ನೇನು ತೆಲುಗಮ್ಮಾಯಿನಿ.. ಹೈದರಾಬಾದ್ ನಮ್ಮೂರು.. ಶ್ರೀಮತಿ ಅರುಣ ಭಿಕ್ಷು ಮತ್ತು ಶ್ರೀ ಎನ್.ಜೆ. ಭಿಕ್ಷು ಅವರ ಸುಪುತ್ರಿ. ಜೂನಿಯರ್ ಎನ್.ಟಿ.ಆರ್, ಇಲಿಯಾನ, ರಾಮ್, ನಿತಿನ್, ನಿಖಿಲ್, ಪಾರ್ವತಿ ಮಿಲ್ಟನ್ ಹೀಗೆ ಹೇಳೋಕೆ ದೊಡ್ಡ ಲಿಸ್ಟಾಗುತ್ತೆ.. ಇವರೆಲ್ಲಾ ನನ್ನ ತಂದೆ-ತಾಯಿಯ ಹತ್ತಿರವೇ ನಟನಾ ತರಬೇತಿಯನ್ನು ಪಡೆದವರು.. ಹೀಗಾಗಿ ನಾನು ಚಿಕ್ಕವಳಿರುವಾಗಿಂದಲೇ ಇವರೆಲ್ಲರನ್ನ ನೋಡಿಯೇ ಬೆಳೆದವಳು. ನಿರ್ದೇಶಕ ವಿಠಲ್ ಅವರು ಕೂಡ ಇಲ್ಲಿಯೇ ನಟನಾ ತರಬೇತಿಯನ್ನು ಪಡೆದವರು. ಒಂದಿನ ಮನೆಗೆ ಬಂದು ನನಗೆ ‘ಹ್ಯಾಂಗೋವರ್’ ಕಥೆ ಹೇಳಿ.. ಇದರಲ್ಲಿ ನೀನು ನಟಿಸುವುದಾದ್ರೆ ಯಾವ್ ಪಾತ್ರ ಮಾಡ್ತೀಯಾ?? ಅಂತ ಕೇಳಿದ್ರು, ನಾನು ಚೇತನ ಪಾತ್ರ ಮಾಡ್ತೀನಿ ಎಂದೆ… ಓಕೆ.. ಫಿಕ್ಸ್ ಎಂದು ಕವರಲ್ಲಿ ಒಂದಿಷ್ಟು ದುಡ್ ಹಾಕಿ, ಇದು ನಿನ್ ಅಡ್ವಾನ್ ರೆಡಿಯಾಗು ಎಂದು ಹೇಳಿ ಬೆಂಗಳೂರಿಗೆ ಹೊರಟೋದ್ರು. ನಾನು ಫೋನ್ ಮಾಡಿ ನಿಜಾ ಹೇಳ್ತಿದಿರಾ!! ಎಂದು ಕೇಳಿದೆ.. “ಹಾ.. ಹೌದು..” ಅಂದ್ರು. ಅವತ್ತಿಂದ ನಾನು ಸೀರಿಯಸ್ಸಾಗಿ ಕನ್ನಡ ಕಲಿತು, ಕನ್ನಡದಲ್ಲೇ ಅಭಿನಯಿಸಿದ್ದೇನೆ. ಈಗ ರಿಜಲ್ಟ್‍ಗಾಗಿ ಕಾಯುತ್ತಿದ್ದೇನೆ. ಇದೇ ಜೂನ್ 14ರಂದು ಕನ್ನಡ ಪ್ರೇಕ್ಷಕರು ನನ್ನನ್ನು ಪಾಸ್ ಮಾಡುತ್ತಾರೆಂಬ ನಂಬಿಕೆಯೂ ನನಗಿದೆ.
ಹ್ಯಾಂಗೋವರ್‍ಯಿಂದ ನಾನು ತುಂಬಾ ಕಲಿತಿದ್ದೇನೆ ಮತ್ತು ನನಗೆ ತುಂಬಾ ಫ್ರೀಡಂ ಕೂಡಾ ಇತ್ತು, ಇಡೀ ತಂಡ ನನಗೆ ತುಂಬಾ ಸಹಾಯ ಮಾಡುತ್ತಿದ್ದರು.. ಸೀನ್ ಮತ್ತು ಕ್ಯಾರೆಕ್ಟರ್‍ನ ಎಕ್ಸ್‍ಪ್ಲೇನ್ ಮಾಡುವುದರಲ್ಲಿ ಮತ್ತು ಕನ್ನಡದ ಪದಗಳನ್ನ ಉಚ್ಚರಿಸುವುದರಲ್ಲಿ ಸಾಕಸ್ಟು ಸಹಾಯ ಸಿಕ್ಕಿತು.
ಈಗ ತೆಲುಗಿನಲ್ಲಿ ಮೊನ್ನೆಯಷ್ಟೇ ಬಿಡುಗಡೆಯಾದ ‘ಸೀತ’ ಚಿತ್ರದಲ್ಲಿ ಸೋನು ಸೂದ್‍ರವರ ಪತ್ನಿಯಾಗಿ ಅಭಿನಯಿಸಿದ್ದೇನೆ, ಪಾತ್ರ ಚಿಕ್ಕದಾದ್ರೂ ಪಾತ್ರಕ್ಕೆ ತುಂಬಾ ವಿಶೇಷತೆ ಇತ್ತು.. ಚಿತ್ರವನ್ನು ನೋಡಿದವರೆಲ್ಲಾ ನನಗೆ ಫೋನ್ ಮಾಡಿ ಅಭಿನಂದನೆಗಳನ್ನೂ ತಿಳಿಸಿದರು. ಮತ್ತು ‘ಜಾರ್ಜ್ ರೆಡಿ’್ಡ ಎಂಬ ಚಿತ್ರದಲ್ಲಿ ತುಂಬಾ ಇಂಪಾರ್ಟೆಂಟ್ ರೋಲ್ ಮಾಡುತ್ತಿದ್ದೇನೆ ಮತ್ತು ‘ಎನ್.ಆರ್.ಐ’ ಎಂಬ ಚಿತ್ರದಲ್ಲಿ ನಾಯಕಿಯಾಗಿ ಅಭಿನಯಿಸುತ್ತಿದ್ದೇನೆ. ಅಷ್ಟೇ ಅಲ್ಲದೇ ನಿರ್ದೇಶಕ ರಾಜಮೌಳಿ ಅವರ ಸುಪುತ್ರ ಕಾರ್ತಿಕೇಯ ನಿರ್ಮಿಸಿರುವ “ಅಕಾಶವಾಣಿ” ಚಿತ್ರಕ್ಕೆ ಕ್ಯಾಸ್ಟಿಂಗ್ ಡೈರೆಕ್ಟರ್ ಆಗಿಯೂ ಕೆಲಸ ಮಾಡಿದ್ದೇನೆ. ಇನ್ನೊಂದೆರಡು ಚಿತ್ರಗಳು ಮಾತುಕಥೆಯಲ್ಲಿವೆ.
ಹೀಗೆ ಕನ್ನಡ ಚಿತ್ರ ಹ್ಯಾಂಗೋವರ್ ನನಗೆ ಮೊದಲ ಚಿತ್ರ ಎಂಬುದಕ್ಕೆ ಹೆಮ್ಮೆಯೂ ಇದೆ ಮತ್ತು ಕನ್ನಡ ಚಿತ್ರರಂಗದಿಂದ ಪರಿಚಯವಾಗಿರುವುದಕ್ಕೆ ಸಾಕಷ್ಟು ಕುಷಿಯೂ ಇದೆ.
Pingback: kuota cpns kemenkumham 2022