‘ಮಾರ್ಲಾಮಿ’ಮುಹೂರ್ತ

ಮನೆಯ ಹಿರಿಯರನ್ನು ಸ್ಮರಿಸುವುದಕ್ಕಾಗಿಯೇ ಒಂದು ತಿಂಗಳನ್ನು ನಮ್ಮ ಹಿಂದೂ ಶಾಸ್ತ್ರದಲ್ಲಿ ಮೀಸಲಿಡಲಾಗಿದೆ. ಆ ತಿಂಗಳನ್ನು ಪಿತೃ ಪಕ್ಷವೆಂದೇ ಕರೆಯುತ್ತಾರೆ. ಆ ಒಂದು ಆಚರಣೆಗೆ ಮಾರ್ಲಾಮಿ ಹಬ್ಬವೆಂದು ಕರೆಯುತ್ತಾರೆ.ಈ ಆಚರಣೆ ಹೇಗೆ ಬಂತು? ಇದರ ಹಿನ್ನೆಲೆ ಏನು? ಈ ಹಬ್ಬದ ವಿಶೇಷಗಳೇನು? ಈ ಎಲ್ಲಾ ಸಂಗತಿಗಳನ್ನು ಇಟ್ಟುಕೊಂಡು ಈಗ ಸ್ಯಾಂಡಲ್‍ವುಡ್‍ನಲ್ಲಿ ಚಲನಚಿತ್ರ ವೊಂದು ನಿರ್ಮಾಣವಾಗುತ್ತಿದೆ.

ಟಿ.ವಿನಯ್‍ಕುಮಾರ್ ಅವರ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಈ ಚಿತ್ರದ ಮುಹೂರ್ತ ಸಮಾರಂಭ ಕಳೆದ ಸೋಮವಾರ ನೆರವೇರಿತು. ಗವಿಪುರಂ ಗುಟ್ಟಹಳ್ಳಿಯ ಬಂಡೆ ಮಹಾಕಾಳಿಯ ದೇವಸ್ಥಾನದಲ್ಲಿ ನಡೆದ ಮುಹೂರ್ತದ ದೃಶ್ಯಕ್ಕೆ ಬಿಗ್‍ಬಾಸ್ ಖ್ಯಾತಿಯ ಪ್ರಥಮ್ ಕ್ಲ್ಯಾಪ್ ಮಾಡಿದರೆ ಧಾತ್ರಿ ಮಂಜುನಾಥ್ ಕ್ಯಾಮರಾ ಚಾಲನೆ ಮಾಡಿದರು.ಸರಿಗಮಪ ರಿಯಾಲಿಟಿ ಶೋದ ವಿನ್ನರ್ ಚನ್ನಪ್ಪ ನಾಯಕನಾಗಿ ಕಾಣಿಸಿಕೊಳ್ಳುತ್ತಿರುವ ಮಾರ್ಲಾಮಿ ಚಿತ್ರದ ನಾಯಕಿಯಾಗಿ ಪದ್ಮಾವತಿ ಧಾರವಾಹಿ ಖ್ಯಾತಿಯ ವರ್ಷಿತವರ್ಮ ನಟಿಸುತ್ತಿದ್ದಾರೆ. ಎರಿಕ್ ವಿ.ಜಿ. ಯವರ ಛಾಯಾಗ್ರಹಣ ಹಾಗೂ ಅರುಣ್ ಆಂಡ್ರೋ ಅವರ ಸಂಗೀತ ಈ ಚಿತ್ರಕ್ಕಿದೆ.

ಮುಹೂರ್ತದ ನಂತರ ಚಿತ್ರದ ವಿಶೇಷತೆಗಳ ಬಗ್ಗೆ ಮಾತನಾಡಿದ ನಿರ್ದೇಶಕ ವಿನಯ್ ಕುಮಾರ್ ಪಕ್ಕಾ ಗ್ರಾಮೀಣ ಹಿನ್ನೆಲೆಯಲ್ಲಿ ನಡೆಯುವ ಕಥೆಯೇ ಇದು. ಪಿತೃಪಕ್ಷವನ್ನು ಗ್ರಾಮೀಣ ಪ್ರದೇಶಗಳಲ್ಲಿ ತುಂಭಾ ಭಯ ಭಕ್ತಿಯಿಂದ ಆಚರಿಸುತ್ತಾರೆ. ಈ ಹಬ್ಬವನ್ನು ತೋರಿಸುವ ಮೂಲಕ ಸಮಾಜಕ್ಕೆ ಸಂದೇಶ ಹೇಳಲು ಪ್ರಯತ್ನಿಸುತ್ತಿದ್ದೇನೆ.ಈ ಚಿತ್ರದಲ್ಲಿ ಕಥೆಯೇ ಹೀರೋ. ಕಥೆಯಲ್ಲಿ ಸಾಕಷ್ಟು ಟ್ವಿಸ್ಟ್ ಅಂಡ್ ಟರ್ನ್ ಇದೆ. ಚೆನ್ನಪ್ಪ ಅವರ ಪಾತ್ರ ಚಿತ್ರಕ್ಕೆ ಹೊಸ ತಿರುವು ಕೊಡುತ್ತದೆ. ಇದರ ಜೊತೆಗೆ ಹಾರಾರ್ ಟಚ್ ಕೂಡ ಇದೆ. ಚನ್ನರಾಯಪಟ್ಟಣ ಸುತ್ತಮುತ್ತ ನಡೆಯುವ ಕಥೆ ಇದಾಗಿದ್ದು, 95% ಅಲ್ಲೇ ಚಿತ್ರೀಕರಣ ಮಾಡುತ್ತಿದ್ದೇವೆ.

ಉಳಿದಂತೆ ಸಿಟಿ ಬ್ಯಾಕ್‍ಡ್ರಾಪ್‍ನಲ್ಲಿ ನಡೆಯುತ್ತಿದೆ ಎಂದು ಹೇಳಿದರು. ಈ ಚಿತ್ರಕ್ಕೆ ಕುಮಾರ್ ಬಂಡವಾಳ ಹಾಕಿದ್ದು, ಚಿತ್ರದ ಕುರಿತಂತೆ ಮಾತನಾಡುತ್ತಾ, ಮಂಡ್ಯ, ಹಾಸನ ಏರಿಯಾದಲ್ಲಿ ನಡೆಯುವ ಕಥೆ ಇದು. ನಿರ್ದೇಶಕರು ಈ ಕಥೆ ಹೇಳಿದಾಗ ನನಗೆ ತುಂಬಾ ಇಷ್ಟವಾಯಿತು. ಕಥೆಯಲ್ಲಿ ಒಂದಿಷ್ಟು ಸಸ್ಪೆನ್ಸ್ ಹಾರರ್ ಕೂಡ ಇದೆ.ಈ ಚಿತ್ರದ ಕಾನ್ಸೆಪ್ಟ್ ಹೇಗಿರುತ್ತದೆ ಎಂಬುದನ್ನು ಚಿತ್ರ ಮುಗಿದ ನಂತರ ಟ್ರೈಲರ್ ಮಾಡಿ ಅದರ ಮೂಲಕ ಜನರಿಗೆ ಹೇಳಬೇಕೆಂದು ಪ್ಲಾನ್ ಹಾಕಿಕೊಂಡಿದ್ದೇವೆ ಎಂದು ಹೇಳಿದರು. ಮುಖ್ಯ ಅತಿಥಿಯಾಗಿದ್ದ ಪ್ರಥಮ್ ಮಾತನಾಡಿ ನಮ್ಮನ್ನಗಲಿರುವ ಹಿರಿಯರನ್ನು ನೆನಪಿಸಿಕೊಂಡು ಮಾಡುವ ಪೂಜೆಯನ್ನು ಮಾರ್ಲಾಮಿ ಎನ್ನುತ್ತೇವೆ.ಈ ತರದ ಹಳ್ಳಿ ಸೊಗಡಿನ ಸಿನಿಮಾಗಳು ಇನ್ನು ಹೆಚ್ಚು ಬರಬೇಕೆಂದು ಶುಭ ಹಾರೈಸಿದರು. ಚಿತ್ರದಲ್ಲಿ 5 ಹಾಡುಗಳಿದ್ದು, ಅರುಣ್ ಆಂಡ್ರಮ್ ಈ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದ್ದಾರೆ. ವರುಣ್ ಮೋಹನ್ ಜುನೇಜ, ಶೋಭರಾಜ್, ಮುನಿ ಕೆಂಪೇಗೌಡ, ಸುಧಾ, ದಿನೇಶ್ ಗುರೂಜಿ, ರೆಮೋ ಉಳಿದ ತಾರಾಬಳಗದಲ್ಲಿದ್ದಾರೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!