ಸಿನಿಮಾವಾಗ್ತಿದೆ ʼಧರ್ಮಸ್ಥಳ ಫೈಲ್ಸ್ʼ !

ದೇಶಾದ್ಯಂತ ಸಂಚಲನ ಸೃಷ್ಟಿಸುತ್ತಿರುವ ಧರ್ಮಸ್ಥಳದಲ್ಲಿ ಶವ ಹೂತಿಟ್ಟ ಪ್ರಕರಣವನ್ನು  ಸಿನಿಮಾ ರೂಪಕ್ಕೆ ಇಳಿಸುವ ಪ್ರಯತ್ನ ನಡೆಯುತ್ತಿರುವ ಬಗ್ಗೆ ಬ್ರೇಕಿಂಗ್‌ ನ್ಯೂಸ್‌ ಹೊರ ಬಿದ್ದಿದೆ.

ವಾಣಿಜ್ಯ ಮಂಡಳಿಯಲ್ಲಿ ಧರ್ಮಸ್ಥಳ ಫೈಲ್ಸ್ ಟೈಟಲ್ ರಿಜಿಸ್ಟರ್ ಮಾಡಲಾಗಿದೆ. ನಿರ್ಮಾಪಕ ಎ ಗಣೇಶ್ ಟೈಟಲ್‌ ರಿಜಿಸ್ಟರ್‌ ಮಾಡಿಸಿದ್ದು, ಧರ್ಮಸ್ಥಳ ಫೈಲ್ಸ್ ಟೈಟಲ್ ಫಿಲ್ಮ್ ಚೇಂಬರ್ ಅಫ್ರೂವಲ್ ಕೊಟ್ಟಿದೆ.

ಓಂ ಶ್ರೀ ಚಾಮುಂಡೇಶ್ವರಿ ಪ್ರೊಡಕ್ಷನ್ ನಡಿ ಧರ್ಮಸ್ಥಳ ಫೈಲ್ಸ್‌ ಸಿನಿಮಾ ತಯಾರಾಗ್ತಿದೆ. ಕೇರಳ ಫೈಲ್ಸ್, ಕಾಶ್ಮೀರಿ ಫೈಲ್ಸ್ ರೀತಿ ಸಿನಿಮಾ ಮಾಡೋ ಪ್ಲಾನ್‌ ನಡೀತಿದೆ. ಸದ್ಯದಲ್ಲಿ ಚಿತ್ರತಂಡ ಧರ್ಮಸ್ಥಳ ಫೈಲ್ಸ್‌ ಸಿನಿಮಾ ಬಗ್ಗೆ ಮಾಹಿತಿ ನೀಡಲಿದೆ.

ಧರ್ಮಸ್ಥಳ ಫೈಲ್ಸ್ ಸಿನಿಮಾವನ್ನು ಪ್ಯಾನ್ ಇಂಡಿಯಾ ಹಾಗೂ ವೆಬ್ ಸೀರೀಸ್ ಮಾಡೋದಾಗಿ ನಿರ್ಮಾಪಕ ಎ ಗಣೇಶ್‌ ತಿಳಿಸಿದ್ದಾರೆ.  ‘ಧರ್ಮಸ್ಥಳದ ನೈಜ ಘಟನೆ  ಆಧರಿಸಿ ಸಿನಿಮಾ ಮಾಡ್ತಿದ್ಧಿವಿ. ಈಗಾಗಲೇ ಎಂ ಎಸ್ ರಮೇಶ್ ಚಿತ್ರಕತೆ ಬರೆಯುತ್ತಿದ್ದಾರೆ. ಚಿತ್ರದ ಕತೆ ಫೈನಲ್ ಆದ ಮೇಲೆ ಶಿವರಾಜ್ ಕುಮಾರ್, ಸುದೀಪ್   ಅಪ್ರೋಚ್ ಮಾಡ್ತಿನಿ. ವೆಬ್ ಸೀರೀಸ್ ಗೆ ಮನೋಜ್ ಭಾಜಪೇಯಿ  ಅನ್ಕೋಂಡಿದ್ದೀನಿ. ಚಿತ್ರದ ನಿರ್ದೇಶಕರು ಯಾರು ಅಂತ  ಫೈನಲ್ ಆಗಿಲ್ಲ. ಕೇರಳ ಇಲ್ಲ ಮುಂಬೈ ನಿರ್ದೇಶಕರನ್ನು ಕರೆತರೊ ಅಲೋಚನೆಯಲ್ಲಿದ್ದೀನಿ’  ಎಂದು ಎ ಗಣೇಶ್ ಮಾಹಿತಿ ಕೊಟ್ಟಿದ್ದಾರೆ.

 

Be the first to comment

Leave a Reply

Your email address will not be published. Required fields are marked *

Translate »
error: Content is protected !!