ಯಾರಿಗೂ ಹೇಳ್ಬೇಡಿ

ಅ.17ರಂದು ಯಾರಿಗೂ ಹೇಳ್ಬೇಡಿ ತೆರೆಗೆ

ಯಾರೇ ನೀ ಮೋಹಿನಿ ಖ್ಯಾತಿಯ ಚೇತನ್ ನಾಯಕ ನಟನಾಗಿ ಪೂರ್ಣ ಪ್ರಮಾಣದಲ್ಲಿ ಕಾಣಿಸಿಕೊಂಡಿರುವ ಯಾರಿಗೂ ಹೇಳ್ಬೇಡಿ ಚಿತ್ರ ಅಕ್ಟೋಬರ್ 17ರಂದು ತೆರೆಗೆ ಬರಲಿದೆ.

ದಶಕದ ಹಿಂದೆ ಅನಂತನಾಗ್ ಹಾಗೂ ವನಿತಾ ವಾಸು ನಟನೆಯ ಹಾಸ್ಯಮಯ ಚಿತ್ರ ಯಾರಿಗೂ ಹೇಳ್ಬೇಡಿ ಸೂಪರ್ ಹಿಟ್ ಆಗಿತ್ತು. ಈಗ ಅದೇ ಹೆಸರಿನ ಶೀರ್ಷಿಕೆಯಲ್ಲಿ ಚಿತ್ರ ಬಿಡುಗಡೆ ಆಗಲಿದೆ. ಅಪ್ಪಣ್ಣ ರಾಮದಾಸ್ ಅವರು ಚಿತ್ರದ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ನಾಯಕಿಯಾಗಿ ಚೈತ್ರ ಆಚಾರ್ ಹಾಗೂ ಅಶ್ವಿನಿ ಪೊಲೆಪಲ್ಲಿ ನಟಿಸಿದ್ದಾರೆ.

ಈಗಾಗಲೇ ಚಿತ್ರದ ಟ್ರೈಲರ್ ಬಿಡುಗಡೆಗೊಂಡಿದ್ದು ಗಮನ ಸೆಳೆದಿದೆ. ಚಿತ್ರವನ್ನು ಶಿವ ಗಣೇಶ್ ಅವರು ನಿರ್ದೇಶನ ಮಾಡುತ್ತಿದ್ದಾರೆ. ಸುನಿಲ್ ಕುಮಾರ್ ಹಾಗೂ ಹರೀಶ್ ಅಮ್ಮಿನೇನಿ ಚಿತ್ರ ನಿರ್ಮಾಣ ಮಾಡಿದ್ದಾರೆ.

ವಿಡಿಯೋ ಜಾಕಿ ಒಬ್ಬ ಸುಳ್ಳು ಹೇಳಿ ಮದುವೆ ಆದಾಗ ಮುಂದೆ ಆ ಸುಳ್ಳನ್ನು ಮುಚ್ಚಲು ಯಾವ ರೀತಿ ಪರದಾಡುತ್ತಾನೆ ಎನ್ನುವುದು ಚಿತ್ರದ ಕಥೆಯಾಗಿದೆ. ಶರತ್ ಲೋಹಿತಾಶ್ವ ಹಾಗೂ ಚೈತ್ರ ರಾವ್ ಪೋಷಕ ಪಾತ್ರಗಳಲ್ಲಿ ನಟಿಸಿದ್ದಾರೆ.

ಡೇವಿಡ್ ಆನಂದ್ ರಾಜ್ ಅವರ ಛಾಯಾಗ್ರಹಣ ಚಿತ್ರಕ್ಕಿದೆ.

ಯಾರಿಗೂ ಹೇಳ್ಬೇಡಿ

Be the first to comment

Leave a Reply

Your email address will not be published. Required fields are marked *

Translate »
error: Content is protected !!