ಸೂಪರ್ಸ್ಟಾರ್ ರಜನಿಕಾಂತ್ ನಟನೆಯ ‘ಕೂಲಿ’ ಚಿತ್ರ ಬಾಕ್ಸ್ ಆಫೀಸ್ನಲ್ಲಿ ಭರ್ಜರಿ ಕಲೆಕ್ಷನ್ ಕಂಡಿದೆ.
ಚಿತ್ರ ಬಿಡುಗಡೆಯಾದ ಮೊದಲ ದಿನ ‘ಕೂಲಿ’ ಚಿತ್ರ ಎಲ್ಲ ಭಾಷೆಗಳಲ್ಲಿ 65 ಕೋಟಿ ರೂ.ಗಳನ್ನು ಗಳಿಸಿದೆ. ಈ ಮೂಲಕ ಹೃತಿಕ್ ರೋಷನ್-ಜೂನಿಯರ್ ಎನ್ಟಿಆರ್ ಅವರ ‘ವಾರ್ 2’ ಗೆ ತೀವ್ರ ಸ್ಪರ್ಧೆಯನ್ನು ಒಡ್ಡಿದೆ.
ವರದಿಗಳ ಪ್ರಕಾರ ರಜನಿಕಾಂತ್ ಅವರ ಕೂಲಿ ಚಿತ್ರ ಮೊದಲ ದಿನವೇ 60 ಕೋಟಿ ರೂ. ಗಳಿಸಿದ ಹಿಂದಿನ ಬ್ಲಾಕ್ಬಸ್ಟರ್ ಚಿತ್ರ 2.0ನ್ನು ಹಿಂದಿಕ್ಕಿತು. ಕೂಲಿ ಚಿತ್ರವು ಬಿಡುಗಡೆಯಾದ ಮೊದಲ ದಿನವೇ ಅಧಿಕ ಗಳಿಕೆ ಕಂಡ ರಜನಿಕಾಂತ್ ಅವರ ಮೊದಲ ಚಿತ್ರ ಎಂದು ಹೇಳಲಾಗುತ್ತಿದೆ.
ಲೋಕೇಶ್ ಕನಕರಾಜ್ ನಿರ್ದೇಶನದ ಕೂಲಿ ಚಿತ್ರವು ರಜನಿಕಾಂತ್ ಅವರ 171 ನೇ ಚಿತ್ರವಾಗಿದೆ. ಚಿತ್ರವನ್ನು ಕಲಾನಿಧಿ ಮಾರನ್ ಅವರ ಸನ್ ಪಿಕ್ಚರ್ಸ್ ನಿರ್ಮಿಸಿದೆ. ಈ ಚಿತ್ರದಲ್ಲಿ ನಾಗಾರ್ಜುನ, ಶ್ರುತಿ ಹಾಸನ್, ಉಪೇಂದ್ರ, ಸೌಬಿನ್ ಶಾಹಿರ್ ಮತ್ತು ಸತ್ಯರಾಜ್ ಪ್ರಮುಖ ಪಾತ್ರಗಳಲ್ಲಿದ್ದಾರೆ. ಅಮೀರ್ ಖಾನ್ ಈ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಕೂಲಿ ಚಿತ್ರವು ವಿಜಯ್ ಅವರ ಲಿಯೋ ಚಿತ್ರವನ್ನು ಹಿಂದಿಕ್ಕಲು ಸಾಧ್ಯವಾಗಲಿಲ್ಲ. ಲಿಯೋ ಬಿಡುಗಡೆಯಾದ ದಿನವೇ 66 ಕೋಟಿ ರೂ. ಗಳಿಕೆ ಕಂಡಿತ್ತು. ಕೂಲಿ ಚಿತ್ರ ವಾರಾಂತ್ಯದ ಲಾಭವನ್ನು ಪಡೆಯುವ ನಿರೀಕ್ಷೆಯಿದೆ.
—-





Pingback: androxal online in australia
Pingback: how to buy enclomiphene generic effectiveness
Pingback: buying xifaxan mastercard buy
Pingback: erectile dysfunction staxyn
Pingback: buy dutasteride no prescription online
Pingback: cena kamagra v obchodě s drogami