‘45’ ಸಿನಿಮಾ ಅಕ್ಟೋಬರ್ ಅಥವಾ ನವೆಂಬರ್ ತಿಂಗಳಲ್ಲಿ ಬಿಡುಗಡೆ

ಶಿವರಾಜ್ ಕುಮಾರ್ , ಉಪೇಂದ್ರ ಮತ್ತು ರಾಜ್ ಬಿ ಶೆಟ್ಟಿ ಒಟ್ಟಿಗೆ ನಟಿಸಿರುವ ‘45’ ಸಿನಿಮಾ ಅಕ್ಟೋಬರ್ ಅಥವಾ ನವೆಂಬರ್ ತಿಂಗಳಲ್ಲಿ ಬಿಡುಗಡೆ ಆಗುವ ಸಾಧ್ಯತೆ ಇದೆ.

‘45’ ಸಿನಿಮಾ ಆಗಸ್ಟ್ 15 ರಂದು ಬಿಡುಗಡೆ ಆಗಬೇಕಿತ್ತು. ಸಿನಿಮಾದಲ್ಲಿ ಗ್ರಾಫಿಕ್ಸ್ ಮತ್ತು ವಿಎಫ್​ಎಕ್ಸ್​ ಪ್ರಮುಖವಾಗಿದ್ದು ಇದೇ ಕಾರಣಕ್ಕೆ ಸಿನಿಮಾದ ಬಿಡುಗಡೆ ಆಗಸ್ಟ್ 15 ರಂದು ಆಗಲಿಲ್ಲ ಎನ್ನಲಾಗುತ್ತಿದೆ.

ಸಿನಿಮಾವನ್ನು ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ನಿರ್ದೇಶನ ಮಾಡುತ್ತಿದ್ದಾರೆ. ಅರ್ಜುನ್ ಜನ್ಯ ನಿರ್ದೇಶನ ಮಾಡುತ್ತಿರುವ ಮೊದಲ ಸಿನಿಮಾ ಇದಾಗಿದೆ. ಅರ್ಜುನ್ ಜನ್ಯ ತಮ್ಮ ಮೊದಲ ಸಿನಿಮಾ ಅತ್ಯುತ್ತಮ ಗುಣಮಟ್ಟದಿಂದ ಮೂಡಿಬರಲೆಂದು ಸಾಕಷ್ಟು ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಕೆಲ ಹಾಲಿವುಡ್ ತಂತ್ರಜ್ಞರ ನೆರವನ್ನು ಪಡೆದುಕೊಂಡಿದ್ದಾರೆ. ಸಿನಿಮಾನಲ್ಲಿ ಸಾಕಷ್ಟು ವಿಎಫ್​ಎಕ್ಸ್ ಇದ್ದು ಇದೇ ಕಾರಣಕ್ಕೆ ಸಿನಿಮಾ  ಬಿಡುಗಡೆ ಆಗಸ್ಟ್ 15 ರಂದು ಮಾಡಲಾಗಲಿಲ್ಲ ಎನ್ನಲಾಗುತ್ತಿದೆ.

45’ ಸಿನಿಮಾಕ್ಕೆ ಖ್ಯಾತ ಹಾಲಿವುಡ್ ವಿಎಫ್​ಎಕ್ಸ್ ಡಿಸೈನ್ ಸಂಸ್ಥೆ ಮಾರ್ಜ್ ವಿಎಫ್​ಎಕ್ಸ್ ಮಾಡುತ್ತಿದೆ.   ‘ಸ್ಪೈಡರ್ಮಯಾನ್: ಫಾರ್ ಫ್ರಂ ಹೋಮ್’, ‘ಆಂಟ್​ಮ್ಯಾನ್’, ‘ಮೂನ್​​ಲೈಟ್’, ‘ವಾಂಡಾ ವಿಷನ್’ ಸೇರಿದಂತೆ, ‘ವೆಡ್​ನಸ್ ಡೇ’, ‘ಪೆರ್ಸಿ ಜಾಕ್ಸನ್’, ‘ದಿ ಕ್ರಿಯೇಟರ್’, ‘ಸ್ಟ್ರೇಂಜರ್ ಥಿಂಗ್ಸ್ 4’ ಇನ್ನೂ ಹಲವು ಜನಪ್ರಿಯ ಹಾಲಿವುಡ್ ಸಿನಿಮಾಗಳಿಗೆ ಮಾರ್ಜ್ ಸಂಸ್ಥೆ ವಿಎಫ್​ಎಕ್ಸ್ ಮಾಡಿದೆ.

ಸಿನಿಮಾದ ಹಾಡುಗಳು, ಡಬ್ಬಿಂಗ್ ಎಲ್ಲವೂ ಪೂರ್ಣಗೊಂಡಿದೆ ಎನ್ನಲಾಗುತ್ತಿದೆ.

—-

Be the first to comment

Leave a Reply

Your email address will not be published. Required fields are marked *

Translate »
error: Content is protected !!