‘ಸು ಫ್ರಮ್ ಸೋ’ ವಿದೇಶದಲ್ಲೂ ಅಬ್ಬರ

ಭಾರತದಲ್ಲಿ ಹೊಸ ಅಲೆ ಸೃಷ್ಟಿಸಿದ ‘ಸು ಫ್ರಮ್ ಸೋ’ ಸಿನಿಮಾ ವಿದೇಶಗಳಲ್ಲೂ ಭರ್ಜರಿ ಪ್ರದರ್ಶನ ಕಾಣುತ್ತಿದೆ.

‘ಸು ಫ್ರಮ್ ಸೋ’ ಸಿನಿಮಾ ವಿದೇಶದಲ್ಲಿ ಆಗಸ್ಟ್ 1ರಿಂದ ರಿಲೀಸ್ ಆಗಿದೆ. ಕಳೆದ ಐದು ದಿನಗಳಲ್ಲಿ ಸಿನಿಮಾ  ಭಾರತೀಯ ರೂಪಾಯಿ ಪ್ರಕಾರ ಸುಮಾರು 4.38 ಕೋಟಿ ರೂ. ಕಲೆಕ್ಷನ್ ಮಾಡಿದೆ. 4 ಕೋಟಿ ರೂಪಾಯಿ ಬಜೆಟ್ ಸಿನಿಮಾ  ವಿದೇಶ ಒಂದರಲ್ಲೇ ಬಜೆಟ್​  ಮೀರಿದ ಕಲೆಕ್ಷನ್ ಮಾಡಿದೆ. ಈ ಚಿತ್ರ ಕರ್ನಾಟಕದ ಬಾಕ್ಸ್ ಆಫೀಸ್​​ನಲ್ಲಿ 42 ಕೋಟಿ ರೂ. ಕಲೆಕ್ಷನ್ ಮಾಡಿದೆ.

ಮಲಯಾಳಂ ಭಾಷೆಗೆ ಸಿನಿಮಾ ಡಬ್ ಆಗಿ ತೆರೆ ಕಂಡಿದೆ. ಇದರ ಜೊತೆಗೆ ಮುಂಬೈ, ಹೈದರಾಬಾದ್ ಮೊದಲಾದ ಕಡೆಗಳಲ್ಲಿ ಕನ್ನಡ ಭಾಷೆಯಲ್ಲಿ ಸಿನಿಮಾ ಪ್ರದರ್ಶನ ಕಾಣುತ್ತಿದೆ. ‘ಸು ಫ್ರಮ್ ಸೋ’  ಸಿನಿಮಾದ ಮೇಕಿಂಗ್ ಪ್ರೇಕ್ಷಕರಿಗೆ ಇಷ್ಟ ಆಗಿದೆ. ಹಳ್ಳಿಯ  ಕಥೆ ಮನಸ್ಸಿಗೆ ನಾಟುವಂತೆ ಇದೆ.  ಹಾಸ್ಯದ ಮೂಲಕ ಒಂದು ಗಂಭೀರ ವಿಚಾರವನ್ನು ನಿರ್ದೇಶಕರು ಹೇಳಿದ್ದಾರೆ.

ಜೆಪಿ ತುಮಿನಾಡ್ ಅವರು ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ಚಿತ್ರಕ್ಕೆ ರಾಜ್ ಬಿ. ಶೆಟ್ಟಿ ನಿರ್ಮಾಣ ಇದೆ.  ರಾಜ್ ಬಿ. ಶೆಟ್ಟಿ, ಜೆಪಿ ತುಮಿನಾಡ, ಪ್ರಕಾಶ್ ತುಮಿನಾಡ್, ದೀಪಕ್ ರೈ ಪಣಜೆ, ಸಂಧ್ಯಾ ಅರಕೆರೆ, ತನಿಷ್ಕಾ ಶೆಟ್ಟಿ, ಪುಷ್ಪರಾಜ್ ಬೋಳಾರ್ ಮೊದಲಾದವರು ಸಿನಿಮಾದಲ್ಲಿ ನಟಿಸಿದ್ದಾರೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!