ಪ್ರಜ್ವಲ್ ದೇವರಾಜ್

ಸಿನಿಮಾ ನಿರ್ಮಾಣದತ್ತ ಪ್ರಜ್ವಲ್ ದೇವರಾಜ್

ಹಿರಿಯ ನಟ ದೇವರಾಜ್ ಪುತ್ರ ಪ್ರಜ್ವಲ್ ದೇವರಾಜ್ ಅವರು ಸಿನಿಮಾ ನಿರ್ಮಾಣದತ್ತ ಹೆಜ್ಜೆ ಇಟ್ಟಿದ್ದಾರೆ.

‘ಸನ್ ಆಫ್ ಮುತ್ತಣ್ಣ’ ಎಂಬ ಭಾವನಾತ್ಮಕ ಕಥೆಯ ಚಿತ್ರ ನಿರ್ಮಿಸಿ ತೆರೆಗೆ ತರುತ್ತಿರುವ ಪುರಾತನ ಫಿಲಂಸ್ ಮುಂದಿನ ದಿನಗಳಲ್ಲಿ  ಪ್ರಜ್ವಲ್ ದೇವರಾಜ್ ಅವರ ಜೊತೆಗೂಡಿ ಅತ್ಯುತ್ತಮ ತಾಂತ್ರಿಕತೆಯ ಹಾಗೂ ಸದಭಿರುಚಿಯ ಸಿನಿಮಾಗಳನ್ನು ನಿರ್ಮಾಣ ಮಾಡಲು ಮುಂದಾಗಿದೆ.

ಪುರಾತನ ಫಿಲಂಸ್ ಹಾಗೂ ಪ್ರಜ್ವಲ್ ದೇವರಾಜ್ ಸೇರಿ “P2 ಪ್ರೊಡಕ್ಷನ್ಸ್” ಎಂಬ ನೂತನ ನಿರ್ಮಾಣ ಸಂಸ್ಥೆಯನ್ನು ಹುಟ್ಟುಹಾಕಿದ್ದಾರೆ. “P2 ಪ್ರೊಡಕ್ಷನ್ಸ್”  ಪ್ರತಿಭಾವಂತ ಕಲಾವಿದರು, ತಂತ್ರಜ್ಞರು ಮತ್ತು ಒಳ್ಳೆಯ ಕಥೆಗಳನ್ನು ಕನ್ನಡ ಚಿತ್ರರಂಗಕ್ಕೆ ಪರಿಚಯಿಸಲಿದೆ. ಈಗಾಗಲೇ ಹೊಸ ಪ್ರತಿಭೆಗಳಿಗೆ ಮಣೆ ಹಾಕುವ ನಿಟ್ಟಿನಲ್ಲಿ ಕೆಲವು ಕೆಲಸಗಳನ್ನು ಮಾಡುತ್ತಿದೆ.

ಪುರಾತನ ಫಿಲಂಸ್ ನಿರ್ಮಿಸಿ ತೆರೆಗೆ ತರುತ್ತಿರುವ ‘ಸನ್ ಆಫ್ ಮುತ್ತಣ್ಣ’ ಸಿನಿಮಾದಲ್ಲಿ ಪ್ರಣಮ್ ದೇವರಾಜ್ ಮಗನಾಗಿ, ರಂಗಾಯಣ ರಘು ಅಪ್ಪನಾಗಿ ಅಭಿನಯಿಸಿದ್ದಾರೆ.ಪ್ರಣಂಗೆ ನಾಯಕಿಯಾಗಿ ದಿಯಾ ಖ್ಯಾತಿಯ ಖುಷಿ ರವಿ ಅಭಿನಯಿಸಿದ್ದಾರೆ. ಸುಚೇಂದ್ರ ಪ್ರಸಾದ್‌, ಗಿರೀಶ್‌ ಶಿವಣ್ಣ, ತಬಲನಾಣಿ, ಶ್ರೀನಿವಾಸ್‌ ಪ್ರಭು, ಸುಧಾ ಬೆಳವಾಡಿ, ಅರುಣ್‌ ಚಕ್ರವರ್ತಿ ಮುಂತಾದವರು  ತಾರಾಬಳಗದಲ್ಲಿದ್ದಾರೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!