ಮಾರಿಗಲ್ಲು

‘ಮಾರಿಗಲ್ಲು’ ವೆಬ್ ಸರಣಿಯಲ್ಲಿ ಅಪ್ಪು !

ಜೀ5 ಒಟಿಟಿ ಮತ್ತು ‘ಪಿಆರ್‌ಕೆ ಪ್ರೊಡಕ್ಷನ್ಸ್’ ನಿರ್ಮಾಣದ ‘ಮಾರಿಗಲ್ಲು’ ವೆಬ್ ಸರಣಿಯಲ್ಲಿ ಪುನೀತ್ ರಾಜಕುಮಾರ್ ಕಾಣಿಸಿಕೊಂಡಿದ್ದಾರೆ.

ವೆಬ್ ಸರಣಿ ಕದಂಬ ರಾಜವಂಶದ ಸ್ಥಾಪಕ ಮತ್ತು ಕರ್ನಾಟಕದ ಮೊದಲ ರಾಜ ಮಯೂರ ಶರ್ಮ ಅವರ ಪಾತ್ರವನ್ನು ಒಳಗೊಂಡಿದೆ.ಈ ಪಾತ್ರದಲ್ಲಿ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಕಾಣಿಸಿಕೊಂಡಿದ್ದಾರೆ.

‘ಮಾರಿಗಲ್ಲು’ ವೆಬ್ ಸರಣಿ ಅಕ್ಟೋಬರ್ 31ರಿಂದ ವೀಕ್ಷಣೆಗೆ ಲಭ್ಯವಾಗಲಿದೆ. ವೆಬ್ ಸರಣಿಯ ಟೀಸರ್ ಬಿಡುಗಡೆಗೊಂಡಿದ್ದು, ಕುತೂಹಲ ಮೂಡಿಸಿದೆ.

ಟೀಸರ್ ಧನಂಜಯ ಅವರ ನಿರೂಪಣಾ ಧ್ವನಿಯಿಂದ ಆರಂಭವಾಗುತ್ತಿದೆ. 4ನೇ ಶತಮಾನದಲ್ಲಿ ಕದಂಬರ ಆಳ್ವಿಕೆಯ ಕಾಲಘಟ್ಟವನ್ನು ಆಧರಿಸಿದ ಈ ಸರಣಿಯಲ್ಲಿ ಮಯೂರ ಶರ್ಮನ ಪರಂಪರೆ ಮತ್ತು ಕದಂಬ ಕಾಲದ ನಿಧಿಯನ್ನು ಹುಡುಕುವ ಶಿರಸಿಯ ಯುವಕರ ಕಥೆ ಇದೆ. ಶಿರಸಿಯ ಬೇಡರ ಸಂಸ್ಕೃತಿ ಮತ್ತು ವೇಷಭೂಷಣ ಸರಣಿಯಲ್ಲಿದೆ.

ವೆಬ್ ಸರಣಿಯಲ್ಲಿ ರಂಗಾಯಣ ರಘು, ಗೋಪಾಲಕೃಷ್ಣ ದೇಶಪಾಂಡೆ, ಪ್ರವೀಣ್ ತೇಜ್, ಎ.ಎಸ್. ಸೂರಜ್, ಪ್ರಶಾಂತ್ ಸಿದ್ದಿ, ನಿನಾದ ಹೃತ್ಸಾ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಮಾರಿಗಲ್ಲು

Be the first to comment

Leave a Reply

Your email address will not be published. Required fields are marked *

Translate »
error: Content is protected !!