ಈ ರಿವ್ಯೂನ ಟೈಟಲ್ ಓದಿದಾಗ್ಲೇ ನಿಮ್ಗೆ ಎಲ್ಲವೂ ಅರ್ಥವಾಗಿರುತ್ತೆ. ಅದಕ್ಕೇ, ‘ಅಮರ್’ ಸಿನ್ಮಾ ಥರ ಬೋರ್ ಹೊಡಿಸದೆ ಶಾರ್ಟ್ ಆಗಿ, ಚಿತ್ರದ ಬಗ್ಗೆ ಒಂದಷ್ಟು ಓದಿರ್ತೀವಿ ದಯವಿಟ್ಟು ಕೇಳಿಸ್ಕೊಳ್ಳಿ.
ಈ ನಮ್ಮ ಬುಸ್‍ನಾಗ ಇದನ್ನಲ್ಲಾ.. ಅದೇರಿ ನಿದ್ರೇಶಕ (ನಿರ್ದೇಶಕ ಅಲ್ಲ ಯಾಕೆ ಅನ್ನುವುದನ್ನು ಮುಂದೆ ಹೇಳುತ್ತೇವೆ) ನಾಗಶೇಖರ್ ಇದನಲ್ಲಾ `ಅಮರ್’ ಮೂಲಕ ಅಭಿಷೇಕ್‍ಗೆ ಸ್ಯಾಂಡಲ್‍ವುಡ್‍ಗೆ ಒಂದು ಡಬ್ಬಾ ಎಂಟ್ರಿ ಕೊಡಿಸ್ಬೇಕು ಅಂತ ಯಾವಾಗ ಪ್ಲಾನ್ ಮಾಡಿದ್ನೋ.. ಗೊತ್ತಿಲ್ಲ, ಆದರೆ ಈಗ ಅಭಿಯ ಸಿನ್ಮಾಪಯಣಕ್ಕೆ ತಾನೇ ಚಪ್ಪಡಿಗಲ್ಲು ಎತ್ತಿಹಾಕಿದ್ದಾನೆ. ಇರ್ಲಿ, ಈ ನಿದ್ರೇಶಕ ನಾಗನ ವಿಷ್ಯ ಹಾಗಿರಲಿ ಈಗ ಚಿತ್ರದಲ್ಲಿ ಈತ ದಬ್ಬಾಕಿದ್ದಾದ್ರು ಏನು ಅಂತ ನೋಡೋಣ.
ನಾಗ ಅಂಬರೀಶ್ ಸಾವನ್ನು ಎನಕ್ಯಾಶ್ ಮಾಡಿಕೊಳ್ಳಲು, ಅಭಿಯ ಭಿವಿಷ್ಯವನ್ನು ಬಲಿ ತೆಗೆದುಕೊಂಡಿದ್ದಾನೆ.ಅವಸರವಸರವಾಗಿ’ಅಮರ್’ನನ್ನು ಸಿದ್ಧಗೊಳಿಸಿದ್ದಾನೆ. ತನ್ನ ಸ್ವಾರ್ಥಕ್ಕೆ ಇನ್ನೊಬ್ಬರನ್ನು ಬಲಿ ತೆಗೆದುಕೊಳ್ಳುವುದು ಇವನಿಗೆ ಸಾಮಾನ್ಯದ ಸಂಗತಿ ಬಿಡಿ. ಜಗಿದು ಜಗಿದು ಉಗಿಳಿದ ಬಬಲ್‍ಗಮ್‍ನಂತಹ ಕಥೆ.. ಅದಕ್ಕೊಂದು ಎರ್ರಾಬಿರ್ರಿ ಲಂಗು ಲಗಾಮಿಲ್ಲದ ನರೇಶನ್ನು.. ಕಥೆಗೆ ಅಗತ್ಯ ಇಲ್ಲದೇ ಇರೋ ಫಾರಿನ್ನು ಲೋಕೆಶನ್ನು.. ಇಲ್ಲಿ ನಶೆಯೇ ಹಿರೋಯಿನ್‍ನ ಫ್ಯಾಶನ್ನು.. ಹೀಗೆ ಯಾವುದೇ ಪ್ರಿಪರೇಶನ್ ಇಲ್ಲದೇ ನಾಗ ರೀಲ್ ಸುತ್ತಿರುವುದು ಪ್ರತಿಯೊಂದು ಫ್ರೇಮ್‍ನಲ್ಲೂ ಎಂಥವನಿಗೂ ಗೊತ್ತಾಗಿಬಿಡುತ್ತದೆ. ಅಮರ್(ಅಭಿ) ಚಿತ್ರದಲ್ಲಿ ಮಾಡರ್ನ್ ಕರ್ಣ. ಕೊಡುವುದು ಗೊತ್ತೇ ಹೊರತು, ತೆಗೆದುಕೊಂಡಿದ್ದು ಕಡಿಮೆ. ಆತನ ಈ ಪಾಸಿಟೀವ್ ಅಂಶವೇ ಆತನಿಗೆ ಮುಳುವಾಗಿ.. ಅಪ್ಪನನ್ನೂ ಕಳೆದುಕೊಳ್ಳುತ್ತಾನೆ. ನಶೆಯ ಬೆಡಗಿ ಬಾಬಿಯ (ತನ್ಯಾ ಹೋಪ್) ತಂದೆಯ ಮಾತಿಗೆ ಕಟ್ಟುಬಿದ್ದು ದೂರವಾಗಿದ್ದ ಬಾಬಿಯನ್ನು ಮತ್ತೆ ಪಡೆದುಕೊಳ್ಳಲು ಆತ ನಡೆಸುವ ಹೋರಾಟವೇ ಚಿತ್ರದ ಅಸಲಿ ಪ್ಲಾಟ್. ಈ ಪ್ಲಾಟ್‍ನ್ನೇ ಇಟ್ಟುಕೊಂಡು ಸಾವಿರ ಚಿತ್ರಗಳ ಬಂದಿವೆ. ಬರಲಿ, ಆದರೆ ಒಂದು ನೋಡೆಬಲ್ ಚಿತ್ರ ಮಾಡುವಷ್ಟು ನಾಗನಲ್ಲಿ ಪ್ರತಿಭೆಯಿಲ್ಲವೇ?
ಈ ಬೋರಿಂಗ್ ಕಥೆಯ ಮಧ್ಯೆ ನಾಗ ನೋಡುಗನನ್ನು ಗಟ್ಟಿಕಥೆಯಿಲ್ಲದೇ ಇಂಪ್ರೆಸ್ ಮಾಡುವ ಹಟಕೆ ಬಿದ್ದು.. ಚಿತ್ರದಲ್ಲಿ ಬೈಕ್ ರೈಡಿಂಗ್, ಅಮರ್‍ನ ಪರಿಸರ ಕಾಳಜಿ, ಕಾಮಿಡಿ ಮಾಡಲು ಹೋಗಿ ನೋಡುಗನ ಮುಂದೆ ತಾವೇ ನಗೆಪಾಟಲಿಗೀಡಾಗುವ ಗೆಳೆಯರ ಗುಂಪು.. ಹೀಗೆ ಸಿನ್ಮಾಗೆ ಏನೆನೂ ಬೇಡವೋ ಎಲ್ಲವನ್ನೂ ತುರುಕಿದ್ದಾನೆ. ಒಟ್ಟಿನಲ್ಲಿ ಒಂದು ಸಾಧಾರಣ ಲವ್‍ಸ್ಟೋರಿಯನ್ನು ಅಸಾಧಾರಣ ಕಥೆ ಎಂದು ಹೇಳಲು ಹೊರಟು, ನಿರ್ಮಾಪಕ ಸಂದೇಶ್ ಅವರಿಗೆ ಇನ್ಯಾವತ್ತೂ ನಾಗನ ಜೊತೆ ತಗುಲಿಹಾಕೊಳ್ಳಬಾರದು ಎಂಬ ಸಂದೇಶವನ್ನು ತಾನೇ ರವಾನೆ ಮಾಡಿದ್ದಾನೆ.
ಇನ್ನು, ಚಿತ್ರದ ಕಥೆಯ ಬಗ್ಗೆ ಏಷ್ಟು ಹೇಳಿದರೂ ಅಷ್ಟೇ ಬೋರಿಂಗ್. ಇನ್ನು ಪರಫಾಮೆನ್ಸ್ ವಿಷ್ಯಕ್ಕೆ ಬಂದರೆ ಅಭಿಷೇಕ್ ತನ್ನ ತಂದೆಯ ನೋಟ ಮತ್ತು ಧ್ವನಿ ಇದ್ದ ಮಾತ್ರಕ್ಕೆ ನಟನಾಗಬಹುದೂ ಅಂದುಕೊಂಡಂತಿದೆ. ಯಾವುದೇ ಪೂರ್ವತಯಾರಿಯಿಲ್ಲದೆ ಅದ್ಯಾವ ಧೈರ್ಯದಲ್ಲಿ ಕ್ಯಾಮರ ಮುಂದೆ ಬಂದು ನಿಂತಿದ್ದಾರೋ ಅಭಿ. ಪ್ರಿಪರೇಶನ್ ಮಾಡಿಸಬೆಕಿದ್ದ ನಿದ್ರೇಶಕ ಬುಸ್‍ನಾಗ ಏನು ಮಾಡುತ್ತಿದ್ದ? ಅಂಬರೀಶ್ ಅವರಂತಹ ಮೇರುನಟನ ಮಗನನ್ನು ಕನ್ನಡ ಚಿತ್ರರಂಗಕ್ಕೆ ಪರಿಚಯಿಸಲು ಈ ಮಟ್ಟದ ಸಿದ್ಧತೆ ಸಾಕೇ? ನಿರ್ಮಾಪಕ ಸಂದೇಶ್ ದುಡ್ಡಲ್ಲಿ, `ಅಮರ್’ ಹೆಸರಿನಲ್ಲಿ ಅಭಿಗೆ ನಟನೆಯ ಟ್ರೈನಿಂಗ್ ಕೊಡುವ ದರ್ದು ಬುಸ್‍ನಾಗನಿಗ್ಯಾಕೆ? ಇಷ್ಟಕ್ಕೂ ಬುಸ್‍ನಾಗನಿಗೆ ಇನ್ನೊಬ್ಬರ ಭವಿಷ್ಯದಲ್ಲಿ ಚೆಲ್ಲಾಟವಾಡಲು ಅವಕಾಶ ಕೊಟ್ಟವರ ಯಾರು?
ಇನ್ನು, ನಟಿ ತನ್ಯಾ ಹೋಪ್ ಬಗ್ಗೆ ಹೆಚ್ಚು ಹೋಪ್ಸ್ ಇಟ್ಟುಕೊಳ್ಳುವ ಅಗತ್ಯವಿಲ್ಲ. ಒಂದು ಕೋನದಲ್ಲಿ ಪ್ರಿಯಾಂಕ ಚೋಪ್ರಳಂತೆ ಕಾಣುತ್ತಾಳೆ ಅಂದ ಮಾತ್ರಕ್ಕೆ ಜನ ಚಿತ್ರ ನೋಡಲು ಬರುತ್ತಾರೆಯೇ. ಸಾಧುಕೋಕಿಲ&ಚಿಕ್ಕಣ್ಣ ಇಬ್ಬರ ಸರಕು ಖಾಲಿಯಾಗಿದ್ದನ್ನು ಬುಸ್‍ನಾಗ ಪರ್‍ಫೆಕ್ಟ್ ಆಗಿ ತೆರೆಯಮೇಲೆ ತೋರಿಸಿದ್ದಾನೆ. ಡಿ ಬಾಸ್ ದರ್ಶನ್ ಪೋಸ್ಟರ್‍ಗಳಲ್ಲಿ ಜಾಗ ಶೇರ್ ಮಾಡಿಕೊಂಡಷ್ಟೂ ಸಿನ್ಮಾದಲ್ಲಿಲ್ಲ. ಅಷ್ಟಕ್ಕೂ ದರ್ಶನ್ ಎಂಟ್ರಿ ಚಿತ್ರದ ಓಟಕ್ಕೆ ಯಾವ ರೀತಿಯಲ್ಲೂ ಹೆಲ್ಪ್ ಮಾಡುವುದಿಲ್ಲ.
ಪಾಪ ನಿದ್ರೇಶಕ ಬುಸ್‍ನಾಗ ಸಹವಾಸಕ್ಕೆ ಬಿದ್ದು ಕ್ಯಾಮರ್‍ಮೆನ್ ಸತ್ಯಹೆಗಡೆ ಮತ್ತು ಮ್ಯೂಸಿಕ್ ಡೈರೆಕ್ಟರ್ ಇಬ್ಬರೂ ಡಲ್ ಆಗಿದ್ದಾರೆ. ಇವರಿಬ್ಬರ ದಿ ಬೆಸ್ಟ್ ಕೆಲಸ ಚಿತ್ರದಲ್ಲಿ ಕಾಣವುದಿಲ್ಲ.
ಒಟ್ಟಿನಲ್ಲಿ, ಬುಸ್‍ನಾಗನ ವ್ಯರ್ಥ ಸಾಹಸಕ್ಕೆ ಹಲವರ ಭವಿಷ್ಯ ಬಲಿಯಾಗಿದೆ. ಆದರೆ, ಕನ್ನಡ ಪ್ರೇಕ್ಷಕನಿಗೆ ಗೊತ್ತು ಟೊಳ್ಳು&ಗಟ್ಟಿಯ ವ್ಯತ್ಯಾಸ. ಆದರೆ, ಕನ್ನಡಿಗರು ಒಂದು ಬಾರಿ `ಅಮರ್’ ಚಿತ್ರವನ್ನು ನೋಡಬೇಕು. ಏಕೆಂದರೆ, ಕೋಟಿಗಟ್ಟಲೆ ಖರ್ಚು ಮಾಡಿ ಒಂದು ಕೆರಾಕೆಟ್ಟ ಚಿತ್ರವನ್ನು ಮಾಡಬಹುದು ಎಂಬುದನ್ನು ಬುಸ್‍ನಾಗ ಕಲಿಸುತ್ತಾನೆ.
(ಅಂದಹಾಗೆ, ‘ನಿರ್ದೇಸಕ’ ಅಂದಿದ್ದು ಯಾಕೆಂದರೆ ‘ಮಾಸ್ತಿಗುಡಿ’ ಚಿತ್ರ ಶೂಟಿಂಗ್ ಸಂದರ್ಭದಲ್ಲಿ ಬುಸ್‍ನಾಗನ ಜಾಣನಿದ್ರೆಯ ಪರಿಣಾಮ ಎರಡು ಚೇತನಗಳು ಬಲಿಯಾಗಿದ್ದವು. ಅದಕ್ಕೆ ಆತ ನಿದ್ರೇಶಕನ್ನಿಸಿಕೊಳ್ಳಲು ನಾಲಾಯಕ್. ಆತ ಪಡೆದುಕೊಂಡ ಆ ಬಲಿ ಆತನ ಜನ್ಮಕ್ಕಂಟಿದ ಪಾಪ. ಬುಸ್ ನಾಗ ಎಷ್ಟೇ ಚಿತ್ರಗಳನ್ನೇ ಮಾಡಲಿ, ಎಂತಹ ಅತ್ಯುನ್ನತ ಚಿತ್ರವನ್ನೇ ಮಾಡಲಿ.. ಆದರೆ ಈ ಬೇಜಾವಾಬ್ದಾರಿ ನಿದ್ರೇಸಕನ, ಡೈರೆಕ್ಟರ್ ಕಾರ್ಡ್ ನೊಡುವಾಗ ನೆನಪಾಗುವುದು ಮುಗ್ಧ ಅನಿಲ್ ಮತ್ತು ಉದಯ್).
************************
www.BCINEMAS.IN
Pingback: continuous testing tool
Pingback: DevSecOps