ಕಮಲ್ ಶ್ರೀದೇವಿ

ಕಮಲ್ ಶ್ರೀದೇವಿ ಟ್ರೈಲರ್ ರಿಲೀಸ್

ವಿಭಿನ್ನ ಶೀರ್ಷಿಕೆಯ ಮೂಲಕ ಗಮನ ಸೆಳೆದಿರುವ ಕಮಲ್ ಶ್ರೀದೇವಿ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರ ಸೆಪ್ಟೆಂಬರ್ 19ರಿಂದ ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

ಕಮಲ್ ಶ್ರೀದೇವಿ ಚಿತ್ರವನ್ನು ಎನ್ ಚಲುವರಾಯಸ್ವಾಮಿ ಅರ್ಪಿಸಿ ಸ್ವರ್ಣಂಬಿಕ ಪಿಚ್ಚರ್ಸ್ ಬ್ಯಾನರ್ ಅಡಿಯಲ್ಲಿ ಬಿ ಕೆ ಧನಲಕ್ಷ್ಮಿ ನಿರ್ಮಿಸಿದ್ದಾರೆ. ರಾಜವರ್ಧನ್ ಸಹ ನಿರ್ಮಾಣ ಚಿತ್ರಕ್ಕಿದೆ.

ಚಿತ್ರದಲ್ಲಿ ಸಚಿನ್ ಚಲುವರಾಯಸ್ವಾಮಿ ನಾಯಕ ನಟನಾಗಿ ನಟಿಸಿದ್ದಾರೆ. ಸಂಗೀತಾ ಭಟ್ ನಾಯಕಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಚಿತ್ರದಲ್ಲಿ ಕಿಶೋರ್, ರಮೇಶ್ ಇಂದಿರಾ ಪ್ರತಿಭಾವಂತ ನಟರು ನಟಿಸಿದ್ದಾರೆ. ಚಿತ್ರವನ್ನು ವಿ ಎ ಸುನಿಲ್ ಕುಮಾರ್ ನಿರ್ದೇಸಿಸಿದ್ದಾರೆ. ಕ್ರಿಯೇಟಿವ್ ಜವಾಬ್ದಾರಿಯನ್ನು ಸಹ ನಿರ್ಮಾಪಕ ರಾಜವರ್ಧನ್ ವಹಿಸಿದ್ದಾರೆ.

ಕಮಲ್ ಶ್ರೀದೇವಿ

ಟ್ರೈಲರ್ ಬಿಡುಗಡೆ ಮಾಡಿ ಮಾತನಾಡಿದ ರಾಜವರ್ಧನ್, ಚಿತ್ರದಲ್ಲಿ ವೇಶ್ಯೆಯಾಗಿ ಸಂಗೀತಾ ಭಟ್ ನಟಿಸಿದ್ದಾರೆ. ಅವರು ಎಲ್ಲಾ ಪ್ರಶಸ್ತಿಗಳಿಗೆ ಅರ್ಹರು ಎಂದರು.

ನಾಯಕ ನಟ ಸಚಿನ್ ಚಲುವರಾಯಸ್ವಾಮಿ, ಚಿತ್ರದ ಪಾತ್ರಗಳು ಪ್ರೇಕ್ಷಕರನ್ನು ಕಾಡಲಿವೆ ಎಂದರು.

ನಾಯಕಿ ಸಂಗೀತಾ ಭಟ್ ಅವರು, ಶ್ರೀದೇವಿ ಪಾತ್ರ ತುಂಬಾ ರಿಸ್ಕ್ ಆಗಿದೆ. ಯಾವುದೇ ಕಾರಣಕ್ಕೂ ವೃತ್ತಿಪರತೆ ಮೀರಿಲ್ಲ ಎಂದು ಹೇಳಿದರು.

ಕಮಲ್ ಶ್ರೀದೇವಿ

Be the first to comment

Leave a Reply

Your email address will not be published. Required fields are marked *

Translate »
error: Content is protected !!