ಪುಷ್ಪಾ ಅರುಣ್ ಕುಮಾರ್ ವಿತರಕರಾಗಿ ಪಾದಾರ್ಪಣೆ

ನಟ ಯಶ್ ಅವರ ತಾಯಿ ಪುಷ್ಪಾ ಅರುಣ್ ಕುಮಾರ್ ತಮ್ಮ ಹೊಸ ಬ್ಯಾನರ್ ಪಿಎ ಫಿಲ್ಮ್ಸ್ ಅಡಿಯಲ್ಲಿ ವಿತರಕರಾಗಿ  ಪಾದಾರ್ಪಣೆ ಮಾಡುತ್ತಿದ್ದಾರೆ.

ಕ್ರಿಶ್ ಜಾಗರ್ಲಮುಡಿ ನಿರ್ದೇಶನದ ಅನುಷ್ಕಾ ಶೆಟ್ಟಿ ನಟನೆಯ ‘ಘಾಟಿ’ ಚಿತ್ರ ಶೀಘ್ರದಲ್ಲೇ ಬಿಡುಗಡೆಗೆ ಸಜ್ಜಾಗಿದ್ದು,  ಚಿತ್ರದ ಕರ್ನಾಟಕದ ವಿತರಣೆ ಹಕ್ಕುಗಳನ್ನು  ಪುಷ್ಪಾ ಅರುಣ್ ಕುಮಾರ್ ಪಡೆದುಕೊಂಡಿದ್ದಾರೆ.

ಅನುಷ್ಕಾ ಮೂಲತಃ ಕರ್ನಾಟಕದವರಾಗಿದ್ದಾರೆ.  ಅನುಷ್ಕಾ ನಟನೆಯನ್ನು ಬಹಳ ಹಿಂದಿನಿಂದಲೂ ಮೆಚ್ಚಿಕೊಂಡಿರುವ ಪುಷ್ಪಾ ಅರುಣ್ ಕುಮಾರ್ ಅವರು, ಘಾಟಿ ಚಿತ್ರ ವಿತರಣೆ ಹಿಂದೆಯೂ ಅದೇ ಭಾವನೆಯಿದೆ ಎನ್ನುತ್ತಾರೆ.

ಇತ್ತೀಚೆಗೆ ಬಿಡುಗಡೆಯಾದ ಘಾಟಿ ಚಿತ್ರದ ಟ್ರೇಲರ್ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ. ಚಿತ್ರದಲ್ಲಿ ವಿಕ್ರಮ್ ಪ್ರಭು, ಚೈತನ್ಯ ರಾವ್ ಮಡದಿ, ಜಗಪತಿ ಬಾಬು, ರಾಘವ್ ರುದ್ರ ಮುಲ್ಪುರು, ಜಿಶು ಸೇನ್‌ಗುಪ್ತ, ಜಾನ್ ವಿಜಯ್, ರವೀಂದ್ರ ವಿಜಯ್ ಮತ್ತು ದೇವಿಕಾ ಪ್ರಿಯದರ್ಶಿನಿ ಮುಂತಾದವರು ನಟಿಸಿದ್ದಾರೆ.

ಚಿತ್ರಕ್ಕೆ ಮನೋಜ್ ರೆಡ್ಡಿ ಕಾಟಸಾನಿ ಅವರ ಛಾಯಾಗ್ರಹಣ ಮತ್ತು ನಾಗವೆಲ್ಲಿ ವಿದ್ಯಾ ಸಾಗರ್ ಅವರ ಸಂಗೀತ ಸಂಯೋಜನೆ ಇದೆ. ಘಾಟಿ ಸೆಪ್ಟೆಂಬರ್ 5 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

ಪೃಥ್ವಿ ಅಂಬಾರ್ ನಟಿಸಿದ್ದ ‘ಕೊತ್ತಲವಾಡಿ’ ಸಿನಿಮಾವನ್ನು ನಿರ್ಮಾಣ ಮಾಡುವುದಕ್ಕಾಗಿ ಪಿಎ ಪ್ರೊಡಕ್ಷನ್ಸ್  ಸಂಸ್ಥೆಯನ್ನು ಪುಷ್ಪಾ ಅರುಣ್ ಕುಮಾರ್ ಆರಂಭಿಸಿದ್ದರು. ಇದೀಗ ಸಿನಿಮಾದ ವಿತರಣೆಗಾಗಿ ಪಿಎ ಫಿಲ್ಮ್ಸ್  ಸಂಸ್ಥೆಯನ್ನು ಶುರು ಮಾಡಿದ್ದಾರೆ.

—-

Be the first to comment

Leave a Reply

Your email address will not be published. Required fields are marked *

Translate »
error: Content is protected !!