ಬಾಕ್ಸ್ ಆಫೀಸ್‌ನಲ್ಲಿ ತಗ್ಗಿದ ಕೂಲಿ ಗಳಿಕೆ

ರಜನಿಕಾಂತ್ ನಟನೆಯ ಕೂಲಿ ಚಿತ್ರ ಆರಂಭಿಕ ವಾರದಲ್ಲಿ ದಾಖಲೆಯ ಗಳಿಕೆ ಕಂಡ ನಂತರ  ಕಲೆಕ್ಷನ್  ಕುಸಿತ ಕಂಡಿದೆ.

ಲೋಕೇಶ್ ಕನಕರಾಜ್ ನಿರ್ದೇಶನದ ಕೂಲಿ ಚಿತ್ರ ಮೊದಲ ವಾರ ದೇಶೀಯ ಗಲ್ಲಾ ಪೆಟ್ಟಿಗೆಯಲ್ಲಿ ₹222.5 ಕೋಟಿ ಗಳಿಸಿದೆ. ಕೂಲಿ ಚಿತ್ರ ಬಿಡುಗಡೆಯಾದ ಮೊದಲ ದಿನ ₹65 ಕೋಟಿ, ಎರಡನೇ ದಿನ ₹54.75 ಕೋಟಿ, ಮೂರನೇ ದಿನ ₹39.5 ಕೋಟಿ, ನಾಲ್ಕನೇ ದಿನ ₹35.25 ಕೋಟಿ, ಐದನೇ ದಿನ ₹12 ಕೋಟಿ, ಆರನೇ ದಿನ ₹9.5 ಕೋಟಿ ಮತ್ತು   7ನೇ ದಿನ ₹6.5 ಕೋಟಿ ಗಳಿಕೆ ಕಂಡಿದೆ.

ಕಲೆಕ್ಷನ್  ಕುಸಿತದ ಹೊರತಾಗಿಯೂ ಚಿತ್ರದ ಒಟ್ಟಾರೆ ಗಳಿಕೆ ವರ್ಷದ  ದೊಡ್ಡ ಬ್ಲಾಕ್‌ಬಸ್ಟರ್‌ಗಳಲ್ಲಿ ಒಂದಾಗಿದೆ. ಚಿತ್ರ ಬಿಡುಗಡೆಯಾದ   ಒಂದು ವಾರದಲ್ಲಿ ₹220 ಕೋಟಿ ಮೈಲಿಗಲ್ಲನ್ನು ಮೀರಿದೆ.  ಕೂಲಿ  ಎರಡನೇ ವಾರದಲ್ಲಿ ಹೇಗೆ ನಿಲ್ಲುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.

ಕೂಲಿ ಚಿತ್ರದಲ್ಲಿ ನಾಗಾರ್ಜುನ, ಉಪೇಂದ್ರ, ಸತ್ಯರಾಜ್, ಸೌಬಿನ್ ಶಾಹಿರ್, ಶ್ರುತಿ ಹಾಸನ್ ಮತ್ತು ರಚಿತಾ ರಾಮ್ ಸೇರಿದಂತೆ ಬಹು ತಾರಾಗಣವಿದೆ. ಅನಿರುದ್ಧ್ ರವಿಚಂದರ್  ಸಂಗೀತ ಸಂಯೋಜನೆ, ಗಿರೀಶ್ ಗಂಗಾಧರನ್  ಛಾಯಾಗ್ರಹಣ ಮತ್ತು ಫಿಲೋಮಿನ್ ರಾಜ್  ಸಂಕಲನವಿದೆ.

—-

Be the first to comment

Leave a Reply

Your email address will not be published. Required fields are marked *

Translate »
error: Content is protected !!