ಪ್ರಗತಿ ಶೆಟ್ಟಿ

ರಿಷಬ್ ಗೆ ಅವರೇ ಸಾಟಿ ಎಂದ ಪತ್ನಿ ಪ್ರಗತಿ ಶೆಟ್ಟಿ

ಕಾಂತಾರ ಚಿತ್ರದ ನಟ ಹಾಗೂ ನಿರ್ದೇಶಕ ರಿಷಬ್ ಶೆಟ್ಟಿ ಅವರಿಗೆ ಅವರೇ ಸಾಟಿ ಎಂದು ರಿಷಬ್ ಶೆಟ್ಟಿ ಪತ್ನಿ ಪ್ರಗತಿ ಶೆಟ್ಟಿ ಅವರು ಹೇಳಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕನ್ನಡ ಜನತೆ ಕಾಂತಾರಾ ಚಿತ್ರವನ್ನು ಮೆಚ್ಚಿದ್ದಾರೆ. ಅದೇ ರೀತಿ ಕಾಂತಾರಾ ಚಾಪ್ಟರ್ 1 ಚಿತ್ರವನ್ನು ನೋಡಿ ಹರಸಬೇಕು ಎಂದು ಅವರು ಮನವಿ ಮಾಡಿದ್ದಾರೆ.

ಈ ಚಿತ್ರಕ್ಕಾಗಿ ಬೆಂಗಳೂರು ಬಿಟ್ಟು ಕುಂದಾಪುರಕ್ಕೆ ಹೋಗಿ ನೆಲೆಸಿದ್ದೇವೆ. ಮಕ್ಕಳನ್ನು ಅಲ್ಲಿನ ಶಾಲೆಗೆ ಸೇರಿಸಿದ್ದೇವೆ ಎಂದು ಐದು ವರ್ಷಗಳಿಂದ ಕಾಂತಾರ ಚಿತ್ರಕ್ಕಾಗಿ ಪಟ್ಟ ಶ್ರಮವನ್ನು ಅವರು ವಿವರಿಸಿದ್ದಾರೆ.

ಒಬ್ಬ ವ್ಯಕ್ತಿ ಕನಸು ಕಂಡಾಗ ಅದನ್ನು ಕನಸು ಮಾಡಲು ಹಲವರ ಸಹಾಯ ಬೇಕಾಗುತ್ತದೆ. ಚಿತ್ರದಲ್ಲಿ ಕೆಲಸ ಮಾಡಿದ ಪ್ರತಿಯೊಬ್ಬರು ಕನಸು ನನಸಾಗಲು ನೆರವಾಗಿದ್ದಾರೆ. ಎಲ್ಲರೂ ಸಿನಿಮಾ ಉತ್ತಮವಾಗಿ ಬರಬೇಕು ಎಂದು ಕೆಲಸ ಮಾಡಿದ್ದಾರೆ. ರಿಷಬ್ ಅವರು ಡ್ಯೂಪ್ ಇಲ್ಲದೆ ಫೈಟ್ ಮಾಡಿದ್ದಾರೆ. ಇದಕ್ಕಾಗಿ ಸ್ಟ್ಯಾಂಡ್ ಮಾಸ್ಟರ್ ಅವರ ಸಹಕಾರವನ್ನು ಮರೆಯುವಂತಿಲ್ಲ ಎಂದರು.

ಕಳೆದ ಮೂರು ವರ್ಷಗಳಿಂದ ಬೆಂಗಳೂರಿನ ಮನೆ ಬಿಟ್ಟು ಕುಂದಾಪುರದಲ್ಲಿ ಇದ್ದೆವು. ಮಾಧ್ಯಮದವರು ಸಂಪರ್ಕಿಸಿದಾಗ ಸಿಗಲು ಆಗಲಿಲ್ಲ. ಅದಕ್ಕಾಗಿ ನಾನು ಕ್ಷಮೆ ಕೇಳುತ್ತೇನೆ ಎಂದು ಅವರು ಹೇಳಿದರು.

ಕಾಂತಾರ

Be the first to comment

Leave a Reply

Your email address will not be published. Required fields are marked *

Translate »
error: Content is protected !!