ಕಾಮಿಡಿ ಕಿಲಾಡಿಗಳು ಖ್ಯಾತಿಯ ಚಂದ್ರಶೇಖರ್‌ ಸಿದ್ಧಿ ಆತ್ಮಹತ್ಯೆ

ಕಾಮಿಡಿ ಕಿಲಾಡಿಗಳು ಖ್ಯಾತಿಯ ಚಂದ್ರಶೇಖರ್‌ ಸಿದ್ಧಿ  (31)  ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗುರುವಾರ ಬೆಳಕಿಗೆ ಬಂದಿದೆ.

ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ವಜ್ರಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಮನಳ್ಳಿಯ ಸಿದ್ದಿ ಜನಾಂಗಕ್ಕೆ ಸೇರಿದ್ದ ಚಂದ್ರಶೇಖರ್‌ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಕಳೆದ 2-3 ತಿಂಗಳಿನಿಂದ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ಚಂದ್ರಶೇಖರ್ ಸಿದ್ದಿಗೆ ಕಾರವಾರದ ಕ್ರೀಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು ಎಂದು ತಿಳಿದು ಬಂದಿದೆ. ಆತ್ಮಹತ್ಯೆ ಬಗ್ಗೆ ಚಂದ್ರಶೇಖರ್ ತಾಯಿ ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಚಂದ್ರಶೇಖರ್ ಸಿದ್ಧಿ, ಕಬ್ಬಿಗೆ ಗ್ರಾಮಕ್ಕೆ ಪತ್ನಿಯೊಂದಿಗೆ ಕೆಲಸಕ್ಕೆಂದು ಹೋಗಿ ಅಲ್ಲೇ ಉಳಿದುಕೊಂಡಿದ್ದರು. ಮಗನನ್ನು ಶಾಲೆಯಿಂದ ಕರೆದುಕೊಂಡು ಮನೆಗೆ ಬಂದಿದ್ದ ಚಂದ್ರಶೇಖರ್ ಬಳಿಕ ಶೌಚಾಲಯಕ್ಕೆ ಹೋಗಿ ಬರುವುದಾಗಿ ಹೇಳಿ   ಮರಳಿ ಬಂದಿರಲಿಲ್ಲ. ಪತ್ನಿ ಹುಡುಕಾಡಿದಾಗ ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡು ಬಂದಿದೆ.

ಝೀ ಕನ್ನಡ ವಾಹಿನಿಯ ಕಾಮಿಡಿ ಕಿಲಾಡಿಗಳು ಶೋನಲ್ಲಿ ಕೆಲ ಕಾಲ ಕಾಣಿಸಿಕೊಂಡಿದ್ದ ಚಂದ್ರಶೇಖರ್‌ ಸಿದ್ಧಿ ಕೆಲ ಧಾರಾವಾಹಿಗಳಲ್ಲಿಯೂ   ನಟಿಸಿದ್ದರು. ಬಳಿಕ ಅವಕಾಶಗಳು ಸಿಗದೆ ಊರಿನ ಕಡೆ ಆಗಮಿಸಿದ್ದ ಚಂದ್ರಶೇಖರ್ ಕೂಲಿ ಮಾಡಿಕೊಂಡು ಜೀವನ ನಡೆಸುತ್ತಿದ್ದರು.

ಚಂದ್ರಶೇಖರ ಸಿದ್ಧಿ ಅವರು ನೀನಾಸಂ ಸಂಸ್ಥೆಯಲ್ಲಿ ನಟನೆಯನ್ನು ಕಲಿತಿದ್ದರು.   2020ರಲ್ಲಿ ಜೀ ಕನ್ನಡ ವಾಹಿನಿಯ ‘ಕಾಮಿಡಿ ಕಿಲಾಡಿಗಳು’ ಸೀಸನ್ 3 ಗೆ ಸ್ಪರ್ಧಿಯಾಗಿ ಎಂಟ್ರಿ ನೀಡಿದ್ದರು. ಅದು ಅವರಿಗೆ ಸಾಕಷ್ಟು ಜನಮನ್ನಣೆ ಸಿಕ್ಕಿತ್ತು.

—–

This Article Has 7 Comments
  1. Pingback: get androxal generic a canada

  2. Pingback: buy enclomiphene with saturday delivery

  3. Pingback: purchase xifaxan buy online no prescription

  4. Pingback: how to buy staxyn canada with no prescription

  5. Pingback: ordering dutasteride generic in canada

  6. Pingback: how to order fildena usa generic

  7. Pingback: kamagra žádné konzultace

Leave a Reply

Your email address will not be published. Required fields are marked *

Translate »
error: Content is protected !!