ಕಿಚ್ಚ ಸುದೀಪ್ ಅವರ 47ನೇ ಚಿತ್ರವಾದ ‘ಮಾರ್ಕ್’ ಟೈಟಲ್ ವಿವಾದ ಭುಗಿಲೆದ್ದಿದೆ.
ಗಾಗಲೇ ಸಿನಿಮಾದ ಶೇ.60ರಷ್ಟು ಶೂಟ್ ಪೂರ್ಣಗೊಂಡಿದೆ. ‘ಮಾರ್ಕ್’ ಸಿನಿಮಾ ಟೈಟಲ್ ಕರ್ನಾಟಕ ಫಿಲ್ಮ್ ಚೇಂಬರ್ನಲ್ಲಿ ರಿಜಿಸ್ಟರ್ ಆಗಿದೆ. ಈ ಟೈಟಲ್ ನೋಂದಣಿ ಮಾಡಿಸಿದ್ದು ಕೆಆರ್ಜಿ ಸ್ಟುಡಿಯೋದವರು. ಸುದೀಪ್ಗಾಗಿ ಶೀರ್ಷಿಕೆಯನ್ನು ಅವರು ಬಿಟ್ಟುಕೊಟ್ಟಿದ್ದರು. ಈಗ ಈ ಟೈಟಲ್ ‘ಸತ್ಯ ಜ್ಯೋತಿ ಫಿಲ್ಮ್ಸ್’ಗೆ ಹಸ್ತಾಂತರ ಆಗಿದೆ. ಇದೇ ಸಂಸ್ಥೆಯ ಜೊತೆ ಸುದೀಪ್ ‘ಮಾರ್ಕ್’ ಮಾಡುತ್ತಿದ್ದಾರೆ.
‘ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ’ಯಲ್ಲೂ ‘ಮಾರ್ಕ್’ ಟೈಟಲ್ ನೋಂದಣಿ ಆಗಿದೆ. ಈ ವರ್ಷದ ಮೇ 19ರಂದು ‘ಮಾರ್ಕ್’ ಹೆಸರಲ್ಲಿ ಟೈಟಲ್ ನೋಂದಣಿ ಆಗಿದೆ. ‘ಗೌರವ್ ಫಿಲ್ಮ್ಸ್’ ಸಂಸ್ಥೆ ಟೈಟಲ್ ರಿಜಿಸ್ಟರ್ ಮಾಡಿಸಿದೆ. ಈ ಟೈಟಲ್ ನಮ್ಮದು ಎಂದು ಗೌರವ್ ಫಿಲ್ಮ್ಸ್ ಹೇಳುತ್ತಿದೆ.
ಕೆಆರ್ಜಿ ಅವರೇ ‘ಮಾರ್ಕ್’ ಟೈಟಲ್ ಮೊದಲು ನೋಂದಣಿ ಮಾಡಿಸಿರುವುದರಿಂದ ‘ಮಾರ್ಕ್’ ಟೈಟಲ್ ಸುದೀಪ್ಗೆ ಸಿಗೋ ಸಾಧ್ಯತೆ ದಟ್ಟವಾಗಿದೆ. ಈ ರೀತಿಯ ಟೈಟಲ್ ಗೊಂದಲ ಈ ಮೊದಲು ಕೂಡ ಭುಗಿಲೆದ್ದಿದ್ದವು.
ಕಿಚ್ಚ ಸುದೀಪ್ ಅವರು ಜುಲೈನಲ್ಲಿ ಈ ಸಿನಿಮಾ ಘೋಷಣೆ ಮಾಡಿದರು. ಡಿಸೆಂಬರ್ 25ರಂದು ಸಿನಿಮಾ ರಿಲೀಸ್ ಮಾಡುವ ಆಲೋಚನೆ ಸಿನಿಮಾತಂಡಕ್ಕೆ ಇದೆ.
—-





Be the first to comment