಬರೆದು ಆ್ಯಕ್ಷನ್ ಕಟ್ ಹೇಳಿದ್ದಾರೆ.
ಚಿತ್ರದ ತಾಂತ್ರಿಕ ತಂಡದಲ್ಲಿ ಛಾಯಾಗ್ರಾಹಕ ಸುಧಾಕರ್ ಎಸ್ ರಾಜ್, ಸಂಗೀತ ಸಂಯೋಜಕ ಬಿ ಅಜನೀಶ್ ಲೋಕನಾಥ್, ಸಂಪಾದಕ ಹರೀಶ್ ಕೊಮ್ಮೆ, ಕಲಾ ನಿರ್ದೇಶಕ ಮೋಹನ್ ಬಿ ಕೆರೆ ಮತ್ತು ರಾಮ್-ಲಕ್ಷ್ಮಣ್ ಅವರ ಸಾಹಸ ಸಂಯೋಜನೆಯಿದೆ.
ಚಿತ್ರದಲ್ಲಿ ತುಳಸಿ, ಅಚ್ಯುತ್ ಕುಮಾರ್, ವಿನಯ್ ಗೌಡ, ಮಹೇಶ್ ಮಂಜ್ರೇಕರ್, ಶ್ರೀನಿವಾಸ ಪ್ರಭು ಮತ್ತು ಶುಭ ರಾಜ್ ಇತರರು ನಟಿಸಿದ್ದಾರೆ. ಡಿಸೆಂಬರ್ 12 ರಂದು ವಿಶ್ವದಾದ್ಯಂತ ತೆರೆಗೆ ಬರಲಿದೆ.





Be the first to comment