ಈ ವರ್ಷದ ಮೊದಲ ಬ್ಲಾಕ್ಬಸ್ಟರ್ ಸಿನಿಮಾ ‘ಸು ಫ್ರಮ್ ಸೋ’ ಅ.12ರ ಭಾನುವಾರ ಸಂಜೆ 6 ಗಂಟೆಗೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗಲಿದೆ.
ಈ ಬಗ್ಗೆ ವಾಹಿನಿ ಪ್ರಕಟಣೆ ನೀಡಿದೆ. ಬೇಜಾರು, ಟೆನ್ಷನ್ ಎಲ್ಲಾ ಬದಿಗಿಡಿ. ಮನೆಯವ್ರ ಜೊತೆ ಕೂತು ಈ ವರ್ಷದ ಮೊದಲ ಬ್ಲಾಕ್ಬಸ್ಟರ್ ಸಿನಿಮಾ ಸು ಫ್ರಮ್ ಸೋ ನೋಡಿ ಎಂದು ತಿಳಿಸಿದೆ.
ಕಡಿಮೆ ಬಜೆಟ್ನಲ್ಲಿ ನಿರ್ಮಾಣಗೊಂಡು ಬಾಕ್ಸ್ ಆಫೀಸ್ನಲ್ಲಿ ಕೆಲ ಕೋಟಿ ಕಲೆಕ್ಷನ್ ಮಾಡಿರುವ ‘ಸು ಫ್ರಮ್ ಸೋ’ ಚಿತ್ರದ ರೀಮೇಕ್ ಹಕ್ಕು ಹಲವು ಭಾಷೆಗಳಿಗೆ ಈಗಾಗಲೇ ಮಾರಾಟ ಆಗಿದೆ. ರಾಜ್ ಬಿ ಶೆಟ್ಟಿ ಅವರು ತಮ್ಮ ಲೈಟರ್ ಬುದ್ಧ ಫಿಲ್ಮ್ಸ್ ಬ್ಯಾನರ್ ಅಡಿ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಜೆಪಿ ತುಮಿನಾಡ್ ಚಿತ್ರ ನಿರ್ದೇಶಿಸಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಶಶಿಧರ್ ಶೆಟ್ಟಿ ಬರೋಡಾ, ರವಿ ರೈ ಕಳಸ ಚಿತ್ರ ನಿರ್ಮಾಣ ಮಾಡಿದ್ದಾರೆ.
ಚಿತ್ರದಲ್ಲಿ ಶನೀಲ್ ಗೌತಮ್, ಸಂಧ್ಯಾ ಅರಕೆರೆ, ಪ್ರಕಾಶ್ ತುಮಿನಾಡ್, ದೀಪಕ್ ರೈ ಪಣಾಜೆ, ಮೈಮ್ ರಾಮ್ದಾಸ್ ನಟಿಸಿದ್ದಾರೆ. ಜುಲೈ 25, 2025ರಂದು ಕನ್ನಡದಲ್ಲಿ ಬಿಡುಗಡೆ ಆದ ಸಿನಿಮಾ ಆಗಸ್ಟ್ 1ರಂದು ಮಲಯಾಳಂ, ಆಗಸ್ಟ್ 8ರಂದು ತೆಲುಗಿನಲ್ಲಿ ತೆರೆಕಂಡು ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ.
2025ರ ಅತ್ಯಂತ ಯಶಸ್ವಿ ಚಿತ್ರ ಎನ್ನುವ ಖ್ಯಾತಿಗೆ ಸು ಫ್ರಮ್ ಸೋ ಪಾತ್ರವಾಗಿದ್ದು ಜಿಯೋ ಹಾಟ್ ಸ್ಟಾರ್ ನಲ್ಲಿ ಕೂಡಾ ಉತ್ತಮ ಪ್ರತಿಕ್ರಿಯೆ ಪಡೆದಿದೆ.





Be the first to comment