ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಮೊದಲ ಬಾರಿಗೆ ನಿರ್ದೇಶನ ಮಾಡುತ್ತಿರುವ 45 ಚಿತ್ರ ಡಿಸೆಂಬರ್ 25ರಂದು ತೆರೆಗೆ ಬರಲಿದೆ.
ಪತ್ರಿಕಾಗೋಷ್ಠಿಯಲ್ಲಿ ಚಿತ್ರದ ನಿರ್ಮಾಪಕ ರಮೇಶ್ ರೆಡ್ಡಿ ಅವರು 45 ಚಿತ್ರದ ಬಿಡುಗಡೆ ದಿನಾಂಕವನ್ನು ಘೋಷಣೆ ಮಾಡಿದ್ದಾರೆ.
ಸೂರಜ್ ಪ್ರೊಡಕ್ಷನ್ ಬ್ಯಾನರ್ ನಲ್ಲಿ ರಮೇಶ್ ರೆಡ್ಡಿ ಅವರು ನಿರ್ಮಿಸಿರುವ ಪ್ಯಾನ್ ಇಂಡಿಯಾ ಚಿತ್ರ 45, ಆಗಸ್ಟ್ 15 ರಂದು ತೆರೆಗೆ ಬರಬೇಕಿತ್ತು. ಆದರೆ ಸಿಜಿ ಕೆಲಸ ತಡವಾಗುತ್ತಿರುವ ಹಿನ್ನೆಲೆಯಲ್ಲಿ ರಿಲೀಸ್ ದಿನಾಂಕವನ್ನು ಮುಂದಕ್ಕೆ ಹಾಕಲಾಗಿತ್ತು. ಈಗ ಕೊನೆಗೂ ಚಿತ್ರದ ಬಿಡುಗಡೆ ದಿನಾಂಕವನ್ನು ಘೋಷಣೆ ಮಾಡಲಾಗಿದೆ.
ಈ ಬಗ್ಗೆ ಮಾತನಾಡಿರುವ ನಿರ್ಮಾಪಕರು, ಚಿತ್ರದ ಸಿಜಿ ಕೆಲಸ ಕೆನಡಾದಲ್ಲಿ ನಡೆಯುತ್ತಿದೆ. ಆದರೆ ಆ ಕೆಲಸ ತೃಪ್ತಿಯಾಗದ ಕಾರಣ ಚಿತ್ರ ಬಿಡುಗಡೆ ಮುಂದಕ್ಕೆ ಹೋಗಿದೆ. ಇಡೀ ಚಿತ್ರ ಸಿಜಿ ಮೇಲೆ ನಿಂತಿದೆ. ಮೈಸೂರಿನ ಯಶ್ ಗೌಡ ಅವರು ಮರ್ಜು ಸಂಸ್ಥೆಯ ಮೂಲಕ ವಿಎಫ್ ಎಕ್ಸ್ ಕೆಲಸ ಮಾಡಿಸುತ್ತಿದ್ದಾರೆ ಎಂದು ಹೇಳಿದ್ದಾರೆ.
ಚಿತ್ರದ ನಿರ್ದೇಶಕ ಅರ್ಜುನ್ ಜನ್ಯ ಮಾತನಾಡಿ, ಚಿತ್ರದಲ್ಲಿ ಶೇಕಡ 45ರಷ್ಟು ಸಿಜಿ ಬರುತ್ತದೆ. ಕಥೆ ಅದನ್ನು ಡಿಮ್ಯಾಂಡ್ ಮಾಡಿದೆ. ಚಿತ್ರದಲ್ಲಿ ಮೂರು ಜನ ನಾಯಕರಿಗೆ ಇಕ್ವಲ್ ಸ್ಪೇಸ್ ಇದೆ ಎಂದು ಹೇಳಿದ್ದಾರೆ.
45 ಚಿತ್ರದಲ್ಲಿ ಶಿವಣ್ಣ, ಉಪೇಂದ್ರ ಮತ್ತು ರಾಜ್ ಬಿ ಶೆಟ್ಟಿ ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಮೂವರು ನಾಯಕರ ಕಾರಣದಿಂದ ಈ ಚಿತ್ರ ಸಾಕಷ್ಟು ನಿರೀಕ್ಷೆ ಮೂಡಿಸಿದೆ.






Be the first to comment