ದರ್ಶನ್ ಅಭಿನಯದ ಕಾಟೇರ ಚಿತ್ರದ ದಾಖಲೆಯನ್ನು ಸು ಫ್ರಮ್ ಸೋ ಚಿತ್ರ ಹಿಂದಿಕ್ಕಿದೆ.
ಸು ಫ್ರಮ್ ಸೋ ಭಾರತದಲ್ಲಿ ಒಟ್ಟಾರೆ 69.25 ಕೋಟಿ ರೂಪಾಯಿ ಗಳಿಕೆ ಮಾಡಿದ್ದು ಒಟ್ಟಾರೆ 87 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಕಾಟೇರ ಚಿತ್ರ ಭಾರತದಲ್ಲಿ 68.1 ಕೋಟಿ ರೂಪಾಯಿ ಕಲೆಕ್ಷನ್, ಜಗತ್ತಿನಾದ್ಯಂತ 80.5 ಕೋಟಿ ಕಲೆಕ್ಷನ್ ಮಾಡಿತ್ತು.
ಕಾಟೇರ ಚಿತ್ರ 45 ಕೋಟಿ ರೂಪಾಯಿ ಬಜೆಟ್ ನಲ್ಲಿ ನಿರ್ಮಾಣವಾಗಿದ್ದರೆ, ಸು ಫ್ರಮ್ ಸೋ 4 ರಿಂದ 6 ಕೋಟಿ ರೂಪಾಯಿ ಬಜೆಟ್ ನಲ್ಲಿ ನಿರ್ಮಾಣವಾಗಿದೆ.
ಸಣ್ಣ ಬಜೆಟ್ ಚಿತ್ರವಾದ ಸು ಫ್ರಮ್ ಸೋ ಚಿತ್ರ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆಯುತ್ತಿದೆ. ಚಿತ್ರ ಬಿಡುಗಡೆಯಾಗಿ 20ನೇ ದಿನವೂ ಕೋಟಿ ಗಳಿಕೆ ಮಾಡಿದೆ. ಈ ಮೂಲಕ 2025ರಲ್ಲಿ ಕನ್ನಡದಲ್ಲಿ ದಾಖಲೆ ಮಾಡಿದ ಚಿತ್ರವಾಗಿ ಹೊರ ಹೊಮ್ಮಿದೆ.
ಜುಲೈ 25, 2025ರಂದು ಕನ್ನಡದಲ್ಲಿ ಚಿತ್ರಮಂದಿರ ಪ್ರವೇಶಿಸಿದ ‘ಸು ಫ್ರಮ್ ಸೋ’ ಆಗಸ್ಟ್ 1ರಂದು ಮಲಯಾಳಂನಲ್ಲಿ, ಆಗಸ್ಟ್ 8ರಂದು ತೆಲುಗಿನಲ್ಲಿಯೂ ತೆರೆಕಂಡು ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ.
ರಾಜ್ ಬಿ ಶೆಟ್ಟಿ ತಮ್ಮ ಲೈಟರ್ ಬುದ್ಧ ಫಿಲ್ಮ್ಸ್ ಬ್ಯಾನರ್ ಅಡಿ ಈ ಸಿನಿಮಾ ನಿರ್ಮಾಣ ಮಾಡಿದ್ದು, ಜೆಪಿ ತುಮಿನಾಡ್ ನಿರ್ದೇಶನದ ಜೊತೆಗೆ ಅಭಿನಯಿಸಿದ್ದಾರೆ. ಶನೀಲ್ ಗೌತಮ್, ಸಂಧ್ಯಾ ಅರಕೆರೆ, ಪ್ರಕಾಶ್ ತುಮಿನಾಡ್, ದೀಪಕ್ ರೈ ಪಣಾಜೆ, ಮೈಮ್ ರಾಮ್ದಾಸ್ ತಾರಾಗಣದಲ್ಲಿದ್ದಾರೆ.
—-





Be the first to comment