‘ಬ್ರ್ಯಾಟ್’ ಅಕ್ಟೋಬರ್‌ನಲ್ಲಿ ಬಿಡುಗಡೆ

ಶಶಾಂಕ್ ನಿರ್ದೇಶನದ ‘ಬ್ರ್ಯಾಟ್’  ಚಿತ್ರ ಅಕ್ಟೋಬರ್‌ನಲ್ಲಿ ರಾಜ್ಯದಾದ್ಯಂತ ಚಿತ್ರಮಂದಿರಗಳಲ್ಲಿ ತೆರೆ ಕಾಣಲಿದೆ.

 ಡಾರ್ಲಿಂಗ್ ಕೃಷ್ಣ ‘ಬ್ರ್ಯಾಟ್’ ಚಿತ್ರಕ್ಕಾಗಿ  ‘ಕೌಸಲ್ಯಾ ಸುಪ್ರಜಾ ರಾಮ’ ಚಿತ್ರದ ನಿರ್ದೇಶಕ ಶಶಾಂಕ್ ಜೊತೆ ಮತ್ತೊಮ್ಮೆಒಂದಾಗಿದ್ದಾರೆ. ಬ್ರ್ಯಾಟ್ ಕನ್ನಡ, ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.

ಈ ಚಿತ್ರವು ತಂದೆ-ಮಗನ ಸಂಘರ್ಷದ ಸುತ್ತ ಸುತ್ತುತ್ತದೆ. ಹಿರಿಯ ನಟ ಅಚ್ಯುತ್ ಕುಮಾರ್ ತಂದೆಯ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಕನ್ನಡ ಚಿತ್ರರಂಗದ ಉದಯೋನ್ಮುಖ ತಾರೆ ಮನಿಶಾ ಕಂದಕೂರ್ ಮಧ್ಯಮ ವರ್ಗದ ಹುಡುಗಿಯಾಗಿ ಚಿತ್ರದಲ್ಲಿ ಅಭಿನಯಿಸಿದ್ದಾರೆ. ರಮೇಶ್ ಇಂದಿರಾ, ಡ್ರ್ಯಾಗನ್ ಮಂಜು, ತೇಜಸ್, ಗೌರವ್ ಶೆಟ್ಟಿ, ಸಂಚಿತ್ ಪ್ರಮುಖ ಪಾತ್ರಗಳಲ್ಲಿದ್ದಾರೆ.

 “ಸಾಮಾನ್ಯವಾಗಿ ಹದಿನಾರು ವರ್ಷದೊಳಗಿನ ಚೇಷ್ಟೆಯ ಹುಡುಗರಿಗೆ ಈ ಪದವನ್ನು ಹೆಚ್ಚಾಗಿ ಬಳಸಲಾಗುತ್ತದೆ. ನಮ್ಮ ಚಿತ್ರವು ಯುವಕರನ್ನು ಹೆಚ್ಚಾಗಿ ಪ್ರತಿನಿಧಿಸುತ್ತದೆ. ಹೀಗಾಗಿ ಚಿತ್ರಕ್ಕೆ ಈ ಶೀರ್ಷಿಕೆ ಸೂಕ್ತ ಎಂದು ತೀರ್ಮಾನಿಸಿದೆವು. ಈ ಚಿತ್ರ ಹಲವು ಭಾಷೆಗಳಲ್ಲಿ ಬಿಡುಗಡೆಯಾಗುವುದರಿಂದ BRAT ಎಲ್ಲಾ ಭಾಷೆಗಳಲ್ಲಿ ವಿಶಿಷ್ಟವಾಗಿ ಎದ್ದು ಕಾಣುತ್ತದೆ” ಎಂದು ಶಶಾಂಕ್ ಹೇಳಿದ್ದಾರೆ.

ಚಿತ್ರ ನಿರ್ಮಾಪಕ ಮಂಜುನಾಥ್ ಕಂದಕೂರ್.  ಛಾಯಾಗ್ರಹಣವನ್ನು ಅಭಿಲಾಷ್ ಕಲಾತಿ ನಿರ್ವಹಿಸಿದ್ದಾರೆ.

—–

This Article Has 1 Comment
  1. Pingback: buying enclomiphene australia price

Leave a Reply

Your email address will not be published. Required fields are marked *

Translate »
error: Content is protected !!